ಮುಂಬೈ (ಮಹಾರಾಷ್ಟ್ರ): ಸೈಬರ್ ತಜ್ಞರ ತಂಡವು 1.5 ಲಕ್ಷಕ್ಕೂ ಹೆಚ್ಚು ಟ್ವಿಟ್ಟರ್ ಖಾತೆಗಳನ್ನು ಕಂಡುಹಿಡಿದಿದ್ದು, ಅವುಗಳಲ್ಲಿ ಸುಮಾರು 80%ದಷ್ಟು ಖಾತೆಗಳು ಅನುಮಾನಾಸ್ಪದವಾಗಿವೆ ಎಂದು ತಿಳಿದುಬಂದಿದೆ.
ಸುಶಾಂತ್ ಸಾವು ಪ್ರಕರಣ: 1 ಲಕ್ಷಕ್ಕೂ ಹೆಚ್ಚು ಅನುಮಾನಾಸ್ಪದ ಟ್ವಿಟ್ಟರ್ ಖಾತೆಗಳನ್ನು ಪತ್ತೆಹಚ್ಚಿದ ಸೈಬರ್ ತಜ್ಞರು - ಋಣಾತ್ಮಕ ಟ್ವೀಟ್ / ರಿಟ್ವೀಟ್ ಮತ್ತು ಕಮೆಂಟ್
ನಕಲಿ ಟ್ವಿಟ್ಟರ್ ಖಾತೆಗಳ ಮೂಲಕ ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣದ ಕುರಿತು ಮಹಾರಾಷ್ಟ್ರ ಸರ್ಕಾರ ಮತ್ತು ಮುಂಬೈ ಪೊಲೀಸರ ವಿರುದ್ಧ ಋಣಾತ್ಮಕ ಟ್ವೀಟ್/ರಿಟ್ವೀಟ್ ಮತ್ತು ಕಮೆಂಟ್ಗಳನ್ನು ಸೈಬರ್ ತಜ್ಞರು ಪತ್ತೆ ಮಾಡಿದ್ದಾರೆ.

mh police
ಈ ಖಾತೆಗಳ ಮೂಲಕ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣದ ಕುರಿತು ಮಹಾರಾಷ್ಟ್ರ ಸರ್ಕಾರ ಮತ್ತು ಮುಂಬೈ ಪೊಲೀಸರ ವಿರುದ್ಧ ಋಣಾತ್ಮಕ ಟ್ವೀಟ್ /ರಿಟ್ವೀಟ್ ಮತ್ತು ಕಮೆಂಟ್ಗಳನ್ನು ಮಾಡಲಾಗುತ್ತಿದೆ ಎಂದು ರಾಜ್ಯ ಪೊಲೀಸರು ತಿಳಿಸಿದ್ದಾರೆ.
ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ನಲ್ಲಿ ಮಾನಹಾನಿಕರ ವಿಷಯಗಳನ್ನು ಹರಡಲು ಬಳಸಲಾಗುತ್ತಿದ್ದ ಅನೇಕ ಟ್ವಿಟ್ಟರ್ ಖಾತೆಗಳು ನಕಲಿಯಾಗಿದ್ದು, ವಿವಿಧ ದೇಶಗಳ ಮೂಲಕ ಇವುಗಳನ್ನು ಕಂಟ್ರೋಲ್ ಮಾಡಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.