ಕರ್ನಾಟಕ

karnataka

ETV Bharat / bharat

ಹಠಾತ್​ ಕುಸಿದ ವೇದಿಕೆ... ಬಿಜೆಪಿ ನಾಯಕರಿಗೆ ಗಾಯ - etv bharat

ಹೋಳಿ ಹಬ್ಬದ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದ ವೇದಿಕೆ ಕುಸಿದು ಅವಘಡ. ಬಿಜೆಪಿ ಕಾರ್ಯಕರ್ತರಿಗೆ ಗಾಯ. ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ.

ಹೋಳಿ ಮಿಲನ್ ಕಾರ್ಯಕ್ರಮದ ವೇದಿಕೆ ಕುಸಿತ.

By

Published : Mar 23, 2019, 9:46 AM IST

ಸಂಭಾಲ್: ಉತ್ತರ ಪ್ರದೇಶದ ಸಂಭಾಲ್​ನಲ್ಲಿ ಶುಕ್ರವಾರ ಬಿಜೆಪಿ ಆಯೋಜಿಸಿದ್ದ 'ಹೋಳಿ ಮಿಲನ್' ಕಾರ್ಯಕ್ರಮದ ವೇದಿಕೆ ಕುಸಿದಿದೆ. ಬಿಜೆಪಿಯ ಕಿಸಾನ್ ಮೋರ್ಚಾ ನಾಯಕ ಅವಧೀಶ್ ಯಾದವ್ ಸೇರಿದಂತೆ ಹಲವರು ಗಾಯಗೊಂಡಿದ್ದಾರೆ.

ನಾಯಕರು ವೇದಿಕೆ ಮೇಲಿದ್ದಾಗಲೇ ಘಟನೆ ಸಂಭವಿಸಿದ್ದು, ಕ್ಯಾಮರಾದಲ್ಲಿ ಸೆರೆಯಾಗಿದೆ. ವೇದಿಕೆ ಮೇಲೆ ಜನ ಹೆಚ್ಚಾಗಿದ್ದೇ ಘಟನೆಗೆ ಕಾರಣ ಎನ್ನಲಾಗಿದೆ.

ಈ ಹಿಂದೆಯೂ ಕಾರ್ಯಕ್ರಮಗಳ ವೇದಿಕೆ ಕುಸಿತ ಪ್ರಕರಣಗಳು ನಡೆದಿವೆ. 2017ರಲ್ಲಿ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಯುಪಿ ಮಾಜಿ ಸಿಎಂ ಅಖಿಲೇಶ್ ಯಾದವ್​ ಅವರಿಗಾಗಿ ನಿರ್ಮಿಸಿದ್ದ ವೇದಿಕೆ ಕುಸಿದಿತ್ತು.

ABOUT THE AUTHOR

...view details