ಹಂದ್ವಾರ(ಜಮ್ಮು-ಕಾಶ್ಮೀರ): ಸಶಸ್ತ್ರ ಸೀಮಾ ಬಲ (ಎಸ್ಎಸ್ಬಿ) ಪಡೆಯ ಯೋಧನೋರ್ವ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯ ವಿಲ್ಗಾಂ ಪ್ರದೇಶದಲ್ಲಿ ನಡೆದಿದೆ.
ಗುಂಡು ಹಾರಿಸಿಕೊಂಡು ಎಸ್ಎಸ್ಬಿ ಯೋಧ ಆತ್ಮಹತ್ಯೆ - ಜಮ್ಮು-ಕಾಶ್ಮೀರದ ಇತ್ತೀಚಿನ ಸುದ್ದಿ
ಎಸ್ಎಸ್ಬಿ ಪಡೆಯ ಯೋಧನೋರ್ವ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯ ವಿಲ್ಗಾಂ ಪ್ರದೇಶದಲ್ಲಿ ನಡೆದಿದೆ.

ಎಸ್ಎಸ್ಬಿ ಯೋಧ ಸಾವಿಗೆ ಶರಣು
ಈ ಬಗ್ಗೆ ಮಾತನಾಡಿದ ಅಧಿಕಾರಿಯೊಬ್ಬರು, "ಉತ್ತರಪ್ರದೇಶ ಮೂಲದ ಅಮಿತ್ ಕುಮಾರ್ ಎಂಬಾತ ಸಾವಿಗೆ ಶರಣಾಗಿದ್ದಾನೆ. ಈತ 37ನೇ ಬಿಎನ್ ಸಶಸ್ತ್ರ ಸೀಮಾ ಬಲದ ಯೋಧನಾಗಿದ್ದು, ವಿಲ್ಗಾಂಗೆ ನಿಯೋಜನೆಗೊಂಡಿದ್ದ. ಆತ ಗುಂಡು ಹಾರಿಸಿಕೊಂಡ ಕೆಲವೇ ಕ್ಷಣಗಳಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರೂ ಸಹ ಮಾರ್ಗಮಧ್ಯೆ ಸಾವನ್ನಪ್ಪಿದ್ದಾನೆ ಎಂಬುದನ್ನು ವೈದ್ಯರು ಖಚಿತಪಡಿಸಿದ್ದಾರೆ" ಎಂದು ಮಾಹಿತಿ ನೀಡಿದ್ದಾರೆ.
ಯೋಧನ ಆತ್ಮಹತ್ಯೆಗೆ ಕಾರಣ ಏನು ಎಂಬುದರ ಕುರಿತಂತೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Last Updated : Oct 12, 2020, 11:36 AM IST