ಕರ್ನಾಟಕ

karnataka

ETV Bharat / bharat

ಇಂದು 'ಅಂತಾರಾಷ್ಟ್ರೀಯ ಸಮಾನ ವೇತನ ದಿನ': ಸ್ತ್ರೀ-ಪುರುಷ ಸಮಾನ ವೇತನದಲ್ಲಿ ಭಾರತಕ್ಕೆ ಎಷ್ಟನೇ ಸ್ಥಾನ? - Global gender pay gap

ದುಡಿಮೆಯ ಕಾರ್ಮಿಕ ಮಾರುಕಟ್ಟೆಯಲ್ಲಿ ಲಿಂಗ ತಾರತಮ್ಯ, ವೇತನ ನೀಡಿಕೆಯಲ್ಲಿ ಅಂತರ, ಉದ್ಯೋಗಕ್ಕೆ ಮಹಿಳೆಯರನ್ನು ತೆಗೆದುಕೊಳ್ಳುವುದಕ್ಕೆ ಹಿಂದೇಟು ಸೇರಿದಂತೆ ಹಲವು ಸಂಗತಿಗಳು ಎಲ್ಲಾ ದೇಶಗಳಲ್ಲಿ ಕಂಡುಬರುತ್ತಿವೆ. ಲಿಂಗ ತಾರತಮ್ಯ ವೇತನವೆಂದರೆ, ಪುರುಷರ ಸರಾಸರಿ ಆದಾಯಕ್ಕೆ ಹೋಲಿಕೆ ಮಾಡಿ ಸ್ತ್ರೀ ಮತ್ತು ಪುರುಷರ ಸರಾಸರಿ ಗಳಿಕೆಯ ನಡುವಿನ ವ್ಯತ್ಯಾಸ ಎನ್ನಲಾಗುತ್ತದೆ.

Special article on International Equal Pay Day
ಸಮಾನ ವೇತನ ದಿನ

By

Published : Sep 18, 2020, 7:32 AM IST

ಜಗತ್ತಿನಾದ್ಯಂತ ಹಲವು ಕಂಪನಿಗಳು ವೈವಿಧ್ಯಮಯ ಬಹುಸಂಸ್ಕೃತಿಯ ಸಂಸ್ಥೆಗಳಾಗಿ ಮಾರ್ಪಟ್ಟಿವೆ. ಇಂತಹ ಸಂಸ್ಥೆಗಳಲ್ಲಿ ಸ್ತ್ರೀ-ಪುರುಷರು ಸಮನಾಗಿ ದುಡಿಯುತ್ತಿದ್ದಾರೆ. ಪುರುಷ ಮತ್ತು ಮಹಿಳಾ ಸಿಬ್ಬಂದಿ ನಡುವಣ ವೇತನ ತಾರತಮ್ಯವನ್ನು ತುರ್ತಾಗಿ ನಿಭಾಯಿಸಬೇಕಾಗಿದೆ. ಇಂದು 'ಅಂತಾರಾಷ್ಟ್ರೀಯ ಸಮಾನ ವೇತನ ದಿನ' ಅಂಗವಾಗಿ ವೃತ್ತಿ- ಕುಟುಂಬ ನಿರ್ವಹಣೆಯ ಜೊತೆಗೆ ಮಹಿಳೆ ಪಡೆಯುತ್ತಿರುವ ವೇತನದ ಸಂಕ್ಷಿಪ್ತ ನೋಟ.

ದುಡಿಮೆಯ ಕಾರ್ಮಿಕ ಮಾರುಕಟ್ಟೆಯಲ್ಲಿ ಲಿಂಗ ತಾರತಮ್ಯ, ವೇತನ ನೀಡಿಕೆಯಲ್ಲಿ ಅಂತರ, ಉದ್ಯೋಗಕ್ಕೆ ಮಹಿಳೆಯರನ್ನು ತೆಗೆದುಕೊಳ್ಳುವುದಕ್ಕೆ ಹಿಂದೇಟು ಸೇರಿದಂತೆ ಹಲವು ಸಂಗತಿಗಳು ಎಲ್ಲಾ ದೇಶಗಳಲ್ಲಿ ಕಂಡುಬರುತ್ತಿವೆ. ಲಿಂಗ ತಾರತಮ್ಯ ವೇತನವೆಂದರೆ, ಪುರುಷರ ಸರಾಸರಿ ಆದಾಯಕ್ಕೆ ಹೋಲಿಕೆ ಮಾಡಿ ಸ್ತ್ರೀ ಮತ್ತು ಪುರುಷರ ಸರಾಸರಿ ಗಳಿಕೆಯ ನಡುವಿನ ವ್ಯತ್ಯಾಸ ಎನ್ನಲಾಗುತ್ತದೆ.

