ಕರ್ನಾಟಕ

karnataka

ETV Bharat / bharat

ಸಂವಿಧಾನ ರಚನಾ ಸಭೆಯ ಮೊದಲ ಹಂಗಾಮಿ ಅಧ್ಯಕ್ಷ ಸಚ್ಚಿದಾನಂದ... ಇವರ ಸಾಧನೆ ಗುಪ್ತಗಾಮಿನಿ..! - ಸಂವಿಧಾನ ರಚನಾ ಸಭೆಯ ಹಂಗಾಮಿ ಅಧ್ಯಕ್ಷ ಹುದ್ದೆಗೆ ಆಯ್ಕೆ

ಸಂವಿಧಾನ ರಚನಾ ಸಭೆಯ ಮೊದಲ ಹಂಗಾಮಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಡಾ.ಸಚ್ಚಿದಾನಂದ ಸಿನ್ಹಾ ಅವರು ಜೀವನ ಪಯಣ ಹೀಗಿದೆ...

Story of India's first Interim President of Constituent Assembly

By

Published : Nov 25, 2019, 1:28 PM IST

Updated : Nov 25, 2019, 4:50 PM IST

ಪಾಟ್ನಾ:ಕ್ರಿಯಾತ್ಮಕವಾದ ಭಾರತದ ಇತಿಹಾಸದಲ್ಲಿ 1946ರ ಡಿಸೆಂಬರ್ 9ರಂದು ಸಂವಿಧಾನ ರಚನಾ ಸಭೆ ನಡೆಯುತ್ತದೆ. ಅಂದು ಡಾ.ರಾಜೇಂದ್ರ ಪ್ರಸಾದ್ ಅವರು ಅಧ್ಯಕ್ಷರಾಗಿ ಆಯ್ಕೆಯಾಗುವ ಮುನ್ನ ಸದನದ ಹಿರಿಯರಾದ ಡಾ.ಸಚ್ಚಿದಾನಂದ ಸಿನ್ಹಾ ಎಂಬವರನ್ನು ಸಭೆಯ ಹಂಗಾಮಿ ಅಧ್ಯಕ್ಷರಾಗಿ ಅಂದಿನ ಕಾಂಗ್ರೆಸ್ ಅಧ್ಯಕ್ಷ ಆಚಾರ್ಯ ಜೆ.ಬಿ.ಕೃಪಲಾನಿ ಅವರು ಆಯ್ಕೆ ಮಾಡಿದ್ದರು ಎಂಬ ವಿಷಯ ಎಷ್ಟೋ ಜನರಿಗೆ ಈವರೆಗೂ ತಿಳಿದಿಲ್ಲ.

ಸಿನ್ಹಾ ಅವರನ್ನು ಸಂವಿಧಾನ ರಚನಾ ಸಭೆಯ ಹಂಗಾಮಿ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಅದೇ ವರ್ಷದ ಡಿಸೆಂಬರ್ 11ರಂದು ಚುನಾವಣೆ ಮುಖೇನ ಡಾ.ರಾಜೇಂದ್ರ ಪ್ರಸಾದ್ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗುತ್ತದೆ.

