ಹೈದರಾಬಾದ್: ಮಕ್ಕಳಿಗೆ ಕೊರೊನಾ ಅರ್ಥಮಾಡಿಕೊಳ್ಳಲು ಸಹಾಯವಾಗುವಂತೆ ಹೊಸ ಕಥೆ ಪುಸ್ತಕವನ್ನು ವಿಶ್ವ ಆರೋಗ್ಯ ಸಂಸ್ಥೆ, ವಿಶ್ವಸಂಸ್ಥೆಯ ಮಕ್ಕಳು ಸೇರಿದಂತೆ ಮಾನವೀಯ ವಲಯದಲ್ಲಿ ಕೆಲಸ ಮಾಡುವ 50ಕ್ಕೂ ಹೆಚ್ಚು ಸಂಸ್ಥೆಗಳ ಸಹಯೋಗದಿಂದ ತಯಾರಿಸಲಾಗಿದೆ.
ಮಕ್ಕಳಿಗಾಗಿ ಬಿಡುಗಡೆಗೊಂಡಿದೆ ಕೊರೊನಾ ಬಗೆಗಿನ ಪುಸ್ತಕ.. - My Hero is You, How Kids can fight COVID-19
ಸಾಧ್ಯವಾದಷ್ಟು ಮಕ್ಕಳನ್ನು ತಲುಪಲು ಈಗಾಗಲೇ ಆರು ಭಾಷೆಗಳಿಗೆ ಅನುವಾದಿಸಲಾಗಿದೆ. ಇನ್ನೂ ಮೂವತ್ತು ಭಾಷೆಗಳಿಗೆ ಅನುವಾದಿಸುವ ಕಾರ್ಯ ಪ್ರಗತಿಯಲ್ಲಿದೆ. ಇದನ್ನು ಆನ್‌ಲೈನ್ ಉತ್ಪನ್ನ ಮತ್ತು ಆಡಿಯೋ ಬುಕ್ ಆಗಿ ಬಿಡುಗಡೆ ಮಾಡಲಾಗುತ್ತಿದೆ.
‘ಮೈ ಹೀರೋ ಈಸ್ ಯು, ಮಕ್ಕಳು ಹೇಗೆ ಕೋವಿಡ್-19 ವಿರುದ್ಧ ಹೋರಾಡಬಹುದು!’ ("My Hero is You, How Kids can fight COVID-19!") ಎಂಬ ಹೆಸರಿನ ಪುಸ್ತಕವನ್ನು ರಚಿಸಲಾಗಿದೆ. ಈ ಕಥೆ ಆರಿಯೊ ಎಂಬ ಪ್ರಾಣಿಯನ್ನು ಒಳಗೊಂಡಿದೆ. ಈ ಮೂಲಕವೇ ಮಕ್ಕಳಿಗೆ ಕೊರೊನಾ ವೈರಸ್ ಹರಡುವಿಕ, ಮುನ್ನೆಚ್ಚರಿಕೆ ಮತ್ತು ಮಾನವೀಯ ವ್ಯವಹಾರಗಳ ಕುರಿತು ವಿವರಿಸಲಾಗಿದೆ.
ವಿಶ್ವಸಂಸ್ಥೆಯ ಕಚೇರಿಯ ಭಾಗವಾಗಿರುವ ಇಂಟರ್-ಏಜೆನ್ಸಿ ಸ್ಥಾಯಿ ಸಮಿತಿಯಿಂದ (ಐಎಎಸ್ಸಿ) ಪುಸ್ತಕ ಬಿಡುಗಡೆ ಮಾಡಲಾಗಿದೆ. ಈ ಪುಸ್ತಕವು 6 ರಿಂದ 11ವರ್ಷ ವಯಸ್ಸಿನ ಮಕ್ಕಳನ್ನು ಗುರಿಯಾಗಿಸಿಕೊಂಡು ರಚನೆಯಾಗಿದೆ. ಸಾಧ್ಯವಾದಷ್ಟು ಮಕ್ಕಳನ್ನು ತಲುಪಲು ಈಗಾಗಲೇ ಆರು ಭಾಷೆಗಳಿಗೆ ಅನುವಾದಿಸಲಾಗಿದೆ. ಇನ್ನೂ ಮೂವತ್ತು ಭಾಷೆಗಳಿಗೆ ಅನುವಾದಿಸುವ ಕಾರ್ಯ ಪ್ರಗತಿಯಲ್ಲಿದೆ. ಇದನ್ನು ಆನ್‌ಲೈನ್ ಉತ್ಪನ್ನ ಮತ್ತು ಆಡಿಯೋ ಬುಕ್ ಆಗಿ ಬಿಡುಗಡೆ ಮಾಡಲಾಗುತ್ತಿದೆ.
TAGGED:
ಕೊರೊನಾ ಬಗೆಗಿನ ಪುಸ್ತಕ