ನವದೆಹಲಿ:ಭಾರತಕ್ಕೆ ಆಗಮಿಸಲಿರೋ ಡೊನಾಲ್ಡ್ ಟ್ರಂಪ್ ದಂಪತಿಯ ಸ್ವಾಗತಕ್ಕಾಗಿ ಈಗಾಗಲೇ ಭಾರತ ಭರ್ಜರಿ ತಯಾರಿ ನಡೆಸಿದೆ.
ಟ್ರಂಪ್ ದಂಪತಿಗಾಗಿ ವಿಶೇಷ ಖಾದ್ಯ: ಫಸ್ಟ್ ಲೇಡಿಗೆ '' ಧೋಕ್ಲಾ''ಫೇವರಿಟ್ ಅಂತೆ - ಟ್ರಂಪ್ ದಂಪತಿ ಫುಡ್ ಮೆನು
ಭಾರತಕ್ಕೆ ಭೇಟಿ ನೀಡುತ್ತಿರುವ ಡೊನಾಲ್ಡ್ ಟ್ರಂಪ್ ದಂಪತಿಗಾಗಿ ವಿಶೇಷ ಖಾದ್ಯಗಳನ್ನು ತಯಾರು ಮಾಡಲಾಗ್ತಿದೆ.
![ಟ್ರಂಪ್ ದಂಪತಿಗಾಗಿ ವಿಶೇಷ ಖಾದ್ಯ: ಫಸ್ಟ್ ಲೇಡಿಗೆ '' ಧೋಕ್ಲಾ''ಫೇವರಿಟ್ ಅಂತೆ Special Khaman is being prepared as US President](https://etvbharatimages.akamaized.net/etvbharat/prod-images/768-512-6174481-thumbnail-3x2-surya.jpg)
ಟ್ರಂಪ್ ದಂಪತಿಗಾಗಿ ವಿಶೇಷ ಖಾದ್ಯ
ಅಷ್ಟೇ ಅಲ್ಲ ಅಮೆರಿಕ ಅಧ್ಯಕ್ಷರಿಗೆಂದೇ ವಿಶೇಷ ಖಾದ್ಯಗಳನ್ನು ಕೂಡ ತಯಾರು ಮಾಡಲಾಗ್ತಿದೆ. ಟ್ರಂಪ್ ಪತ್ನಿ ಮೆಲಾನಿಯಾ ಗೆ ಗುಜರಾತಿ ಸ್ಪೆಶಲ್ ಧೋಕ್ಲಾ ಸ್ವೀಟ್ ಅಚ್ಚುಮೆಚ್ಚಿನ ತಿನಿಸಾಗಿದ್ದು,ಅಡುಗೆ ತಯಾರಾಕರಾದ ಸುರೇಶ್ ಖನ್ನಾ ಈ ವಿಶೇಷ ಖಾದ್ಯವನ್ನು ತಯಾರಿಸುತ್ತಿದ್ದಾರೆ.
ಗುಜರಾತಿ ಸ್ಟೈಲ್ನಲ್ಲಿ ಅಡುಗೆ ತಯಾರಿಸಲಾಗ್ತಿದ್ದು, ಟ್ರಂಪ್ ದಂಪತಿ ಊಟದ ಮೆನುವಿನಲ್ಲಿ ಕೇವಲ ಸಸ್ಯಹಾರಿ ಉಪಹಾರ ಮಾತ್ರ ಇರಲಿದೆ ಅಂತೆ. ಟ್ರಂಪ್ ದಂಪತಿ ಈ ಊಟ ಸೇವಿಸುವ ಮೊದಲು ಆಹಾರ ನಿರೀಕ್ಷಕರು ಟೇಸ್ಟ್ ಮಾಡಿ ಪರಿಶೀಲನೆ ಮಾಡಲಿದ್ದಾರೆ. ನಂತರ ಟ್ರಂಪ್ ದಂಪತಿ ಈ ವಿಶೇಷ ಖಾದ್ಯಗಳನ್ನು ಸವಿಯಲಿದ್ದಾರೆ.