ವೃತ್ತಿ ರಂಗದ ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಪುರುಷರಿಗಿಂತ ಕಡಿಮೆ ವೇತನ ನೀಡಲಾಗುತ್ತದೆ. ಲಿಂಗ ವೇತನದ ಅಂತರವು ಜಾಗತಿಕವಾಗಿ ಶೇ 23ರಷ್ಟಿದೆ. ಮಹಿಳೆಯರು ಮತ್ತು ಪುರುಷರ ನಡುವಿನ ರಚನಾತ್ಮಕ ಅಸಮಾನ ಸಂಬಂಧಗಳು, ಬಡತನದ ಅಸಮಾನತೆಗಳು, ಮಹಿಳೆಯರ ಸಾಮರ್ಥ್ಯಗಳನ್ನು ಸೀಮಿತಗೊಳಿಸುವ ಸಂಪನ್ಮೂಲಗಳು ಮತ್ತು ಅವಕಾಶಗಳ ಪ್ರವೇಶದಲ್ಲಿನ ಅನಾನುಕೂಲತೆಗಳಿಂದಾಗಿ ಲಿಂಗ ಸಮಾನತೆ ಮತ್ತು ಮಹಿಳೆಯರ ಸಬಲೀಕರಣಕ್ಕೆ ತಡೆಗೋಡೆಯಾಗಿವೆ.

2020ರ ಜಾಗತಿಕ ಲಿಂಗ ಅನುಪಾತ ಅಂತರ ವರದಿಯ ಪ್ರಕಾರ, ಸಮಾನ ಕೆಲಸಕ್ಕೆ ಸಮಾನ ವೇತನ ನೀಡದೆ ದೇಶಗಳ ಪಟ್ಟಿಯಲ್ಲಿ ಭಾರತಕ್ಕೆ 112ನೇ ಸ್ಥಾನ ಸಿಕ್ಕಿದೆ. ಆದಾಯದ ವ್ಯತ್ಯಾಸಗಳು ಸಾಕಷ್ಟು ದೊಡ್ಡದಾಗಿದೆ. ಮಹಿಳೆಯ ಆದಾಯದ ಜಾಗತಿಕ ಸರಾಸರಿ ಸುಮಾರು, 11,000 ಡಾಲರ್​ (ಖರೀದಿಸುವ ಶಕ್ತಿ, ಪಿಪಿಪಿ) ಮತ್ತು ಪುರುಷನ ಸರಾಸರಿ ಆದಾಯ 21,000 ಡಾಲರ್​ನಷ್ಟಿದೆ. ಇದು ವೇತನ ತಾರತಮ್ಯಕ್ಕೆ ಹಿಡಿದ ಕೈಗನ್ನಡಿ. ಈ ಸೂಚ್ಯಂಕದಲ್ಲಿ ಭಾರತವು 2018ರಲ್ಲಿ ಹಿಂದಿನ 108ನೇ ಸ್ಥಾನದಿಂದ 112ನೇ ಸ್ಥಾನಕ್ಕೆ ಕುಸಿದಿದೆ ಯೋಚಿಸಬೇಕಾದ ಸಂಗತಿ.

ದೇಶದಲ್ಲಿ ಲಿಂಗ ವೇತನದ ಅಂತರದ ಕಾರಣಗಳು ಹೆಚ್ಚು ಸಂಕೀರ್ಣವಾಗಿವೆ. ಸಾಮಾಜಿಕ ಮತ್ತು ಆರ್ಥಿಕತೆಯಿಂದ ಆರಂಭವಾಗುತ್ತವೆ. ಹೆಣ್ಣು ಮಕ್ಕಳನ್ನು ಕೆಲವೊಮ್ಮೆ ಶಾಲೆಗಳಿಂದ ದೂರ ಇಡಲಾಗುತ್ತದೆ. ಅಥವಾ ಬೇಗನೆ ಶಾಲೆಯನ್ನು ತ್ಯಜಿಸುವಂತೆ ಮಾಡಲಾಗುತ್ತದೆ. ಅವರು ವಿದ್ಯಾವಂತರಾಗಿದ್ದರೂ ಅನೇಕ ಮಹಿಳೆಯರಿಗೆ ಉನ್ನತ ಹಂತದ ವಿದ್ಯಾಭ್ಯಾಸಕ್ಕೆ ಕುಟುಂಬದಿಂದ ಅನುಮತಿ ಸಿಗುತ್ತಿಲ್ಲ. ವೃತ್ತಿ ಕ್ಷೇತ್ರಕ್ಕೆ ಹೆಜ್ಜೆ ಹಾಕುವ ಮಹಿಳೆಯು ಮಾತೃತ್ವ, ಮಕ್ಕಳ ಆರೈಕೆ, ಕುಟುಂಬದ ಇತರ ಸದಸ್ಯರ ಆರೋಗ್ಯ ರಕ್ಷಣೆಯನ್ನೂ ನೋಡಿಕೊಳ್ಳಬೇಕಾಗುತ್ತದೆ.

