ಮುಂಬೈ:ಭಾರತೀಯ ಷೇರು ಮಾರುಕಟ್ಟೆ ಸೋಮವಾರ ಪಾತಾಳ ಕುಸಿತ ಕಂಡಿದೆ. ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಹೂಡಿಕೆದಾರರು ಮಾರುಕಟ್ಟೆಯಿಂದ ಹಿಂದೆ ಸರಿದ ಕಾರಣದಿಂದ ಮಹಾಪತನ ಉಂಟಾಗಿದೆ. ಸೋಮವಾರ ಒಂದೇ ದಿನದಲ್ಲಿ ಷೇರು ಮಾರುಕಟ್ಟೆ ಶೇ. 13 ರಷ್ಟು ಕುಸಿತ ಕಂಡಿದ್ದು ಐತಿಹಾಸಿಕ ಪತನವಾಗಿದೆ.
ಸೆನ್ಸೆಕ್ಸ್ 3935 ಅಂಕ ಕಳೆದುಕೊಂಡು 25,981 ರಲ್ಲಿ ಹಾಗೂ ಎನ್ಎಸ್ಇ ನಿಫ್ಟಿ 1135 ಅಂಕ ಕಳೆದುಕೊಂಡು 4 ವರ್ಷದ ಅತಿ ಕನಿಷ್ಠ ಎಂದರೆ 7,610 ರಲ್ಲಿ ಕೊನೆಗೊಂಡಿದೆ. ದೊಡ್ಡ ಷೇರುಗಳು ಮಾತ್ರವಲ್ಲದೆ ನಿಫ್ಟಿ ಮಿಡ್ಕ್ಯಾಪ್ ಮತ್ತು ನಿಫ್ಟಿ ಸ್ಮಾಲ್ ಕ್ಯಾಪ್ ಅನುಕ್ರಮವಾಗಿ ಶೇ. 14.5 ಮತ್ತು ಶೇ. 13 ರಷ್ಟು ಕುಸಿತ ಕಂಡಿವೆ. ಬೃಹತ್ ವಲಯದ ಕಂಪನಿಗಳಾದ ಹೆಚ್ಡಿಎಫ್ಸಿ ಬ್ಯಾಂಕ್, ಆರ್ಐಎಲ್, ಐಸಿಐಸಿಐ ಬ್ಯಾಂಕ್ ಮತ್ತು ಆ್ಯಕ್ಸಿಸ್ ಬ್ಯಾಂಕ್ ಷೇರುಗಳು ಅತಿ ಹೆಚ್ಚು ಮೌಲ್ಯ ಕಳೆದುಕೊಂಡಿವೆ.