ಅಂಬೇಡ್ಕರ್​ ಜೊತೆ ಸಚ್ಚಿದಾನಂದ

ಸಚ್ಚಿದಾನಂದ ಸಿನ್ಹಾ ಅವರು 1871ರ ನವೆಂಬರ್ 10ರಂದು ಮಹರ್ಷಿ ವಿಶ್ವಾಮಿತ್ರರ ಮುರಾರ್ ಗ್ರಾಮವಾದ ಬಕ್ಸಾರ್​​​​ನಲ್ಲಿ ಜನಿಸಿದ್ದರು. ಅವರ ತಂದೆ ಬಕ್ಷಿ ಶಿವಪ್ರಸಾದ್ ಸಿನ್ಹಾ ಅವರು ಡುಮರಾವ್ ಮಹಾರಾಜರ ಆಡಳಿತಾವಧಿಯಲ್ಲಿ ಒಂದು ಪಟ್ಟಣದ ಮುಖ್ಯತಹಶಿಲ್ದಾರ್ ಆಗಿ ಸೇವೆ ಸಲ್ಲಿಸುತ್ತಿರುತ್ತಾರೆ. ಸ್ವಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಸಿನ್ಹಾ, ತನ್ನ 18ನೇ ವಯಸ್ಸಿನಲ್ಲಿ (1889ರ ಡಿಸೆಂಬರ್ 26ರಂದು) ಕಾನೂನು ಅಧ್ಯಯನಕ್ಕಾಗಿ ಇಂಗ್ಲೆಂಡ್​​ಗೆ ತೆರಳಿದರು. ಕಾನೂನು ಪದವಿ ಮುಗಿಸಿದ ಭಾರತಕ್ಕೆ ಮರಳಿದ ಅವರು, 1893ರಲ್ಲಿ ಕೋಲ್ಕತ್ತಾ ಹೈಕೋರ್ಟ್‌ನಲ್ಲಿ ವಕೀಲ ವೃತ್ತಿ ಆರಂಭಿಸುತ್ತಾರೆ. ನಂತರ ಅಲಹಾಬಾದ್ ಹೈಕೋರ್ಟ್‌ನಲ್ಲಿ ಹತ್ತು ವರ್ಷಗಳ ಕಾಲ ವಕಾಲತ್ತು ವಹಿಸಿದ್ದರು. ಅಷ್ಟೇ ಅಲ್ಲದೆ, ಅನೇಕ ವರ್ಷಗಳ ಕಾಲ ಭಾರತೀಯ ಪೀಪಲ್ಸ್ ಮತ್ತು ಹಿಂದೂಸ್ತಾನ್ ರಿವ್ಯೂ ಪತ್ರಿಕೆಗಳ ಸಂಪಾದಕತ್ವದ ಜವಾಬ್ದಾರಿ ನಿಭಾಯಿಸಿದ್ದರು.

ಸಂವಿಧಾನ ರಚನಾ ಸಭೆಯ ಹಂಗಾಮಿ ಅಧ್ಯಕ್ಷ ಹುದ್ದೆಗೆ ಆಯ್ಕೆ

1946ರಲ್ಲಿ ಬ್ರಿಟಿಷ್ ಸಂಸತ್ತು ಭಾರತಕ್ಕೆ ಸ್ವಾತಂತ್ರ್ಯ ನೀಡುವುದಾಗಿ ಘೋಷಿಸಿತ್ತು. ಅದೇ ವರ್ಷದ ಡಿಸೆಂಬರ್ 9ರಂದು ದೇಶದ ಪ್ರತಿಯೊಂದು ಪ್ರದೇಶದ ಚುನಾಯಿತ ಪ್ರತಿನಿಧಿಗಳು ದೆಹಲಿಯ ಸಂವಿಧಾನ ಭವನದಲ್ಲಿ ಒಗ್ಗೂಡಿದ್ದರು. ಅವರಲ್ಲಿ ಹೆಚ್ಚಿನವರು ಸ್ವಾತಂತ್ರ್ಯ ಹೋರಾಟಗಾರರು. ಆಗಿನ ಕಾಂಗ್ರೆಸ್ ಅಧ್ಯಕ್ಷ ಆಚಾರ್ಯ ಜೆ.ಬಿ.ಕೃಪಲಾನಿ ಅವರು ಮಧ್ಯಂತರ ಅಧ್ಯಕ್ಷ ಸ್ಥಾನಕ್ಕಾಗಿ ಡಾ.ಸಚ್ಚಿದಾನಂದ ಸಿನ್ಹಾ ಹೆಸರನ್ನು ಪ್ರಸ್ತಾಪಿಸಿ, ಅವರನ್ನೇ ಸಂವಿಧಾನ ರಚನಾ ಸಭೆಯ ಹಂಗಾಮಿ ಅಧ್ಯಕ್ಷರನ್ನಾಗಿ ಒಮ್ಮತದಿಂದ ಎಲ್ಲರೂ ಆಯ್ಕೆ ಮಾಡಿದ್ದರು.

