ಕರ್ನಾಟಕ

karnataka

ETV Bharat / bharat

ಪೂರ್ವ ಲಡಾಖ್‌ನಲ್ಲಿ 'ನೋ ವಾರ್‌ ನೋ ಪೀಸ್'‌ ಸ್ಥಿತಿ: ವಾಯುಸೇನೆ‌ ಮುಖ್ಯಸ್ಥ - ನೋ ವಾರ್‌ ನೋ ಪೀಸ್‌ ಸ್ಥಿತಿ

ಉತ್ತರದ ಗಡಿ ಪ್ರದೇಶದಲ್ಲಿ ಯಾವುದೇ ರೀತಿಯ ದುಸ್ಸಾಹಸಕ್ಕೆ ಯತ್ನಿಸಿದರೆ ಅದನ್ನು ತಡೆಯಲು ವಾಯು ಸೇನೆ ಸಂಪೂರ್ಣವಾಗಿ ಸನ್ನದ್ಧವಾಗಿದೆ. ಪ್ರಸ್ತುತ ಈ ಭಾಗದಲ್ಲಿ 'ನೋ ವಾರ್‌ ನೋ ಪೀಸ್‌' ಎಂಬ ಧ್ಯೇಯವನ್ನು ಹೊಂದಲಾಗಿದೆ ಎಂದು ವಾಯು ಸೇನಾ ಮುಖ್ಯಸ್ಥ ಆರ್‌ಕೆಎಸ್‌ ಬದೌರಿಯಾ ಭಾರತೀಯ ವಾಯುಯಾನ ಕ್ಷೇತ್ರದ ಕುರಿತ ಸಂವಾದಲ್ಲಿ ತಿಳಿಸಿದ್ದಾರೆ.

state-of-uneasiness-no-war-no-peace-scenario-in-eastern-ladakh-iaf-chief
ಪೂರ್ವ ಲಡಾಖ್‌ನಲ್ಲಿ 'ನೋ ವಾರ್‌ ನೋ ಪೀಸ್'‌ ಸ್ಥಿತಿ : ಐಎಎಫ್‌ ಮುಖ್ಯಸ್ಥ ಆರ್‌ಕೆಎಸ್‌ ಬದೌರಿಯಾ

By

Published : Sep 29, 2020, 1:40 PM IST

ನವದೆಹಲಿ: ಎಂತಹದ್ದೇ ಪರಿಸ್ಥಿತಿ ಬಂದರೂ ಭಾರತೀಯ ವಾಯು ಸೇನೆ ಕ್ಷಣಮಾತ್ರದಲ್ಲಿ ಸ್ಪಂದಿಸಲಿದೆ ಎಂದು ವಾಯು ಸೇನೆ ಮುಖ್ಯಸ್ಥ ಆರ್‌ಕೆಎಸ್‌ ಬದೌರಿಯಾ ತಿಳಿಸಿದ್ದಾರೆ.

ಭಾರತೀಯ ವಾಯುಯಾನ ಕ್ಷೇತ್ರದ ಕುರಿತ ಸಂವಾದಲ್ಲಿ ಮಾತನಾಡಿರುವ ಅವರು, ಉತ್ತರದ ಗಡಿ ಪ್ರದೇಶದಲ್ಲಿ ಯಾವುದೇ ರೀತಿಯ ದುಸ್ಸಾಹಸಕ್ಕೆ ಯತ್ನಿಸಿದರೆ ಅದನ್ನು ತಡೆಯಲು ಸೇನೆ ಸಂಪೂರ್ಣವಾಗಿ ಸನ್ನದ್ಧವಾಗಿದೆ. ಪ್ರಸ್ತುತ ಈ ಭಾಗದಲ್ಲಿ 'ನೋ ವಾರ್‌ ನೋ ಪೀಸ್‌' ಸ್ಥಿತಿ ಇದೆ. ನಮ್ಮ ರಕ್ಷಣಾ ಪಡೆಗಳು ಯಾವುದೇ ಸನ್ನಿವೇಶವನ್ನು ಎದುರಿಸಲು ತಯಾರಾಗಿವೆ. ಅದು ತಮಗೂ ತಿಳಿದಿದೆ ಎಂದು ಹೇಳಿದ್ದಾರೆ.

ರಫೇಲ್‌, ಸಿ-17 ಗ್ಲೋಬ್‌‌ ಮಾಸ್ಟರ್, ಚಿನೂಕ್‌ ಹಾಗೂ ಅಪಾಚೆ ಹೆಲಿಕಾಪ್ಟರ್‌ ವಾಯು ಸೇನೆಗೆ ಸೇರ್ಪಡೆಯಾಗಿರುವ ಬಗ್ಗೆ ಮಾಹಿತಿ ನೀಡಿದ ಬದೌರಿಯಾ, ಈ ಯುದ್ಧ ವಿಮಾನ, ಹೆಲಿಕಾಪ್ಟರ್‌ಗಳು ಯುದ್ಧ ತಂತ್ರದ ಸುಸ್ಥಿರತೆ ಮತ್ತು ವಾಯು ಸೇನೆಯ ಶಕ್ತಿಯನ್ನು ಹೆಚ್ಚಿಸಿವೆ ಎಂದರು.

ಭವಿಷ್ಯದ ಯಾವುದೇ ಕಠಿಣ ಪರಿಸ್ಥಿತಿಯಲ್ಲೂ ನಾವು ಪಡೆಯುವ ಗೆಲುವಿನಲ್ಲಿ ವಾಯು ಸೇನೆ ಪಾತ್ರ ಪ್ರಮುಖವಾಗಿರುತ್ತದೆ. ಹೀಗಾಗಿ ಐಎಎಫ್‌ಅನ್ನು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಅಭಿವೃದ್ಧಿಪಡಿಸಬೇಕು ಎಂದು ಹೇಳಿದರು.

ಸೆಪ್ಟೆಂಬರ್‌ 10ರಂದು ಐದು ರಫೇಲ್‌ ಯುದ್ಧ ವಿಮಾನಗಳು ವಾಯು ಸೇನೆಗೆ ಸೇರ್ಪಡೆಯಾಗಿವೆ. ಬಹುಕಾರ್ಯ ನಿರ್ವಹಿಸುವ ಶಕ್ತಿ ಹೊಂದಿರುವ ಈ ಯುದ್ಧ ವಿಮಾನಗಳನ್ನು ಕಳೆದ ಕೆಲ ವಾರಗಳಿಂದ ಪೂರ್ವ ಲಡಾಖ್‌ನಲ್ಲಿ ನಿಯೋಜಿಸಲಾಗಿದೆ ಎಂದು ವಿವರಿಸಿದರು.

ABOUT THE AUTHOR

...view details