ನವದೆಹಲಿ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ತನಿಖೆಗಾಗಿ, ಮುಂಬೈಗೆ ಬಂದಿದ್ದ ಸಿಬಿಐನ ವಿಶೇಷ ತನಿಖಾ ತಂಡ ಸುಮಾರು ಒಂದು ತಿಂಗಳ ನಂತರ ದೆಹಲಿಗೆ ವಾಪಸ್ ತೆರಳಿದೆ.
ಸುಶಾಂತ್ ಸಿಂಗ್ ಸಾವು ಪ್ರಕರಣ: ದೆಹಲಿಗೆ ವಾಪಸ್ ತೆರಳಿದ ಸಿಬಿಐ - ಸುಶಾಂತ್ ಸಿಂಗ್ ಸಾವು ಪ್ರಕರಣ
ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ತನಿಖೆಗಾಗಿ, ಮುಂಬೈಗೆ ಬಂದಿದ್ದ ಸಿಬಿಐನ ವಿಶೇಷ ತನಿಖಾ ತಂಡ ದೆಹಲಿಗೆ ವಾಪಸ್ ತೆರಳಿದೆ.

ಸುಶಾಂತ್ ಸಿಂಗ್ ಸಾವು ಪ್ರಕರಣ
ಸಿಬಿಐ ಮೂಲಗಳ ಪ್ರಕಾರ ಎಸ್‌ಐಟಿಯು ಮುಂದಿನ ವಾರ ಏಮ್ಸ್ ಫೋರೆನ್ಸಿಕ್ ಜೊತೆ ಸಭೆ ನಡೆಸಲಿದ್ದು, ಮುಂದಿನ ವಾರದಲ್ಲಿ ಈ ಪ್ರಕರಣದ ಕುರಿತು ವೈದ್ಯಕೀಯ ಅಭಿಪ್ರಾಯವನ್ನು ಸಂಗ್ರಹಿಸಲಿದೆ ಎಂದು ತಿಳಿದು ಬಂದಿದೆ.
ನಟನ ಸಾವಿನ ಬಗ್ಗೆ ತನಿಖೆಗೆ ನಡೆಸಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದ ಒಂದು ದಿನದ ನಂತರ, ಆಗಸ್ಟ್ 20 ರಂದು ಸಿಬಿಐ ತಂಡವು ಫೋರೆನ್ಸಿಕ್ ತಂಡದೊಂದಿಗೆ ಮುಂಬೈಗೆ ಹೋಗಿತ್ತು.