ಕರ್ನಾಟಕ

karnataka

ETV Bharat / bharat

'ಬಾಹುಬಲಿ' ನಿರ್ದೇಶಕ ರಾಜಮೌಳಿಗೆ ಕೊರೊನಾ ಸೋಂಕು​: ಪ್ಲಾಸ್ಮಾ ದಾನಕ್ಕೆ ಕಾಯುತ್ತಿರುವುದಾಗಿ ಟ್ವೀಟ್​ - ಕೊರೊನಾ ವೈರಸ್

ನನಗೆ ಮತ್ತು ನನ್ನ ಕುಟುಂಬ ಸದಸ್ಯರಿಗೆ ಕೆಲವು ದಿನಗಳ ಹಿಂದೆ ಸ್ವಲ್ಪ ಜ್ವರ ಕಾಣಿಸಿಕೊಂಡಿತ್ತು. ಅದು ಸ್ವತಃ ಕಡಿಮೆಯಾಯಿತು. ನಾವು ಕೋವಿಡ್‌ ಪರೀಕ್ಷೆಗೆ ಒಳಪಟ್ಟಿದ್ದು, ವರದಿ ಬಂದಾಗ ಸೋಂಕು ತಗುಲಿರುವುದು ಗೊತ್ತಾಗಿದೆ. ವೈದ್ಯರು ಸೂಚಿಸಿದಂತೆ ನಾವು ಹೋಮ್​ ಕ್ವಾರಂಟೈನ್​ಗೆ ಒಳಗಾಗಿದ್ದೇವೆ ಎಂದು ಅವರು ಬರೆದುಕೊಂಡಿದ್ದಾರೆ.

SS Rajamouli
ರಾಜಮೌಳಿ

By

Published : Jul 29, 2020, 9:43 PM IST

ಹೈದರಾಬಾದ್​:ಖ್ಯಾತ ಚಲನಚಿತ್ರ ನಿರ್ದೇಶಕ ಎಸ್.ಎಸ್.ರಾಜಮೌಳಿ ಮತ್ತು ಅವರ ಕುಟುಂಬ ಸದಸ್ಯರಿಗೆ ಕೋವಿಡ್‌ ದೃಢಪಟ್ಟಿದೆ.

'ಬಾಹುಬಲಿ' ಚಿತ್ರ ನಿರ್ದೇಶಕ ಈ ವಿಚಾರವನ್ನು ತಮ್ಮ ಟ್ವಿಟರ್‌ ಖಾತೆಯಲ್ಲಿ ತಿಳಿಸಿದ್ದಾರೆ. ಸದ್ಯ ಕೋವಿಡ್​-19ನಿಂದ ಹೋಮ್​ ಕ್ವಾರಂಟೈನ್​ಗೆ ಒಳಗಾಗಿದ್ದೇವೆ ಎಂದು ಅವರು ಹೇಳಿದ್ದಾರೆ.

ನನಗೆ ಮತ್ತು ನನ್ನ ಕುಟುಂಬ ಸದಸ್ಯರಿಗೆ ಕೆಲವು ದಿನಗಳ ಹಿಂದೆ ಸ್ವಲ್ಪ ಜ್ವರ ಕಾಣಿಸಿಕೊಂಡಿತ್ತು. ಅದು ಸ್ವತಃ ಕಡಿಮೆಯಾಯಿತು. ನಾವು ಕೋವಿಡ್‌ ಪರೀಕ್ಷೆಗೆ ಒಳಪಟ್ಟಿದ್ದು, ವರದಿ ಬಂದಾಗ ಸೋಂಕು ತಗುಲಿರುವುದು ಗೊತ್ತಾಗಿದೆ. ವೈದ್ಯರು ಸೂಚಿಸಿದಂತೆ ನಾವು ಹೋಮ್​ ಕ್ವಾರಂಟೈನ್​ಗೆ ಒಳಗಾಗಿದ್ದೇವೆ ಎಂದು ಅವರು ಬರೆದುಕೊಂಡಿದ್ದಾರೆ.

ನಾವೆಲ್ಲರೂ ಯಾವುದೇ ರೋಗಲಕ್ಷಣಗಳಿಲ್ಲದೆ ಆರೋಗ್ಯವಾಗಿದ್ದೇವೆ. ಆದರೆ ಎಲ್ಲಾ ಮುನ್ನೆಚ್ಚರಿಕೆಗಳು ಮತ್ತು ಸೂಚನೆಗಳನ್ನು ಅನುಸರಿಸುತ್ತಿದ್ದೇವೆ. ಚೇತರಿಕೆಯ ಬಳಿಕ ಪ್ಲಾಸ್ಮಾ ದಾನ ಮಾಡುವುದಾಗಿ ರಾಜಮೌಳಿ ತಿಳಿಸಿದ್ದಾರೆ.

ABOUT THE AUTHOR

...view details