ರಾಮ್ಬನ್:ಹೆದ್ದಾರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವಿಶೇಷ ಪೊಲೀಸ್ ಅಧಿಕಾರಿ ಮೇಲೆ ಹರಿಯಾಣ ಮೂಲದ ಚಾಲಕನೊಬ್ಬ ಟ್ರಕ್ ಹತ್ತಿಸಿರುವ ಘಟನೆ ರಾಮ್ಬನ್ ಜಿಲ್ಲೆಯ ಬನಿಹಾಲ್ನಡೆದಿದೆ.
ಮಂಗಳವಾರ ರಾತ್ರಿ ಗ್ರಾಮದ ಜಮ್ಮು-ಶ್ರೀನಗರ ಹೈವೆಯಲ್ಲಿ ವಿಶೇಷ ಟ್ರಾಫಿಕ್ ಪೊಲೀಸ್ ಅಧಿಕಾರಿ ಪರ್ವೇಜ್ ಅಹ್ಮದ್ ಮಲಿಕ್ ಕಾರ್ಯ ನಿರ್ವಹಿಸುತ್ತಿದ್ದರು. ಈ ವೇಳೆ ಕಾಶ್ಮೀರ್ನತ್ತ ಹೊರಡುತ್ತಿದ್ದ ಟ್ರಕ್ ಚಾಲಕ ಪರ್ವೇಜ್ ಅಹ್ಮದ್ ಮೇಲೆ ಹತ್ತಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.