ಡಾ. ಸಚ್ಚಿದಾನಂದ ಸಿನ್ಹಾ

ಅಮೆರಿಕ, ಚೀನಾ ಮತ್ತು ಆಸ್ಟ್ರೇಲಿಯಾ ಸರ್ಕಾರಗಳ ಅಭಿಮಾನದ ಸಂದೇಶಗಳನ್ನು ಓದಿದ ನಂತರ ಸಿನ್ಹಾ ಅವರು, ವಿಶ್ವದ ವಿವಿಧ ಸಾಂವಿಧಾನಿಕ ವ್ಯವಸ್ಥೆಗಳ ಅಂಶಗಳನ್ನು ಅಧ್ಯಯನ ಮಾಡಿ ದೇಶದ ಮುಕ್ತ ಮತ್ತು ಸ್ವತಂತ್ರ ಸಂವಿಧಾನ ಸಿದ್ಧಪಡಿಸುವ ಹಿತದೃಷ್ಟಿಯಿಂದ ಅವುಗಳ ವೈಶಿಷ್ಟ್ಯಗಳನ್ನು ಉಲ್ಲೇಖಿಸಿದ್ದರು.

ಖುದಾಬಕ್ಷ್ ಗ್ರಂಥಾಲಯ

ಸಿನ್ಹಾ 1894ರಲ್ಲಿ ಅಲಹಾಬಾದ್ ಹೈಕೋರ್ಟ್‌ನಲ್ಲಿ ಅಭ್ಯಾಸ ಮಾಡುವಾಗ ನ್ಯಾಯಮೂರ್ತಿ ಖುದಾಬಕ್ಷ್ ಖಾನ್ ಅವರ ಸಾಮೀಪ್ಯ ಗಳಿಸಿದ್ದರು. ಖುದಾಬಕ್ಷ್ 1891ರ ಅಕ್ಟೋಬರ್ 29ರಂದು ಪಾಟ್ನಾದಲ್ಲಿ ತಮ್ಮದೆಯಾದ ಒಂದು ಗ್ರಂಥಾಲಯ ಸ್ಥಾಪಿಸಿದ್ದರು. ಇಂದು ಅದು ಭಾರತದ ಅತ್ಯಂತ ಹಳೆಯ ಗ್ರಂಥಾಲಯಗಳಲ್ಲಿ ಒಂದಾಗಿದೆ. ಖಾನ್ ಅವರನ್ನು ಹೈದರಾಬಾದ್​​​ ಹೈಕೋರ್ಟ್​​​ ವರ್ಗಾಯಿಸಿದ್ದಾಗ, ಸಿನ್ಹಾ ಗ್ರಂಥಾಲಯದ ಜವಾಬ್ದಾರಿ ವಹಿಸಿಕೊಂಡರು. 1894- 1898 ಅವಧಿಯಲ್ಲಿ ಖುದಾಬಕ್ಷ್ ಗ್ರಂಥಾಲಯದ ಕಾರ್ಯದರ್ಶಿಯೂ ಆಗಿದ್ದರು.

ಬಂಗಾಳದಿಂದ ಬಿಹಾರ ಬೇರ್ಪಡಿಸಿದ್ದು

ಬಂಗಾಳದಿಂದ ಬಿಹಾರವನ್ನು ಬೇರ್ಪಡಿಸುವಲ್ಲಿ ಸಚ್ಚಿದಾನಂದ್ ಸಿನ್ಹಾ ಪ್ರಮುಖ ಪಾತ್ರ ವಹಿಸಿದ್ದರು. ಅದಕ್ಕಾಗಿ ಪತ್ರಿಕೋದ್ಯಮವನ್ನು ತಮ್ಮ ಬಹುದೊಡ್ಡ ಅಸ್ತ್ರವನ್ನಾಗಿ ಬಳಸಿಕೊಂಡರು. ಆ ದಿನಗಳಲ್ಲಿ 'ದಿ ಬಿಹಾರ' ಹೆರಾಲ್ಡ್ ಪತ್ರಿಕೆ ಮಾತ್ರ ಕಾರ್ಯನಿರ್ವಹಿಸುತ್ತಿತ್ತು. ಗುರುಪ್ರಸಾದ್ ಸೇನ್ ಎಂಬವರು ಇದರ ಸಂಪಾದಕರಾಗಿದ್ದರು. 1894ರಲ್ಲಿ ಸಿನ್ಹಾ ಅವರು 'ದಿ ಬಿಹಾರ ಟೈಮ್ಸ್' ಎಂಬ ಇಂಗ್ಲಿಷ್ ಪತ್ರಿಕೆ ಹೊರತಂದರು. ಅದು 1906ರ ನಂತರ 'ಬಿಹಾರಿ' ಎಂದು ಬದಲಾಯಿತು. ಸಚ್ಚಿದಾನಂದ್ ಸಿನ್ಹಾ ಅವರು ಮಹೇಶ್ ನಾರಾಯಣ್ ಅವರೊಂದಿಗೆ ಹಲವು ವರ್ಷಗಳ ಕಾಲ ಈ ಪತ್ರಿಕೆಯ ಸಂಪಾದಕರಾಗಿದ್ದರು.

