ಶ್ರೀನಗರ:ಪ್ರತಿಭಟನಾಕಾರರು ಭಾನುವಾರದಂದು ಟ್ರಕ್ ಚಾಲಕನನ್ನು ಕಲ್ಲು ತೂರಾಟ ನಡೆಸಿ ಕೊಲೆ ಮಾಡಿದ ಪರಿಣಾಮ ಸದ್ಯ ಅನಂತ್ನಾಗ್ ಜಿಲ್ಲೆಯಲ್ಲಿ ಪರಿಸ್ಥಿತಿ ಕೊಂಚ ಉದ್ವಿಗ್ನವಾಗಿದೆ.
ಕಾಶ್ಮೀರದಲ್ಲಿ ಟ್ರಕ್ ಚಾಲಕನ ಕೊಲೆ ಪ್ರಕರಣ.. ಇಬ್ಬರ ಬಂಧನ, ಆರು ಮಂದಿ ವಶಕ್ಕೆ - ಅನಂತ್ನಾಗ್ ಜಿಲ್ಲೆಯಲ್ಲಿ ಕೊಲೆ
ಟ್ರಕ್ ಚಾಲಕನ ಹತ್ಯೆಯ ಪ್ರಕರಣದಲ್ಲಿ ಜಮ್ಮು-ಕಾಶ್ಮೀರ ಪೊಲೀಸರು ಇಬ್ಬರನ್ನು ಬಂಧಿಸಿ ಆರು ಮಂದಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಸದ್ಯ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಜಮ್ಮು-ಕಾಶ್ಮೀರ ಪೊಲೀಸರು ಘಟನೆ ಸಂಬಂಧ ಇಬ್ಬರನ್ನು ಬಂಧನ ಮಾಡಲಾಗಿದೆ. ಜೊತೆಗೆ ಇದೇ ಘಟನೆಯಲ್ಲಿ ಆರು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಬಂಧಿತರನ್ನು ತೀವ್ರ ವಿಚಾರಣೆ ಮಾಡಲಾಗುತ್ತಿದ್ದು, ಪ್ರಾಥಮಿಕ ವಿಚಾರಣೆಯಲ್ಲಿ ಬಂಧಿತರಿಗೆ ಯಾವುದೇ ಅಪರಾಧದ ಹಿನ್ನೆಲೆ ಇಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.42 ವರ್ಷದ ಝ್ರಾಡಿಪೋರಾ ನಿವಾಸಿಯಾಗಿರುವ ನೂರ್ ಮೊಹ್ಮದ್ ತನ್ನ ಕೆಲಸ ಮುಗಿಸಿ ಮನೆಗೆ ಹಿಂತಿರುಗುವ ವೇಳೆ ಭದ್ರತಾ ಪಡೆಗೆ ಸೇರಿದ ವಾಹನ ಎಂದು ತಪ್ಪಾಗಿ ಭಾವಿಸಿ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿ ಚಾಲಕನನ್ನು ಕೊಂದಿದ್ದರು.