ಕರ್ನಾಟಕ

karnataka

ETV Bharat / bharat

3 ಲಕ್ಷ ಜನರ ಉದ್ಯೋಗ ಕಸಿದ ವಿದೇಶಿ ಸಿಗರೇಟ್ ಸ್ಮಗ್ಲಿಂಗ್, ಲಾಕ್​ಡೌನ್​ನಲ್ಲೂ ಕಳ್ಳ ಸಾಗಣೆ ಬಿರುಸು - ಸಿಗರೇಟ್ ಸ್ಮಗ್ಲಿಂಗ್ ಲೇಟೆಸ್ಟ್ ನ್ಯೂಸ್

ದೇಶವು ಕೊರೊನಾ ಸೋಂಕಿನ ವಿರುದ್ಧ ಹೋರಾಟ ನಡೆಸುತ್ತಿದ್ದರೂ ಸಹ ವಿದೇಶಿ ಸಿಗರೇಟ್ ಕಳ್ಳಸಾಗಣೆ ಕಡಿಮೆಯಾಗಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

cigarette smuggling during lockdown
ವಿದೇಶಿ ಸಿಗರೇಟ್ ಸ್ಮಗ್ಲಿಂಗ್

By

Published : Jun 15, 2020, 4:14 PM IST

ನವದೆಹಲಿ: ಕಳೆದ ಕೆಲವು ತಿಂಗಳುಗಳಲ್ಲಿ ವಿದೇಶಿ ಸಿಗರೇಟ್​ಗಳ ಕಳ್ಳಸಾಗಣೆ ಹೆಚ್ಚಾಗಿದೆ ಎಂದು ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ & ಇಂಡಸ್ಟ್ರಿ(ಎಫ್​ಐಸಿಸಿಐ) ಹೇಳಿದೆ.

ಆರ್ಥಿಕತೆಯನ್ನು ನಾಶಪಡಿಸುವ ಕಳ್ಳಸಾಗಣೆ ಮತ್ತು ನಕಲಿ ಚಟುವಟಿಕೆಗಳ ವಿರುದ್ಧದ ಸಮಿತಿ (FICCI CASCADE) ಜೂನ್ 12 ರಂದು ಮುಂಬೈನ ಜವಾಹರಲಾಲ್ ನೆಹರು ಪೋರ್ಟ್ ಟ್ರಸ್ಟ್ (ಜೆಎನ್‌ಪಿಟಿ) ನಲ್ಲಿರುವ ಕಂಟೇನರ್‌ನಿಂದ 11.88 ಕೋಟಿ ರೂ. ಮೌಲ್ಯದ ವಿದೇಶಿ ಸಿಗರೇಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕಂದಾಯ ಗುಪ್ತಚರ ನಿರ್ದೇಶನಾಲಯ ( ಡಿಆರ್​ಐ) ತಿಳಿಸಿದೆ.

ಕೇವಲ ಮುಂಬೈನಲ್ಲಿ ಮಾತ್ರವಲ್ಲ ದೇಶದಾದ್ಯಂತ ಸಿಗರೇಟ್ ಕಳ್ಳಸಾಗಾಣೆ ಪ್ರಕರಣಗಳು ಕಂಡುಬಂದಿವೆ. ರಸ್ತೆ ಮಾರ್ಗದ ಮೂಲಕ ಕಂಟೇನರ್​ ಹಾಗು ಪ್ರಯಾಣಿಕರ ಲಗೇಜ್​ನಲ್ಲಿ ಸಿಗರೇಟ್ ಕಳ್ಳಸಾಗಣೆ ಮಾಡುವಾಗ ವಶಕ್ಕೆ ಪಡೆಯಲಾಗಿದೆ ಎಂದಿದೆ.

ಈ ಬಗ್ಗೆ ಕಳವಳ ವ್ಯಕ್ತಪಡಿಸಿದ ಎಫ್​ಐಸಿಸಿಐ ಸಿಎಎಸ್​ಸಿಎಡಿಇ ಅಧ್ಯಕ್ಷ ಅನಿಲ್ ರಜಪೂತ್, ಸಿಗರೆಟ್ ಕಳ್ಳಸಾಗಣೆ ಪ್ರಪಂಚದಾದ್ಯಂತ ಒಂದು ದೊಡ್ಡ ದಂಧೆಯಾಗಿದೆ. ಭಾರತದಲ್ಲೂ ಕಳ್ಳಸಾಗಣೆ ಕಡಿಮೆಯಾಗಿಲ್ಲ. ದೇಶವು ಕೊರೊನಾ ಸೋಂಕಿನ ವಿರುದ್ಧ ಹೋರಾಟ ನಡೆಸುತ್ತಿದ್ದರೂ ಸಹ ಕಳ್ಳಸಾಗಣಿಕೆಯಿಂದ ವಶಪಡಿಸಿಕೊಂಡ ವಸ್ತುಗಳ ಪ್ರಮಾಣ ಕಡಿಮೆಯಾಗಿಲ್ಲ ಎಂದಿದ್ದಾರೆ.

ಇತ್ತೀಚಿನ ಅಧ್ಯಯನದ ಪ್ರಕಾರ ಸಿಗರೇಟ್ ಕಳ್ಳಸಾಗಣೆ ಈಗ ಹೆಚ್ಚು ಲಾಭದಾಯಕ ಚಟುವಟಿಕೆಯಾಗಿ ಮಾರ್ಪಟ್ಟಿದೆ, ಇದು 3.34 ಲಕ್ಷ ಉದ್ಯೋಗ ನಷ್ಟಕ್ಕೆ ಕಾರಣವಾಗಿದೆ. ಹೀಗಾಗಿ ಹೆಚ್ಚು ಜಾಗರೂಕವಾಗಿರುವುದು ಅವಶ್ಯಕ ಎಂದಿದ್ದಾರೆ.

ABOUT THE AUTHOR

...view details