ಸಂವಿಧಾನ

ಈ ಪತ್ರಿಕೆಯ ಮೂಲಕ ಬಿಹಾರದ ಪ್ರತ್ಯೇಕ ರಾಜ್ಯದ ಅಭಿಯಾನ ಆರಂಭಿಸಿದ್ದರು. ಹಿಂದೂ ಮತ್ತು ಮುಸ್ಲಿಮರನ್ನು ಬಿಹಾರ ಹೆಸರಿನಲ್ಲಿ ಒಗ್ಗೂಡಿಸುವ ಪ್ರಯತ್ನ ಮಾಡಿದ್ದರು. ಅವರ ಅವಿರತ ಪರಿಶ್ರಮದ ಫಲವಾಗಿ 1905ರ ಜುಲೈ 19ರಂದು ಬಿಹಾರ ಬಂಗಾಳದಿಂದ ಬೇರ್ಪಟ್ಟಿತು.

ಸಿನ್ಹಾ ಗ್ರಂಥಾಲಯ

ಸಚ್ಚಿದಾನಂದ ಸಿನ್ಹಾ ಅವರು ತನ್ನ ಪತ್ನಿ ರಾಧಿಕಾ ಸಿನ್ಹಾ ಅವರ ಸ್ಮರಣಾರ್ಥವಾಗಿ 1924ರಲ್ಲಿ ಸಿನ್ಹಾ ಗ್ರಂಥಾಲಯಕ್ಕೆ ಅಡಿಪಾಯ ಹಾಕಿದರು. ಜನರ ಮಾನಸಿಕ, ಬೌದ್ಧಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಗಾಗಿ ಅದನ್ನು ಸ್ಥಾಪಿಸಿದರು. 1926ರ ಮಾರ್ಚ್ 10ರಂದು ಗ್ರಂಥಾಲಯದ ಚಾಲನೆಗಾಗಿ ಟ್ರಸ್ಟ್ ಅನ್ನು ಸ್ಥಾಪಿಸಲಾಯಿತು. ಅಂದಿನ ಮುಖ್ಯನ್ಯಾಯಮೂರ್ತಿ, ಮುಖ್ಯಮಂತ್ರಿ, ಶಿಕ್ಷಣ ಸಚಿವರು, ಪಾಟ್ನಾ ವಿಶ್ವವಿದ್ಯಾಲಯದ ಉಪಕುಲಪತಿ ಸೇರಿದಂತೆ ಹಲವು ಗಣ್ಯರನ್ನು ಟ್ರಸ್ಟ್​​​ನ ಆಜೀವ ಸದಸ್ಯರನ್ನಾಗಿ ನೇಮಿಸಲಾಯಿತು. ಸಿನ್ಹಾ ಅವರು ಲಂಡನ್​​​ನಲ್ಲಿ ಕಾನೂನು ವ್ಯಾಸಾಂಗ ಮತ್ತು ವಕೀಲರಾಗಿ ಕಾರ್ಯನಿರ್ವಹಿಸಲು ಬಯಸಿದ್ದರು. ಆದರೆ, ಅವರ ಪೋಷಕರು ಅವರನ್ನು ಅಲ್ಲಿಗೆ ಕಳುಹಿಸಲು ಇಷ್ಟವಿರಲಿಲ್ಲ. ಸಿನ್ಹಾ ಅವರ ಒತ್ತಾಯಕ್ಕೆ ಮಣಿದು ಕೊನೆಗೆ ಒಪ್ಪಿದರು. ಲಂಡನ್‌ನಿಂದ ಹಿಂದಿರುಗಿದ ನಂತರ ಸಿನ್ಹಾ ಬಿಹಾರದ ಪ್ರತ್ಯೇಕ ಪ್ರಾಂತ್ಯಕ್ಕಾಗಿ ಸಣ್ಣ ಗುಂಪು ಕಟ್ಟಿಕೊಂಡು ಚಳವಳಿ ಆರಂಭಿಸಿದ್ದರು ಎಂದು ನೆನಪಿಸುತ್ತಾರೆ ಗ್ರಂಥಾಲಯದ ಕೆಲಸಗಾರ ಸಂಜಯ್ ಕುಮಾರ್.

