ಕರ್ನಾಟಕ

karnataka

ETV Bharat / bharat

ಅ.31ರಿಂದ ಪ್ರಥಮ ಸೀಪ್ಲೇನ್​ ಸೇವೆ ಪ್ರಾರಂಭಿಸಲಿರುವ ಸ್ಪೈಸ್ ಜೆಟ್ - ಸಬರಮತಿ ನದಿ ಸಂಬಂಧಿತ ಸುದ್ದಿ

ಗುಜರಾತ್‌ನ ಅಹಮದಾಬಾದ್ ಮತ್ತು ಏಕತಾ ಪ್ರತಿಮೆ ನಡುವೆ ಅಕ್ಟೋಬರ್ 31ರಿಂದ ತನ್ನ ಸೀಪ್ಲೇನ್ ಸೇವೆಯನ್ನು ಪ್ರಾರಂಭಿಸುವುದಾಗಿ ಸ್ಪೈಸ್ ಜೆಟ್ ತಿಳಿಸಿದೆ..

ಪ್ರಥಮ ಸೀಪ್ಲೇನ್​ ಸೇವೆ
ಪ್ರಥಮ ಸೀಪ್ಲೇನ್​ ಸೇವೆ

By

Published : Oct 28, 2020, 2:09 PM IST

ನವದೆಹಲಿ:ಗುಜರಾತ್‌ನ ಅಹಮದಾಬಾದ್ (ಸಬರಮತಿ ನದಿಯ ಮುಂಭಾಗ) ಮತ್ತು ಏಕತಾ ಪ್ರತಿಮೆ (ಸ್ಟ್ಯಾಚ್ಯು ಆಫ್ ಯೂನಿಟಿ) ನಡುವೆ ಅಕ್ಟೋಬರ್ 31ರಿಂದ ತನ್ನ ಸೀಪ್ಲೇನ್ ಸೇವೆಯನ್ನು ಪ್ರಾರಂಭಿಸುವುದಾಗಿ ಸ್ಪೈಸ್ ಜೆಟ್ ಬುಧವಾರ ಪ್ರಕಟಿಸಿದೆ.

ಫ್ಲೈಟ್‌ಗಳನ್ನು ಸ್ಪೈಸ್‌ಜೆಟ್‌ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ಸ್ಪೈಸ್ ಷಟಲ್ ನಿರ್ವಹಿಸುತ್ತದೆ. ಇದರ 15 ಆಸನಗಳ ಎರಡು ಟ್ವಿನ್ ಒಟ್ಟರ್ 300 ವಿಮಾನವು ಅಹಮದಾಬಾದ್-ಕೆವಾಡಿಯಾ ಮಾರ್ಗದಲ್ಲಿ ಪ್ರತಿದಿನ ಹಾರಾಡಲಿದೆ.

ಸ್ಪೈಸ್ ಜೆಟ್ ಹೇಳಿಕೆಯ ಪ್ರಕಾರ, ಉಡಾನ್ ಯೋಜನೆಯಡಿ ಒನ್-ವೇ ದರ ರೂ. 1500 ಮತ್ತು ಟಿಕೆಟ್‌ಗಳು ಅಕ್ಟೋಬರ್ 30ರಿಂದ ಲಭ್ಯವಿರುತ್ತವೆ.

ಪ್ರಥಮ ಸೀಪ್ಲೇನ್​ ಸೇವೆ

ಇನ್ನು ಮೂಲಗಳ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ಅಕ್ಟೋಬರ್​ 30ರಂದು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನಾಚರಣೆಯಂದು ಉದ್ಘಾಟನೆ ನಡೆಸಲಿದ್ದಾರೆ. ಈ ವಿಮಾನವು ಬೆಳಗ್ಗೆ 10: 15ಕ್ಕೆ ಅಹಮದಾಬಾದ್‌ನ ಸಬರಮತಿ ರಿವರ್‌ಫ್ರಂಟ್‌ನಿಂದ ಹೊರಟು ಬೆಳಗ್ಗೆ 10: 45ಕ್ಕೆ ಕೆವಾಡಿಯಾದ ಏಕತಾ ಪ್ರತಿಮೆ ಬಳಿ ತಲುಪಲಿದೆ.

