ಕರ್ನಾಟಕ

karnataka

ETV Bharat / bharat

ದೇವಾಲಯಗಳ ಮೇಲೆ ದಾಳಿ: ಸೂಕ್ತ ಕ್ರಮ ವಹಿಸುವಂತೆ ಸಿಎಂ ಜಗನ್​ ಸೂಚನೆ - ಸಿಎಂ ಜಗನ್ ಮೋಹನ್ ರೆಡ್ಡಿ

ಸಿಎಂ ಪ್ರಕಾರ, ರಾಜ್ಯಾದ್ಯಂತ ದೇವಾಲಯಗಳಲ್ಲಿ 36,000 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಆದರೆ ದೂರದ ಪ್ರದೇಶಗಳಲ್ಲಿನ ನಿರ್ಜನ ಸ್ಥಳಗಳಲ್ಲಿ ಈ ರೀತಿಯ ಘಟನೆಗಳು ನಡೆಯುತ್ತಿವೆ. ಈ ಮೊದಲು ಈ ರೀತಿಯ ನಡೆಯುತ್ತಿರಲಿಲ್ಲ. ಸದ್ಯ, ಪೊಲೀಸರು ಕಠಿಣ ಕ್ರಮ ತೆಗೆದುಕೊಳ್ಳಬೇಕು, ಯಾರನ್ನೂ ಬಿಡದೇ ಎಲ್ಲಾ ವಿವರಗಳನ್ನು ಪಡೆದುಕೊಳ್ಳಬೇಕು ಎಂದು ಮುಖ್ಯಮಂತ್ರಿ ತಿಳಿಸಿದರು.

Y.S. Jagan Mohan Reddy
ಸಿಎಂ ಜಗನ್ ಮೋಹನ್ ರೆಡ್ಡಿ

By

Published : Jan 6, 2021, 9:01 AM IST

ಅಮರಾವತಿ: ದೇವಾಲಯಗಳ ಮೇಲೆ ದಾಳಿ ನಡೆಸುವಂತಹ ನಡೆ ವಿರುದ್ಧ ಸೂಕ್ತ ಕ್ರಮ ವಹಿಸುವಂತೆ ಮತ್ತು ಜಾಗರೂಕರಾಗುವಂತೆ ಸಿಎಂ ಜಗನ್ ಮೋಹನ್ ರೆಡ್ಡಿ ಮಂಗಳವಾರ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಸ್ಪಂದನಾ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ವಿಗ್ರಹ ನಾಶದಂತಹ ಅಹಿತಕರ ಘಟನೆಗಳ ಕುರಿತು ತೀವ್ರ ತನಿಖೆ ನಡೆಸುವಂತೆ ನಿರ್ದೇಶನ ನೀಡಿದರು.

ಈ ಅಪರಾಧಗಳ ಮಾಹಿತಿಯನ್ನು ಎಲ್ಲೆಡೆ ಹಂಚಿಕೊಳ್ಳುವಂತೆ ಸೂಚಿಸಿದರು. ಅಲ್ಲದೇ ರಾಜಕೀಯ ಪ್ರಭಾವ ಹೊಂದಿರುವ ಕೆಲವರು ದೇವರ ಬಗ್ಗೆ ಯಾವುದೇ ಭಯ ಅಥವಾ ಭಕ್ತಿಯಿಲ್ಲದೇ ದೇವಾಲಯಗಳನ್ನು ಉದ್ದೇಶಪೂರ್ವಕವಾಗಿ ನೆಲಸಮ ಮಾಡುತ್ತಿದ್ದಾರೆ ಎಂದು ಟೀಕಿಸಿದರು. ಇನ್ನು ಮಾಧ್ಯಮ ಸೇರಿದಂತೆ ಒಂದಿಷ್ಟು ಜನರ ಗುಂಪು ಈ ಘಟನೆಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ನಿರಂತರವಾಗಿ ಪ್ರಚಾರ ಮಾಡುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಸುದ್ದಿಯನ್ನೂ ಓದಿ:ಉತ್ತರ ಕಾಶಿಯಲ್ಲಿ ಭಾರಿ ಹಿಮಪಾತ: ಕ್ಷೀರ ಪರ್ವತಗಳಿಗೆ ಮನಸೋತ ಪ್ರವಾಸಿಗರು!

ಕಲ್ಯಾಣ ಯೋಜನೆಗಳಿಂದ ಜನಪ್ರಿಯತೆಯನ್ನು ಗಳಿಸುತ್ತಿರುವ ಸರ್ಕಾರವನ್ನು ನೇರವಾಗಿ ಎದುರಿಸಲು ಸಾಧ್ಯವಿಲ್ಲದಿರುವುದರಿಂದ ಸರ್ಕಾರವನ್ನು ಕೆಣಕಲು ಇಂತಹ ದಾಳಿಗಳನ್ನು ಆಶ್ರಯಿಸುತ್ತಿವೆ ಎಂದು ಟೀಕಿಸಿದರು. ರಾಜಕೀಯ ನಾಯಕರ ಒಡೆತನದ ಖಾಸಗಿ ದೇವಾಲಯಗಳಲ್ಲಿ ಈ ವಿಧ್ವಂಸಕ ಕೃತ್ಯಗಳು ನಡೆಯುತ್ತಿವೆ ಎಂದಿದ್ದಾರೆ.

ABOUT THE AUTHOR

...view details