ಕರ್ನಾಟಕ

karnataka

ETV Bharat / bharat

ದೆಹಲಿಗೆ ಮತ ಚಲಾಯಿಸಲು ಹೊರಟವರಿಗೆ ಸ್ಪೈಸ್‌ಜೆಟ್ ಸಿಹಿ ಸುದ್ದಿ*

ಫೆಬ್ರವರಿ 8 ರಂದು ಮತದಾನಕ್ಕಾಗಿ ದೆಹಲಿಗೆ ಪ್ರಯಾಣಿಸುತ್ತಿರುವ ಪ್ರಯಾಣಿಕರಿಗೆ ಸ್ಪೈಸ್‌ಜೆಟ್ ಉಚಿತ ಟಿಕೆಟ್ ನೀಡಲಿದೆ

SpiceJet offers 'free tickets' to flyers who are travelling to Delhi for voting on Feb 8
ದೆಹಲಿಗೆ ಮತ ಚಲಾಯಿಸಲು ಹೊರಟವರಿಗೆ ಸ್ಪೈಸ್‌ಜೆಟ್ ನಿಂದ ಉಚಿತ ಟಿಕೆಟ್

By

Published : Feb 5, 2020, 12:01 AM IST

ನವದೆಹಲಿ: ಮುಂಬರಲಿರುವ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಮತ ಮಾಡಲು ದೆಹಲಿಗೆ ಹೋಗಲು ಬಯಸುವವರಿಗೆ ಸ್ಪೈಸ್ ಜೆಟ್ ಸೋಮವಾರದಂದು "ನೂರಾರು" "ಉಚಿತ" ಟಿಕೆಟ್​ಗಳನ್ನು ನೀಡುತ್ತಿದೆ.

ಟಿಕೆಟ್‌ಗೆ ಅನ್ವಯವಾಗುವ ಎಲ್ಲಾ ತೆರಿಗೆಗಳು, ಹೆಚ್ಚುವರಿ ಶುಲ್ಕಗಳು, ಸುಂಕಗಳು ಪ್ರಯಾಣಿಕರು ಪಾವತಿಸಬೇಕಾಗುತ್ತದೆ ಎಂದು ಸ್ಪೈಸ್‌ ಜೆಟ್ ಸ್ಪಷ್ಟಪಡಿಸಿದೆ.

ಅಲ್ಲದೇ, ಶಾರ್ಟ್‌ಲಿಸ್ಟ್‌ಗೆ ಆಯ್ಕೆಯಾದವರು ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸಲು ಫೆಬ್ರವರಿ 7 ಅಥವಾ ಫೆಬ್ರವರಿ 8 ರಂದು ದೆಹಲಿಗೆ ಪ್ರಯಾಣ ಮಾಡಬೇಕು. ಹಾಗೆಯೇ ತಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಟ್ವಿಟರ್ ಪ್ರೊಫೈಲ್‌ಗಳಲ್ಲಿ ಸೆಲ್ಫಿ ಅಪ್‌ಲೋಡ್ ಮಾಡಬೇಕು ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.

ಮತದಾನವು ಪ್ರಜಾಪ್ರಭುತ್ವದ ಒಂದು ದೊಡ್ಡ ಭಾಗವಾಗಿದೆ. ಆದ್ರೆ, ದುರದೃಷ್ಟವಶಾತ್ ನಮ್ಮ ದುಡಿಯುವ ಜನಸಂಖ್ಯೆಯು ತಮ್ಮ ಮನೆಗಳಿಂದ ದೂರವಿರುವುದರಿಂದ ಈ ಹಕ್ಕನ್ನು ಚಲಾಯಿಸಲು ಸಾಧ್ಯವಾಗುತ್ತಿಲ್ಲ ಎಂದು ಸ್ಪೈಸ್ ಜೆಟ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಜಯ್ ಸಿಂಗ್ ಹೇಳಿದ್ದಾರೆ.

ಆನ್‌ಲೈನ್ ನೋಂದಣಿ ಜನವರಿ 31 ರಿಂದ ಫೆಬ್ರವರಿ 5 ರವರೆಗೆ ತೆರೆದಿರುತ್ತದೆ. ಶಾರ್ಟ್‌ಲಿಸ್ಟ್​ನಲ್ಲಿ ಆಯ್ಕೆಯಾದವರಿಗೆ ಫೆಬ್ರವರಿ 6 ರಂದು ತಿಳಿಸಲಾಗುವುದು ಎಂದಿದೆ.

ABOUT THE AUTHOR

...view details