ಪಾಲಕ್ಕಾಡ್ (ಕೇರಳ): ಕಳೆದ ಎರಡೂವರೆ ದಶಕಗಳಿಂದ ಈ ವ್ಯಕ್ತಿಯ ಜೀವನ ಹಾವುಗಳ ಮಧ್ಯೆಯೇ ಸಾಗಿದೆ. ಕೇರಳದ ಪಾಲಕ್ಕಾಡ್ ಜಿಲ್ಲೆಯ ಚೆರುಪುಲಶೇರಿಯ ಬಿನೀಶ್ ಅದೆಂಥದ್ದೇ ಹಾವಾಗಿರಲಿ ಅದು ಇವರ ಮುಂದೆ ತಲೆಬಾಗುತ್ತದೆ. ಈ ಪ್ರದೇಶದಲ್ಲಿ ಸಾಮಾನ್ಯವಾಗಿ ಕಂಡು ಬರುವ ನಾಗರಹಾವು, ಕಾಳಿಂಗ ಸರ್ಪ ಸೇರಿದಂತೆ ವಿವಿಧ ವಿಷ ಪೂರಿತ ಹಾವುಗಳನ್ನು ಹಿಡಿಯುವುದೇ ಇವರ ಕಾಯಕವಾಗಿದೆ.
ಬಿನೀಶ್ ಏಳನೇ ತರಗತಿಯ ವಿದ್ಯಾರ್ಥಿಯಾಗಿದ್ದಾಗಲೇ ಹಾವುಗಳತ್ತ ಆಕರ್ಷಣೆಗೊಂಡರು. ಬಳಿಕ ಇವರ ವಯಸ್ಸಿನ ಜೊತೆಗೆ ಸರೀಸೃಪಗಳ ಬಗ್ಗೆ ವ್ಯಾಮೋಹವೂ ಬೆಳೆಯುತ್ತಾ ಸಾಗಿತು. ಹಾವು ಹಿಡಿಯುವವನ ಮುಂದೆ ವಿಷಪೂರಿತ ನಾಗರಹಾವು ಶರಣಾಗುವುದನ್ನು ನೋಡಿದಾಗ, ಉರಗ ರಕ್ಷಕರು ಮತ್ತು ಅವರ ಸಾಮರ್ಥ್ಯದ ಬಗ್ಗೆ ಬಿನೀಶ್ಗೆ ಅಚ್ಚರಿಯಾಗುತ್ತಿತ್ತು. ನಂತರ, ಹಾವು ಹಿಡಿಯುವವರ ಬಗ್ಗೆ ಮೆಚ್ಚುಗೆಯುಂಟಾಯಿತು. ನಂತರ ಬಿನೇಶ್ ಹಾವುಗಳನ್ನು ಹಿಡಿಯುವ ಕಲೆಯನ್ನು ಕರಗತ ಮಾಡಿಕೊಳ್ಳಲು ಆರಂಭಿಸಿದರು.
ಬಿನೀಶ್ ಹಾವು ಹಿಡಿಯುವವರ ಬಳಿ ತರಬೇತಿ ಪಡೆಯಲು ನಿರ್ಧರಿಸಿದರು. ಕ್ರಮೇಣ ಹಾವು ಹಿಡಿಯುವವರಿಂದ ಅನೇಕ ಸಲಹೆಗಳು ಮತ್ತು ತಂತ್ರಗಳನ್ನು ಕಲಿತರು. ಈ ಕ್ಷೇತ್ರದಲ್ಲಿ ಬಿನೀಶ್, ಕೊಯಮತ್ತೂರು ಮೂಲದ ಪಾರ್ಥಸಾರಥಿಯಿಂದ ಪ್ರಭಾವಿತರಾದರು. ಬಿನೀಶ್ ಇದುವರೆಗೆ ಹತ್ತಾರು ಹಾವುಗಳನ್ನು ರಕ್ಷಿಸಿದ್ದಾರೆ. ಅವರು 100ಕ್ಕೂ ಹೆಚ್ಚು ವಿಷ ಸರ್ಪಗಳನ್ನು ಸೆರೆಹಿಡಿದು ಕಾಡಿನಲ್ಲಿ ಬಿಟ್ಟಿದ್ದಾರೆ.