ಹ್ಯೂಸ್ಟನ್(ಅಮೆರಿಕ):ಇಂದು ಅಮೆರಿಕದ ಹ್ಯೂಸ್ಟನ್ನಲ್ಲಿ ನಡೆಯಲಿರುವ 'ಹೌಡಿ ಮೋದಿ' ಕಾರ್ಯಕ್ರಮದಲ್ಲಿ ಭಾರತೀಯ ಮೂಲಕ ವಿಶೇಷ ಚೇತನ ಬಾಲಕನೋರ್ವ ಜನಗಣಮನ ಹಾಡಲಿದ್ದಾರೆ.
'ಹೌಡಿ ಮೋದಿ’ ಮೇನಿಯಾ ಈಗ ಅಮೆರಿಕದಾದ್ಯಂತ ಮನೆ ಮಾಡಿದೆ. ಕಾರ್ಯಕ್ರದಲ್ಲಿ ಸುಮಾರು 400 ಕಲಾವಿದರು ಪ್ರದರ್ಶನ ನೀಡಲಿದ್ದು. ಅದರಲ್ಲೂ ಭಾರತೀಯ ಮೂಲದ ಸ್ಪರ್ಶ್ ಶಾ ಎಂಬ ಯುವಕ 50 ಸಾವಿರಕ್ಕೂ ಹೆಚ್ಚು ಜನ ಭಾಗವಹಿಸುವ ಎನ್ಆರ್ಜಿ ಸ್ಟೇಡಿಯಂನಲ್ಲಿ ಭಾರತದ ರಾಷ್ಟ್ರೀಯ ಗೀತೆ 'ಜನಗಣಮನ'ವನ್ನು ಮೊಳಗಿಸಲಿದ್ದಾರೆ.
ಸುಮಾರು 400 ಕಲಾವಿದರು ಭಾಗವಹಿಸುವ 'ಹೌಡಿ ಮೋದಿ' ಕಾರ್ಯಕ್ರಮದಲ್ಲಿ ಸ್ಪರ್ಶ್ ರಾಷ್ಟ್ರಗೀತೆ ಹಾಡಲು ಆಯ್ಕೆಯಾಗುವ ಮೂಲಕ ಮೋದಿ ಅವರನ್ನು ಪ್ರತ್ಯಕ್ಷವಾಗಿ ನೋಡಬೇಕೆಂಬ ಅವರ ಕನಸನ್ನು ನನಸು ಮಾಡಿಕೊಳ್ಳುತ್ತಿದ್ದಾರೆ.
ಭಾರತದ ಪ್ರಧಾನಿ ಮೋದಿಯವರ ಎದುರಿಗೆ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಜರಿಯಲ್ಲಿ ಭಾರತದ ರಾಷ್ಟ್ರಗೀತೆ ಹಾಡಲು ನನ್ನನ್ನು ಆಹ್ವಾನಿಸುವುದಕ್ಕೆ ನಾನು ಆಭಾರಿಯಾಗಿದ್ದೇನೆ. ಇದು ನನ್ನ ಜೀವನದ ಅತ್ಯಂತ ದೊಡ್ಡ ಘಟನೆ. 50 ಸಾವಿರ ಜನರ ಸಮ್ಮುಖದಲ್ಲಿ ಜನಗಣಮನ ಹಾಡುವುದಕ್ಕೆ ನಾನು ಕಾತರದಿಂದ ಕಾಯುತ್ತಿದ್ದೇನೆ ಎಂದು ಸ್ಪರ್ಶ್ ಶಾ ಟ್ವೀಟ್ ಮಾಡಿದ್ದಾರೆ..
ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಹ್ವಾನ ನೀಡಿರುವ 'ಇಂಡಿಯಾ ಫೋರಮ್ ಮತ್ತು ಮೇಳ ಪ್ರೊಡಕ್ಷನ್ಸ್' ಅವರಿಗೆ ವಿಶೇಷ ಧನ್ಯವಾದ ಅರ್ಪಿಸುತ್ತೇನೆ. ವಿಶೇಷ ಚೇತನ ರೊಂದಿಗೆ ನಾನು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಾಡುತ್ತಿರುವುದಕ್ಕೆ ಹೆಮ್ಮೆ ಎನ್ನಿಸುತ್ತಿದೆ ಎಂದು ಅವರ ಫೇಸ್ಬುಕ್ ಪೇಜ್ನಲ್ಲಿ ಶಾ ಬರೆದುಕೊಂಡಿದ್ದಾರೆ.
11 ತರಗತಿ ಓದುತ್ತಿರುವ ಸ್ಪರ್ಶ್ ಶಾ ಹಾಡುಗಾರ, ಬರಹಗಾರ, ರ‍್ಯಾಪರ್ ಹಾಗೂ ಸ್ಪೂರ್ತಿದಾಯಕ ಮಾತುಗಾರನಾಗಿ ಎಷ್ಟೋ ಜನರ ಜೀವನ ಬದಲಾಯಿದ್ದಾನೆ. ಆದರೆ ದುರಾದೃಷ್ಟವೆಂದರೆ ಇವರು ಆಸ್ಟಿಯೋಜೆನಿಸಿಸ್ ಇಂಪರ್ಫೆಕ್ಟಾ ಎಂಬ ಮೂಳೆಗೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇದರಿಂದ ನಡೆಯಲೂ, ಓಡಲು ಅಷ್ಟೇ ಯಾಕೆ ಸ್ಪರ್ಶ್ ಶಾ ನಿಂದ ಕೈಕುಲುಕಲು ಸಹ ಸಾಧ್ಯವಿಲ್ಲ. ಈ ಕಾಯಿಲೆಯಿಂದ ಇಲ್ಲಿಯವರೆಗೆ ಇವರ 135 ಮೂಳೆಗಳು ಮುರಿದಿವೆ ಎಂಬುದು ಶಾಕಿಂಗ್ ವಿಚಾರ.