ಸ್ಪೈಸ್ ಜೆಟ್​ ಸಂಸ್ಥೆ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಜಯ್ ಸಿಂಗ್ ಈ ಬಗ್ಗೆ ಮಾತನಾಡಿದ್ದು, “ನಮ್ಮ ಮೊದಲ ಸೀಪ್ಲೇನ್ ಸೇವೆಯ ಉಡಾವಣೆಯು ಭಾರತೀಯ ವಾಯುಯಾನ ಇತಿಹಾಸದ ಅತ್ಯಂತ ಗಮನಾರ್ಹ ಘಟನೆಗಳಲ್ಲಿ ಒಂದಾಗಿದೆ. ಪ್ರಧಾನ ಮಂತ್ರಿಯ ದೃಷ್ಟಿಕೋನವನ್ನು ಈಡೇರಿಸುವಲ್ಲಿ ಸ್ಪೈಸ್‌ಜೆಟ್‌ ಭಾಗಿಯಾಗುತ್ತಿರುವುದಕ್ಕೆ ನಾವು ಹೆಮ್ಮೆ ಪಡುತ್ತೇವೆ" ಎಂದರು.

ಸ್ಪೈಸ್ ಜೆಟ್ 2017ರಿಂದ ಭಾರತದಲ್ಲಿ ಸಂಪೂರ್ಣ ಸೀಪ್ಲೇನ್ ಪ್ರಯೋಗಗಳನ್ನು ನಡೆಸಿದೆ. ಜಲಮೂಲಗಳ ಮೂಲಕ ವಾಯು ಸಂಪರ್ಕವನ್ನು ಅನ್ವೇಷಿಸುವ ಏಕೈಕ ಭಾರತೀಯ ವಿಮಾನಯಾನ ಸಂಸ್ಥೆ ಎಂದು ಹೇಳಿಕೊಂಡಿದೆ. ಮೊದಲ ಹಂತದಲ್ಲಿ, ಭೂ ವಿಮಾನದ ಪ್ರಯೋಗಗಳನ್ನು ನಾಗ್ಪುರ ಮತ್ತು ಗುವಾಹಟಿಯಲ್ಲಿ ನಡೆಸಲಾಯಿತು. ಎರಡನೇ ಹಂತವು ಉಭಯಚರ ವಿಮಾನವನ್ನು ಒಳಗೊಂಡಿತ್ತು. ಇದಕ್ಕಾಗಿ ಮುಂಬಯಿಯ ಗಿರ್ಗೌಮ್ ಚೌಪಟ್ಟಿಯಲ್ಲಿ ಪ್ರಯೋಗಗಳು ನಡೆದವು.

ಪ್ರಸ್ತುತ ಸ್ಪೈಸ್ ಜೆಟ್ ಯುಡಿಎಎನ್ ಅಡಿಯಲ್ಲಿ 18 ಸೀಪ್ಲೇನ್ ಮಾರ್ಗಗಳನ್ನು ಪಡೆದುಕೊಂಡಿದೆ. ಇದರಲ್ಲಿ ಅಹಮದಾಬಾದ್-ಕೆವಾಡಿಯಾ (ಸಬರಮತಿ ರಿವರ್ ಫ್ರಂಟ್ ಟು ಸ್ಟ್ಯಾಚ್ಯೂ ಆಫ್ ಯೂನಿಟಿ, ಸರ್ದಾರ್ ಸರೋವರ್), ಅಗಟ್ಟಿ-ಮಿನಿಕಾಯ್, ಅಗಟ್ಟಿ-ಕವರಟ್ಟಿ ಇತರೆ ಸೇರಿವೆ.

ABOUT THE AUTHOR

...view details