ಕರ್ನಾಟಕ

karnataka

ETV Bharat / bharat

ಆಟವಾಡುತ್ತಿದ್ದ ಮಗು ಬೀದಿನಾಯಿಗಳ ಅಟ್ಟಹಾಸಕ್ಕೆ ಬಲಿ - ಗಿರಿಡಿಹ್

ಆಟವಾಡುತ್ತಿದ್ದ ಮಗು ಕಾಣೆಯಾಗಿ, ಮರುದಿನ ಬೆಳಗ್ಗೆ ನದಿ ದಂಡೆಯಲ್ಲಿ ಮಗುವಿನ ಶವ ಪತ್ತೆಯಾಗಿರುವುದು ಹಲವಾರು ಸಂಶಯಗಳನ್ನು ಹುಟ್ಟುಹಾಕಿದೆ. ಬಹುಶಃ ಬೀದಿನಾಯಿಗಳೇ ತಮ್ಮ ಮಗುವನ್ನು ಕಚ್ಚಿ ಸಾಯಿಸಿವೆ ಎಂದು ಮಗುವಿನ ಕುಟುಂಬಸ್ಥರು ಸಂಶಯ ವ್ಯಕ್ತಪಡಿಸಿದ್ದಾರೆ.

Breaking News

By

Published : Jun 17, 2020, 4:42 PM IST

ಗಿರಿಡಿಹ್ (ಜಾರ್ಖಂಡ್​): ಬೀದಿನಾಯಿಗಳ ಗುಂಪೊಂದು ಎರಡೂವರೆ ವರ್ಷದ ಮಗುವನ್ನು ಕಚ್ಚಿ ಸಾಯಿಸಿರುವ ದಾರುಣ ಘಟನೆ ಇಲ್ಲಿ ನಡೆದಿದೆ. ಪಚಂಬಾ ಠಾಣೆ ವ್ಯಾಪ್ತಿಯ ಪಿಂಡಾಟಾಂಡ್​ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಬುಧವಾರ ಬೆಳಗ್ಗೆ ಉಸರಿ ನದಿಯಲ್ಲಿ ಮಗುವಿನ ಶವ ಪತ್ತೆಯಾಗಿದೆ. ಸುರೇಂದ್ರ ಪ್ರಸಾದ ವರ್ಮಾ ಎಂಬುವರ ಪುತ್ರ ಮಿಟ್ಟು ಕುಮಾರ ನಾಯಿದಾಳಿಗೆ ಬಲಿಯಾದ ಮಗುವಾಗಿದೆ.

ಮಂಗಳವಾರ ಸಂಜೆ ಸುರೇಂದ್ರ ಕುಮಾರ ಅವರ ಪತ್ನಿ ಹೊಲದಲ್ಲಿ ಕೆಲಸ ಮಾಡುತ್ತಿದ್ದರು. ಇದೇ ಸಮಯದಲ್ಲಿ ಹತ್ತಿರದಲ್ಲೇ ಆಟವಾಡುತ್ತಿದ್ದ ಮಗು ಮಿಟ್ಟು ಕುಮಾರ ಆಡುತ್ತ ದೂರ ಸಾಗಿದೆ. ಮಗು ಕಾಣದ್ದರಿಂದ ಗಾಬರಿಯಾದ ತಾಯಿ ಎಷ್ಟು ಹುಡುಕಿದರೂ ಮಗುವಿನ ಸುಳಿವು ಸಿಕ್ಕಿರಲಿಲ್ಲ. ಕುಟುಂಬಸ್ಥರೊಂದಿಗೆ ಗ್ರಾಮಸ್ಥರೂ ಮಗುವಿನ ಹುಡುಕಾಟ ನಡೆಸಿದರಾದರೂ ಮಗು ಪತ್ತೆಯಾಗಲಿಲ್ಲ. ಹೀಗಾಗಿ ರಾತ್ರಿ ಒಂಭತ್ತರ ಸುಮಾರಿಗೆ ಹತ್ತಿರದ ಪೊಲೀಸ್ ಠಾಣೆಗೆ ವಿಷಯ ಮುಟ್ಟಿಸಲಾಯಿತು. ರಾತ್ರಿಯೇ ಪೊಲೀಸರು ಆಗಮಿಸಿ ಹುಡುಕಾಟ ನಡೆಸಿದರಾದರೂ ಯಾವುದೇ ಫಲ ಸಿಗಲಿಲ್ಲ.

ಬುಧವಾರ ಬೆಳಗ್ಗೆ ಮೀನುಗಾರರು ನದಿಗೆ ತೆರಳಿದಾಗ ಮಿಟ್ಟು ಕುಮಾರನ ಶವ ನದಿ ದಂಡೆಯಲ್ಲಿ ತೇಲುತ್ತಿರುವುದು ಕಾಣಿಸಿದೆ. ಮೀನುಗಾರರು ತಕ್ಷಣ ಗ್ರಾಮದ ಮುಖ್ಯಸ್ಥನಿಗೆ ವಿಷಯ ತಿಳಿಸಿದ ನಂತರ ಪಚಂಬಾ ಠಾಣೆಯ ಪೊಲೀಸರಿಗೂ ತಿಳಿಸಲಾಯಿತು.

ಸ್ಥಳಕ್ಕಾಗಮಿಸಿದ ಪೊಲೀಸ್ ಅಧಿಕಾರಿ ಶರ್ಮಾನಂದ ಸಿಂಗ್ ಘಟನೆಯ ಪರಿಶೀಲನೆ ನಡೆಸಿ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಬಹುಶಃ ಬೀದಿನಾಯಿಗಳೇ ತಮ್ಮ ಮಗುವನ್ನು ಸಾಯಿಸಿವೆ ಎಂದು ಮಗುವಿನ ಕುಟುಂಬಸ್ಥರು ಸಂಶಯ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details