ಸಿನ್ಹಾ ಬದುಕಿನ ಕೊನೆಯ ದಿನಗಳು

ಸಿನ್ಹಾ 1950ರ ಮಾರ್ಚ್ 6ರಂದು ಬಿಹಾರದ ಪಾಟ್ನಾದಲ್ಲಿ ನಿಧನರಾದರು. ಡಾ.ರಾಜೇಂದ್ರ ಪ್ರಸಾದ್ ಅವರು ದಿ.ಡಾ.ಸಿನ್ಹಾ ಮತ್ತು ಅವರ ಪತ್ನಿ ದಿ.ರಾಧಿಕಾ ಸಿನ್ಹಾ ಅವರ ಭಾವಚಿತ್ರಗಳನ್ನು ಅನಾವರಣಗೊಳಿಸಿದ್ದರು. ರಾಧಿಕಾ ಸಿನ್ಹಾ ಅವರು ಸಾಯುವ ಕೆಲವು ದಿನಗಳ ಮೊದಲು, ರಾಜೇಂದ್ರ ಪ್ರಸಾದ್ ಅವರು ಪಾಟ್ನಾಕ್ಕೆ ಮೂರು ದಿನ ಭೇಟಿ ನೀಡಿದ್ದರು. 'ಡಾ.ಸಿನ್ಹಾ ಓರ್ವ ಬೌದ್ಧಿಕವಾಗಿ ದೈತ್ಯ ಮತ್ತು ಆಧುನಿಕ ಬಿಹಾರದ ಪಿತಾಮಹ' ಎಂದು ಬಣ್ಣಿಸಿದ್ದರು. ಸಚ್ಚಿದಾನಂದ ಸಿನ್ಹಾ ಅವರ ಪರಿಶ್ರಮ ಹಾಗೂ ಮುಂದಾಲೋಚನೆಯಿಂದಾ ಪ್ರತ್ಯೇಕ ಬಿಹಾರ ಅಸ್ತಿತ್ವಕ್ಕೆ ಬಂದಿತು ಎಂದು ಸಮಾಜ ಸೇವಕ ಅನೀಶ್ ಅಂಕುರ್ ಸ್ಮರಿಸಿದರು.

ಡಾ.ಸಚ್ಚಿದಾನಂದ ಸಿನ್ಹಾ

ಸಚ್ಚಿದಾನಂದ ಸಿನ್ಹಾ ಅವರ ವಿದ್ವತ್ಪೂರ್ಣ ಬುದ್ಧಿವಂತಿಕೆಯಿಂದಾಗಿ ಸಂವಿಧಾನ ಸಭೆಯ ಹಂಗಾಮಿ ಅಧ್ಯಕ್ಷರಾಗಿ ಆಯ್ಕೆಯಾದರು. ಅವರೂ ಕೂಡ ಸಂವಿಧಾನವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಪತ್ರಕರ್ತ ಮತ್ತು ಬರಹಗಾರ ಅರುಣ್ ಸಿಂಗ್ ಶ್ಲಾಘಿಸಿದರು.

ಪಾಟ್ನಾ ವಿಶ್ವವಿದ್ಯಾಲಯದ ಉಪಕುಲಪತಿಗಳಲ್ಲಿ ಒಬ್ಬರಾಗಿದ್ದು, 1936 ರಿಂದ 1944 ರವರೆಗೆ ಈ ಹುದ್ದೆಯಲ್ಲಿದ್ದರು. ಬಿಹಾರ ಮತ್ತು ಒರಿಸ್ಸಾ ವಿಧಾನ ಪರಿಷತ್ತಿನಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಬಿಹಾರ ಸರ್ಕಾರದ ಕಾರ್ಯನಿರ್ವಾಹಕ ಕೌನ್ಸಿಲರ್ ಮತ್ತು ಹಣಕಾಸು ಸದಸ್ಯರಾಗಿ ಅವರನ್ನು ನೇಮಕ ಮಾಡಲಾಗಿತ್ತು.

Last Updated : Nov 25, 2019, 4:50 PM IST

ABOUT THE AUTHOR

...view details