ಕರ್ನಾಟಕ

karnataka

ETV Bharat / bharat

ಇದೆಂಥಾ ಚೌಕಾಶಿ? ಮೂರು ದಿನ ಹೆಂಡ್ತಿ, ಮತ್ತೆ ಮೂರು ದಿನದ ಒಪ್ಪಂದದ ಕಥೆ ಕೇಳಿದ್ರೆ ದಂಗಾಗ್ತೀರಾ! - ಹೆಂಡತಿ ಜತೆ ಒಪ್ಪಂದ ಮಾಡಿಕೊಂಡ ಗಂಡ

ಗಂಡನೊಂದಿಗೆ ಪ್ರೀತಿಯ ಒಪ್ಪಂದ ಮಾಡಿಕೊಂಡಿದ್ದ ಹೆಂಡತಿ ಇದೀಗ ಸಂಕಷ್ಟಕ್ಕೆ ಸಿಲುಕಿರುವ ಘಟನೆ ನಡೆದಿದೆ.

Ranchi Sadar police station
ಗಂಡನೊಂದಿಗೆ ಪ್ರೀತಿ ಚೌಕಾಶಿ

By

Published : Jan 18, 2020, 11:59 PM IST

ರಾಂಚಿ:ಕಟ್ಟಿಕೊಂಡ ಗಂಡ ಬೇರೆಯವಳೊಂದಿಗೆ ಅಕ್ರಮ ಸಂಬಂಧ ಹೊಂದಿರುವ ಮಾಹಿತಿ ಗೊತ್ತಾಗುತ್ತಿದ್ದಂತೆ ಪತಿ ಜತೆ ಚೌಕಾಶಿ ನಡೆಸಿರುವ ಪತ್ನಿ ಇದೀಗ ಪೇಚಿಗೆ ಸಿಲುಕಿರುವ ಘಟನೆ ನಡೆದಿದೆ. ಪತಿ ಎರಡನೇ ಹೆಂಡ್ತಿ ಜತೆ ಪರಾರಿಯಾಗಿದ್ದು ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

ಗಂಡನೊಂದಿಗೆ ಪ್ರೀತಿ ಚೌಕಾಶಿ

ಬೇರೆ ಯುವತಿ ಜತೆ ಗಂಡ ಅಕ್ರಮ ಸಂಬಂಧ ಹೊಂದಿರುವ ವಿಚಾರ ಗೊತ್ತಾಗುತ್ತಿದ್ದಂತೆ ಕಟ್ಟಿಕೊಂಡ ಹೆಂಡತಿ ಜತೆ ಮೂರು ದಿನ ತನ್ನೊಂದಿಗೆ ಹಾಗೂ ಮತ್ತೋರ್ವಳೊಂದಿಗೆ(***) ಮೂರು ದಿನಗಳ ಕಾಲ ಸಂಸಾರ ನಡೆಸುವ ಒಪ್ಪಂದ ಮಾಡಿಕೊಳ್ಳುತ್ತಾಳೆ.

ಘಟನೆ ವಿವರ:

ರಾಂಚಿಯ ಸದರ್​ ಪೊಲೀಸ್ ಠಾಣೆಯಲ್ಲಿ ವಾಸವಾಗಿದ್ದ ರಾಜೇಶ್​ ಎಂಬ ವ್ಯಕ್ತಿ ಮದುವೆಯಾಗಿದ್ರೂ ಬೇರೆ ಮಹಿಳೆ ಜತೆ ಸಂಬಂಧವಿಟ್ಟುಕೊಂಡಿದ್ದ. ಜತೆಗೆ ಆಕೆಯ ಜತೆ ಡಿಸೆಂಬರ್​ 31ರಂದು ಮದುವೆಯಾಗಿ, ಸಂಸಾರ ನಡೆಸಲು ಮುಂದಾಗುತ್ತಾನೆ. ಆದರೆ ಈ ವಿಷಯ ಮೊದಲನೇ ಹೆಂಡ್ತಿ ಗಮನಕ್ಕೆ ಬರುತ್ತಿದ್ದಂತೆ ಇಬ್ಬರ ನಡುವೆ ಮೂರು ದಿನದ ಒಪ್ಪಂದ ನಡೆಯುತ್ತದೆ.

ಹೀಗೆ ಒಪ್ಪಂದವಾದ ಬಳಿಕ ಕಳೆದ ಐದು ದಿನಗಳಿಂದ ಗಂಡ ಮನೆಗೆ ಬರದ ಕಾರಣ ಪ್ರಕರಣ ಪೊಲೀಸ್ ಠಾಣೆ ತಲುಪಿದೆ. ಗಂಡ ಎರಡನೇ ಹೆಂಡತಿ ಜತೆ ಓಡಿ ಹೋಗಿದ್ದಾನೆಂದು ಆರೋಪಿಸಿ ಮೊದಲನೇ ಹೆಂಡ್ತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಓಡಿಹೋಗಿದ್ದ ಇಬ್ಬರನ್ನೂ ಠಾಣೆಗೆ ಕರೆದುಕೊಂಡು ಬರುವಲ್ಲಿ ಯಶಸ್ವಿಯಾಗಿದ್ದು, ಈ ವೇಳೆ ತಮಗೆ ಮೊದಲನೇ ಹೆಂಡ್ತಿ ಜತೆ ಸಂಸಾರ ನಡೆಸಲು ಆಗುವುದಿಲ್ಲ ಎಂದು ರಾಜೇಶ್ ಹೇಳಿಕೆ ನೀಡಿದ್ದಾರೆ.

ಮೊದಲನೇ ಹೆಂಡ್ತಿ ಮೇಲೆ ಪೊಲೀಸರು ಗರಂ!
ಈ ಹಿಂದೆ ಮೂರು ದಿನದ ಒಪ್ಪಂದ ಮಾಡಿಕೊಂಡಿರುವ ಹೆಂಡ್ತಿ ವಿರುದ್ಧ ಪೊಲೀಸರು ಆಕ್ರೋಶ ವ್ಯಕ್ತಪಡಿಸಿದ್ದು, ಯಾರಿಗೂ ಮಾಹಿತಿ ನೀಡದೇ ಈ ರೀತಿಯಾಗಿ ನಿರ್ಧಾರ ತೆಗೆದುಕೊಳ್ಳಲು ಕಾರಣ ಏನು ಎಂದು ಪ್ರಶ್ನಿಸಿದ್ದಾರೆ. ಜತೆಗೆ ಇದೀಗ ಯಾವ ರೀತಿಯಾಗಿ ಸಮಸ್ಯೆ ಬಗೆಹರಿಸಬೇಕು ಎಂಬುದು ಗೊತ್ತಾಗುತ್ತಿಲ್ಲ ಎಂದಿದ್ದಾರೆ.

ABOUT THE AUTHOR

...view details