ನಹಾನ್ (ಹಿಮಾಚಲ ಪ್ರದೇಶ):ಇದು ಯಾವುದೇ ಹೀರ್-ರಂಜಾ, ರೋಮಿಯೋ ಜೂಲಿಯೆಟ್ ಕುರಿತಾದ ಸ್ಟೋರಿಯಲ್ಲ. ಹಿಮಾಚಲ ಪ್ರದೇಶದ ಐತಿಹಾಸಿಕ ನಗರವಾದ ನಹಾನ್‌ನಲ್ಲಿನ ಐತಿಹಾಸಿಕ ಸಮಾಧಿಗಳಲ್ಲಿ ಬಂಧಿಯಾಗಿರೋ ಪ್ರೇಮಕಥೆಯಿದು. ಪತಿಯ ಸಮಾಧಿ ಪಕ್ಕದಲ್ಲಿಯೇ 38 ವರ್ಷಗಳ ಬಳಿಕ ಸಮಾಧಿಯಾದ ಪತ್ನಿ. ಪತಿ, ಪತ್ನಿಯರ ನಡುವಿನ ಪ್ರೀತಿ, ಪ್ರೇಮ ಎಂಬ ಬಾಂಧವ್ಯ ಎಷ್ಟು ಗಟ್ಟಿಯಾದದು ಎಂಬುದಕ್ಕೆ ಅಲ್ಲಿನ ಸಮಾಧಿಗಳೇ ಸಾಕ್ಷಿಯಾಗಿವೆ.
ಅದು ಭಾರತದಲ್ಲಿ ಬ್ರಿಟಿಷರ ಆಡಳಿತ ನಡೆಸುತ್ತಿದ್ದ ಕಾಲ. ಆಗ ಇಂಗ್ಲಿಷ್ ಅಧಿಕಾರಿ ಇಡ್ವಿನ್ ಪಿಯರ್ಸಲ್ ಹಾಗೂ ಆತನ ಪತ್ನಿ ಲೂಸಿಯಾ ಪಿಯರ್ಸಲ್ ಭಾರತಕ್ಕೆ ಬಂದಿದ್ದರು. ಮಹಾರಾಜನ ಆಡಳಿತದಲ್ಲಿ ಇಡ್ವಿನ್ ಮೆಡಿಕಲ್ ಸೂಪರಿಟೆಂಡೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಆದ್ರೆ 1883ರಲ್ಲಿ ಇಡ್ವಿನ್ ತಮ್ಮ 50ನೇ ವಯಸ್ಸಿನಲ್ಲಿ ಇಲ್ಲಿಯೇ ಮೃತರಾಗ್ತಾರೆ. ಆಗ ಮಹಾರಾಜರು ನಹಾನ್‌ನಲ್ಲಿಯೇ ಇಡ್ವಿನ್ರ ಸಮಾಧಿ ನಿರ್ಮಿಸುತ್ತಾರೆ. ಹೀಗೆ ಪತಿ ತಮ್ಮನ್ನ ಅಗಲಿದ್ರೂ ಕೂಡ ಸ್ವದೇಶಕ್ಕೆ ತೆರಳದ ಲೂಸಿಯಾ ಭಾರತದಲ್ಲೇ ನೆಲೆಸಿರ್ತಾರೆ. ಅದಕ್ಕೆ ಕಾರಣ ಅವರಲ್ಲಿ ಇರೋ ಒಂದು ಕೊನೆಯಾಸೆ ಹಾಗೂ ಪತಿಯನ್ನು ಬಿಟ್ಟಿರಲಾರದ ಬಾಂಧವ್ಯ.