ಹೈದರಾಬಾದ್ (ತೆಲಂಗಾಣ): ಇಲ್ಲಿನ ರಾಜ್ಯ ಸಾರಿಗೆ ಬಸ್‌ಗಳಿಗೆ (ಆರ್‌ಟಿಸಿ) ಇಂದಿನಿಂದ ಕರ್ಫ್ಯೂ ನಿರ್ಬಂಧ ಇರುವುದಿಲ್ಲ ಎಂದು ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಹೇಳಿದ್ದಾರೆ.
ತೆಲಂಗಾಣ: ಸರ್ಕಾರಿ ಬಸ್‌ಗಳಿಗೆ ಕರ್ಫ್ಯೂ ನಿರ್ಬಂಧದಿಂದ ಸಂಪೂರ್ಣ ವಿನಾಯಿತಿ - ಸರ್ಕಾರಿ ಬಸ್‌ಗಳಿಗೆ ಕರ್ಫ್ಯೂ ನಿರ್ಬಂಧದಿಂದ ಸಂಪೂರ್ಣ ವಿನಾಯಿತಿ
ಪ್ರಗತಿ ಪರಿಶೀಲನಾ ಸಭೆ ನಡೆಸಿದ ಚಂದ್ರಶೇಖರ್ ರಾವ್, ಇಂದಿನಿಂದ ತೆಲಂಗಾಣದಲ್ಲಿ ಸರ್ಕಾರಿ ಬಸ್‌ಗಳಿಗೆ ಕರ್ಫ್ಯೂ ನಿರ್ಬಂಧ ಇರುವುದಿಲ್ಲ ಎಂದಿದ್ದಾರೆ.
kcr
ಸಾರಿಗೆ ಸಚಿವ ಪುವವಾಡ ಅಜಯ್ ಕುಮಾರ್, ಮುಖ್ಯ ಕಾರ್ಯದರ್ಶಿ ಸೋಮೇಶ್ ಕುಮಾರ್, ಆರ್‌ಟಿಸಿ ಎಂ.ಡಿ ಸುನಿಲ್ ಶರ್ಮಾ, ಇಡಿ ಯಾದಗಿರಿ ಮತ್ತು ಇತರರೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಚಂದ್ರಶೇಖರ್ ರಾವ್ ಈ ನಿರ್ಧಾರ ಕೈಗೊಂಡಿದ್ದಾರೆ.
"ಇತ್ತೀಚಿನ ಬೆಳವಣಿಗೆಗಳಿಂದಾಗಿ ಆರ್‌ಟಿಸಿಗೆ ಭಾರಿ ನಷ್ಟವಾಗಿದೆ. ಕೆಲವು ಆರ್‌ಟಿಸಿ ಬಸ್‌ಗಳಿಗೆ ಅನುಮತಿ ನೀಡಲಾಗಿದ್ದರೂ, ಯಾವುದೇ ಲಾಭ ಬರುತ್ತಿಲ್ಲ" ಎಂದು ಸಾರಿಗೆ ಅಧಿಕಾರಿಗಳು ವಿವರಿಸಿದರು.