ನವದೆಹಲಿ: ಭಾರತದಲ್ಲಿ ಕೊರೊನಾ ನಾಗಾಲೋಟ ಮುಂದುವರೆದಿದ್ದು, ಸೋಂಕಿತರ ಸಂಖ್ಯೆ ಒಂದು ಮಿಲಿಯನ್ ಗಡಿ ದಾಟಿದ್ದರೆ ಸಾವಿನ ಸಂಖ್ಯೆ 26 ಸಾವಿರದ ಗಡಿ ದಾಟಿದೆ.
ಕೊರೊನಾ ಕಪಿಮುಷ್ಠಿಯಲ್ಲಿ ಭಾರತ: 26 ಸಾವಿರ ಗಡಿ ದಾಟಿದ ಮೃತರ ಸಂಖ್ಯೆ
ದೇಶದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 10,38,716ಕ್ಕೆ ಹಾಗೂ ಮೃತರ ಸಂಖ್ಯೆ 26,285ಕ್ಕೆ ಏರಿಕೆಯಾಗಿದೆ.
ಭಾರತದಲ್ಲಿ ಕೊರೊನಾ ಪ್ರಕರಣ
ಕಳೆದ 24 ಗಂಟೆಗಳಲ್ಲಿ ಈವರೆಗೆ ಅತಿ ಹೆಚ್ಚು ಪ್ರಕರಣಗಳು ಎಂಬಂತೆ ಬರೋಬ್ಬರಿ 34,884 ಸೋಂಕಿತರು ಪತ್ತೆಯಾಗಿದ್ದು, 671 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 1,040,457ಕ್ಕೆ ಹಾಗೂ ಮೃತರ ಸಂಖ್ಯೆ 26,285ಕ್ಕೆ ಏರಿಕೆಯಾಗಿದೆ.
ಒಟ್ಟು ಸೋಂಕಿತರ ಪೈಕಿ ಶೇ. 63 ಕ್ಕೂ ಹೆಚ್ಚು ಅಂದರೆ 6,53,751 ಮಂದಿ ಗುಣಮುಖರಾಗಿ, ಆಸ್ಪತ್ರೆಯಿಂದ ಡಿಸ್ಚಾರ್ಚ್ ಆಗಿದ್ದಾರೆ. ಉಳಿದಂತೆ 3,58,692 ಕೇಸ್ಗಳು ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
TAGGED:
ಭಾರತದಲ್ಲಿ ಕೊರೊನಾ ಪ್ರಕರಣ