ನವದೆಹಲಿ: ಮಂಗಳವಾರ ಇಂಡಿಗೂ ವಿಮಾನದಲ್ಲಿನ ಕುನಾಲ್ ಕಮ್ರಾ ನಡವಳಿಕೆಯನ್ನು ಖಂಡಿಸಿರುವ ಸ್ಪೈಸ್ ಜೆಟ್, ತನ್ನ ವಿಮಾನದಲ್ಲೂ ಕೂಡ ಕಮ್ರಾ ಅವರ ಪ್ರಯಾಣಕ್ಕೆ ಮುಂದಿನ ಆರು ತಿಂಗಳವರೆಗೆ ಅಮಾನತು ನಿಷೇಧ ಹೇರಿದೆ.
ಸ್ಪೈಸ್ ಜೆಟ್ನಿಂದಲೂ ಕುನಾಲ್ ಕಮ್ರಾಗೆ ನಿಷೇಧ... ಮುಂದಿನ ಸೂಚನೆವರೆಗೆ ವಿಮಾನ ಪ್ರಯಾಣ ಅಮಾನತು - ಪತ್ರಕರ್ತ ಅರ್ನಾಬ್ ಗೋಸ್ವಾಮಿ
ಮಂಗಳವಾರ ಮುಂಬೈಯಿಂದ ಲಕ್ನೋಗೆ ಇಂಡಿಗೊ ವಿಮಾನ 6ಇ5317ರಲ್ಲಿ ಪ್ರಯಾಣಿಸುತ್ತಿದ್ದ ಸ್ಟಾಂಡ್-ಅಪ್ ಕಾಮಿಡಿಯನ್ ಕುನಾಲ್ ಕಮ್ರಾ ಅದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪತ್ರಕರ್ತ ಅರ್ನಾಬ್ ಗೋಸ್ವಾಮಿಯ ಅವಹೇಳನಕಾರಿ ವಿಡಿಯೋವೊಂದನ್ನು ಮಾಡಿ ಆಗಿಂದಾಗಲೇ ತನ್ನ ಟ್ವಿಟರ್ ಅಕೌಂಟ್ನಲ್ಲಿ ಪೋಸ್ಟ್ ಮಾಡಿದ್ದರು. ಈ ಘಟನೆ ಪ್ರತಿಷ್ಠಿತ ಇಂಡಿಗೋ ವಿಮಾನದಲ್ಲಿ ಕುಳಿತು ಪ್ರಯಾಣಿಸುತ್ತಿದ್ದಾಗ ನಡೆದಿದೆ. ಈ ಹಿನ್ನೆಲೆ ಇಂಡಿಗೋ ಸೇರಿದಂತೆ ವಿವಿಧ ವಿಮಾನಯಾನ ಸಂಸ್ಥೆಗಳು ಕಮ್ರಾಗೆ ತಮ್ಮ ವಿಮಾನದಲ್ಲಿ ಪ್ರಯಾಣಿಸುವುದಕ್ಕೆ ನಿಷೇಧ ಹೇರಿವೆ.
ಮಂಗಳವಾರ ಮುಂಬೈಯಿಂದ ಲಕ್ನೋಗೆ ಇಂಡಿಗೊ ವಿಮಾನ 6ಇ5317ರಲ್ಲಿ ಪ್ರಯಾಣಿಸುತ್ತಿದ್ದ ಸ್ಟಾಂಡ್-ಅಪ್ ಕಾಮಿಡಿಯನ್ ಕುನಾಲ್ ಕಮ್ರಾ ಅದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪತ್ರಕರ್ತ ಅರ್ನಾಬ್ ಗೋಸ್ವಾಮಿಯ ಬಗ್ಗೆ ಅವಹೇಳನಕಾರಿ ವಿಡಿಯೋವೊಂದನ್ನು ಮಾಡಿ ಆಗಿಂದಾಗಲೇ ತನ್ನ ಟ್ವಿಟರ್ ಅಕೌಂಟ್ನಲ್ಲಿ ಪೋಸ್ಟ್ ಮಾಡಿದ್ದರು. ಈ ಘಟನೆ ಪ್ರತಿಷ್ಠಿತ ಇಂಡಿಗೋ ವಿಮಾನದಲ್ಲಿ ಕುಳಿತು ಪ್ರಯಾಣಿಸುತ್ತಿದ್ದಾಗ ನಡೆದಿತ್ತು. ಈ ಹಿನ್ನಲೆ ಸ್ಪೈಸ್ ಜೆಟ್ ಕೂಡ ಈ ಮಹತ್ವ ನಿರ್ಧಾರ ಕೈಗೊಂಡಿದೆ.
ಈ ಬಗ್ಗೆ ಸ್ವತಃ ಸ್ಪೈಸ್ ಜೆಟ್ ಹೇಳಿಕೆ ನೀಡಿದ್ದು, ಕಮ್ರಾ ಅವರ ಆನ್‌ಬೋರ್ಡ್ ನಡವಳಿಕೆ(ಹೊರಟ ವಿಮಾನದಲ್ಲಿ ನಡೆದುಕೊಂಡ ರೀತಿ) "ಸ್ವೀಕಾರಾರ್ಹವಲ್ಲ". ಈ ರೀತಿಯ ನಡವಳಿಕೆಗಳು ಸಹ ಪ್ರಯಾಣಿಕರ ಸುರಕ್ಷತೆಗೆ ಧಕ್ಕೆಯುಂಟುಮಾಡುತ್ತದೆ. ಹೀಗಾಗಿ, ಕುನಾಲ್ ಕಮ್ರಾ ಅವರು ಇಂಡಿಗೊದಲ್ಲಿ ಆರು ತಿಂಗಳ ಕಾಲ ಹಾರಾಟ ಮಾಡುವುದನ್ನು ನಾವು ಅಮಾನತುಗೊಳಿಸುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದೆ.