ಡೈಮಂಡ್ ಹಾರ್ಬರ್: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಬೆಂಗಾಲು ವಾಹನದ ಮೇಲೆ ಕಲ್ಲೆಸೆಯಲಾಗಿದೆ. ಕೋಲ್ಕತ್ತಾದಿಂದ ಡೈಮಂಡ್ ಹಾರ್ಬರ್ ಪ್ರದೇಶಕ್ಕೆ ತೆರಳುತ್ತಿದ್ದಾಗ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.
ಘಟನೆಯಿಂದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯಾ ಅವರ ಕಾರಿಗೆ ಹಾನಿಯಾಗಿದೆ ಎಂದು ಎಂದು ಕೇಸರಿ ಪಕ್ಷದ ಮೂಲಗಳು ತಿಳಿಸಿವೆ. ಕೆಲ ಮಾಧ್ಯಮಗಳ ವಾಹನಗಳಿಗೂ ಕಲ್ಲೆಸೆಯಲಾಗಿದೆ ಎಂದು ತಿಳಿದು ಬಂದಿದೆ.
ಜೆ.ಪಿ ನಡ್ಡಾ ಬೆಂಗಾವಲು ವಾಹನದ ಮೇಲೆ ಕಲ್ಲೆಸೆತ ಓದಿ: ಟೋಲ್ ಸಿಬ್ಬಂದಿಗೆ ವೈಎಸ್ಆರ್ಸಿಪಿ ಮುಖಂಡೆಯಿಂದ ಕಪಾಳಮೋಕ್ಷ - ವಿಡಿಯೋ ನೋಡಿ
ನಾವು ಡೈಮಂಡ್ ಹಾರ್ಬರ್‌ಗೆ ಹೋಗುವಾಗ, ಟಿಎಂಸಿ ಬೆಂಬಲಿಗರು ರಸ್ತೆ ತಡೆದು ನಡ್ಡಾಜಿ ಮತ್ತು ಅವರ ಬೆಂಗಾವಲು ವಾಹನಗಳ ಮೇಲೆ ಕಲ್ಲೆಸೆದಿದ್ದಾರೆ. ಬಳಿಕ ಪೊಲೀಸರು ಬಂದು ರಕ್ಷಣೆ ನೀಡಿದರು. ಇದು ಟಿಎಂಸಿಯ ನಿಜ ಬಣ್ಣವನ್ನು ಬಯಲು ಮಾಡುತ್ತದೆ ಎಂದು ಪಶ್ಚಿಮ ಬಂಗಾಳ ಬಿಜೆಪಿ ಮುಖ್ಯಸ್ಥ ದಿಲೀಪ್ ಘೋಷ್ ತಿಳಿಸಿದ್ದಾರೆ.
ಇಂದಿನ ಪರಿಸ್ಥಿತಿಯನ್ನು ನೋಡಿದರೆ, ಪಶ್ಚಿಮ ಬಂಗಾಳದಲ್ಲಿ ತಕ್ಷಣವೇ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಬೇಕು ಎಂದು ಪಶ್ಚಿಮ ಬಂಗಾಳ ರಾಜ್ಯ ಬಿಜೆಪಿ ಉಪಾಧ್ಯಕ್ಷ ಮುಕುಲ್ ರಾಯ್ ಆಗ್ರಹಿಸಿದ್ದಾರೆ.