ಕರ್ನಾಟಕ

karnataka

ETV Bharat / bharat

'ವಂದೇ ಭಾರತ್ ಮಿಷನ್' ಅಡಿ ಹಾರಾಟ ನಡೆಸಲಿವೆ 25 ಸ್ಪೈಸ್ ಜೆಟ್ ವಿಮಾನಗಳು - ವಂದೇ ಭಾರತ್ ಮಿಷನ್'

ಯುಎಇ, ಸೌದಿ ಅರೇಬಿಯಾ ಮತ್ತು ಓಮನ್​​ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆ ತರಲು 25 ಸ್ಪೈಸ್‌ ಜೆಟ್ ವಿಮಾನಗಳು ಹಾರಾಟ ನಡೆಸಲಿವೆ.

SpiceJet
ಸ್ಪೈಸ್ ಜೆಟ್ ವಿಮಾನಗಳು

By

Published : Jul 6, 2020, 8:12 PM IST

ನವದೆಹಲಿ: ಕೊರೊನಾದಿಂದಾಗಿ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ (ಯುಎಇ), ಸೌದಿ ಅರೇಬಿಯಾ ಮತ್ತು ಓಮನ್​​ನಲ್ಲಿ ಸಿಲುಕಿರುವ 4,500 ಭಾರತೀಯರನ್ನು ವಾಪಸ್​ ಕರೆ ತರಲು ವಂದೇ ಭಾರತ್ ಮಿಷನ್ ಅಡಿ ಸ್ಪೈಸ್ ‌ಜೆಟ್ ವಿಮಾನಯಾನ ಸಂಸ್ಥೆಯ 25 ವಿಮಾನಗಳು ಹಾರಾಟ ನಡೆಸಲಿವೆ.

ಈ ತಿಂಗಳೇ 19 ಸ್ಪೈಸ್‌ ಜೆಟ್ ವಿಮಾನಗಳು ರಾಸ್- ಅಲ್-ಖೈಮಾ, ಜೆಡ್ಡಾ, ದಮ್ಮಮ್, ರಿಯಾದ್ ಮತ್ತು ಮಸ್ಕತ್‌ನಿಂದ ಬೆಂಗಳೂರು, ಹೈದರಾಬಾದ್, ಲಕ್ನೋ, ಕೊಚ್ಚಿ, ತಿರುವನಂತಪುರಂ ಮತ್ತು ಮುಂಬೈಗೆ ಭಾರತೀಯರನ್ನು ಕರೆ ತರಲಿದೆ. ಈಗಾಗಲೇ 6 ವಿಮಾನಗಳು ಅಹಮದಾಬಾದ್, ಗೋವಾ ಮತ್ತು ಜೈಪುರಕ್ಕೆ ಒಂದು ಸಾವಿರಕ್ಕೂ ಹೆಚ್ಚು ಭಾರತೀಯರನ್ನು ಕರೆ ತಂದಿವೆ. ಲಾಕ್‌ಡೌನ್ ಪ್ರಾರಂಭವಾದಾಗಿನಿಂದ ನಮ್ಮ 3512 ಸರಕು ಸಾಗಣೆ ವಿಮಾನಗಳು ಸುಮಾರು 20,200 ಟನ್ ಸರಕುಗಳನ್ನು ಸಾಗಿಸಿವೆ ಎಂದು ಸ್ಪೈಸ್‌ ಜೆಟ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಜಯ್ ಸಿಂಗ್ ತಿಳಿಸಿದ್ದಾರೆ.

ಕೊರೊನಾದಿಂದಾಗಿ ಮಾರ್ಚ್ 23ರಿಂದ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟವನ್ನು ದೇಶದಲ್ಲಿ ಸ್ಥಗಿತಗೊಳಿಸಲಾಗಿತ್ತು. ವಿದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಕರೆ ತರಲು ಮೇ 6ರಂದು ಕೇಂದ್ರ ಸರ್ಕಾರ 'ವಂದೇ ಭಾರತ ಮಿಷನ್' ಪ್ರಾರಂಭಿಸಿತ್ತು.

ABOUT THE AUTHOR

...view details