ನವದೆಹಲಿ: ಜಿಎಸ್‌ಟಿ ಪರಿಹಾರದ ಅಂತರ ನಿವಾರಿಸಲು ಹಣವನ್ನು ಸಾಲವಾಗಿ ಪಡೆಯಲು ರಾಜ್ಯಗಳಿಗೆ 'ಕಂಫರ್ಟ್ ಲೆಟರ್' ನೀಡುವ ಪ್ರಸ್ತಾಪದ ವಿರುದ್ಧ ಕೇಂದ್ರದ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಕೇಂದ್ರದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
'ರಾಜ್ಯಗಳಿಗೆ ಬೇಕಾಗಿರುವುದು ನಗದು. ಸಂಪನ್ಮೂಲಗಳನ್ನು ಸಂಗ್ರಹಿಸಲು ಮತ್ತು ಜಿಎಸ್‌ಟಿ ಪರಿಹಾರದ ಕೊರತೆಯನ್ನು ರಾಜ್ಯಗಳಿಗೆ ಪಾವತಿಸಲು ಕೇಂದ್ರ ಸರ್ಕಾರಕ್ಕೆ ಮಾತ್ರ ಬಹು ಆಯ್ಕೆ ಮತ್ತು ನಮ್ಯತೆ ಇದೆ' ಎಂದು ಚಿದಂಬರಂ ಹೇಳಿದ್ದಾರೆ.