ಜಾಗತಿಕ ಲಿಂಗ ಅನುಪಾತ ಅಂತರ ವರದಿಯ ಪ್ರಕಾರ, ಲಿಂಗ ವೇತನ ಸಮಾನತೆಯಲ್ಲಿ ಮುನ್ನುಗ್ಗುತ್ತಿರುವ ಅಗ್ರ ನಾಲ್ಕು ರಾಷ್ಟ್ರಗಳ ಸಂಕ್ಷಿಪ್ತ ಮಾಹಿತಿ ಹೀಗಿದೆ:

  • ಐರ್ಲೆಂಡ್ :ಕಾರ್ಮಿಕ ಮಾರುಕಟ್ಟೆಯಲ್ಲಿ ಶೇ 85.8ರಷ್ಟು ಪಾಲು ಮಹಿಳೆಯರು ಇದ್ದಾರೆ. ಹಿರಿಯ ಮತ್ತು ವ್ಯವಸ್ಥಾಪಕ ನಿರ್ವಹಣೆಯ ಜವಾಬ್ದಾರಿ ಸಹ ಹೊತ್ತಿದ್ದಾರೆ (ಹಿರಿಯ ಅಧಿಕಾರಿಗಳು ಶೇ 41.5ರಷ್ಟು ಮಹಿಳೆಯರು). ಹೆಚ್ಚುವರಿಯಾಗಿ, ಕಂಪನಿಗಳ ಆಡಳಿತ ಮಂಡಳಿಯ ಸದಸ್ಯರಲ್ಲಿ ಮಹಿಳೆಯರು ಶೇ 43ರಷ್ಟಿದ್ದಾರೆ. ಸಂಸತ್ತಿನಲ್ಲಿ (ಶೇ 38.1ರಷ್ಟು) ಮತ್ತು ಸಚಿವರ ಹಂತದ ಸ್ಥಾನಗಳಲ್ಲಿ (ಶೇ 40ರಷ್ಟು) ಮಹಿಳೆಯರ ಗಮನಾರ್ಹವಾಗಿ ಪ್ರಾತಿನಿಧ್ಯ ಹೊಂದಿದ್ದಾರೆ. ಆರ್ಥಿಕ ಭಾಗವಹಿಸುವಿಕೆ ಮತ್ತು ಅವಕಾಶಗಳ ವಿಚಾರದಲ್ಲಿ ಐಲ್ಯಾಂಡ್​ ಉತ್ತಮ ಸಾಧನೆ ತೋರಿದೆ.
  • ನಾರ್ವೆ : ಕಾರ್ಮಿಕರ ಪಾಲ್ಗೊಳ್ಳುವಿಕೆಯಲ್ಲಿ ನಾರ್ವೆಯ ಶೇ 94.5ರಷ್ಟು ಮಹಿಳೆಯರು ಪುರುಷರಿಗೆ ಸಮನಾಗಿದ್ದಾರೆ. ವೃತ್ತಿಪರ ಮತ್ತು ತಾಂತ್ರಿಕ ಕೆಲಸಗಾರರಲ್ಲಿ ಪುರುಷರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರಿದ್ದಾರೆ. ಮಹಿಳೆಯರು ಪುರುಷರಿಗಿಂತ ವ್ಯವಸ್ಥಾಪಕ ಹುದ್ದೆಗಳನ್ನು ಅಲಂಕರಿಸುವ ಸಾಧ್ಯತೆ ಕಡಿಮೆ. (ಹಿರಿಯ ಶ್ರೇಣಿಯಯಲ್ಲಿ ಮಹಿಳೆ ಮತ್ತು ಪುರುಷರ ನಡುವಿನ ಅಂತರ ಶೇ 35.6ರಷ್ಟು ಮತ್ತು ಶೇ 64.4ರಷ್ಟು). ರಾಜಕೀಯ ಸಬಲೀಕರಣದಲ್ಲಿ ನಾರ್ವೆ 2ನೇ ಸ್ಥಾನದಲ್ಲಿದ್ದು, ಸಂಸದರ ಪೈಕಿ ಶೇ 40.8ರಷ್ಟು ಮತ್ತು ಮಂತ್ರಿಗಳಲ್ಲಿ ಶೇ 42ರಷ್ಟು ಮಹಿಳೆಯರಿದ್ದಾರೆ. ಅಂದರೆ ಇನ್ನೂ ಶೇ 50ರಷ್ಟಕ್ಕಿಂತ ಕಡಿಮೆ ಇದ್ದಾರೆ.
  • ಫಿನ್​ಲ್ಯಾಂಡ್ :ಫಿನ್​ಲ್ಯಾಂಡ್​ ಸಂಸತ್ತಿನಲ್ಲಿ ಮಹಿಳೆಯರು ಮತ್ತು ಪುರುಷರ ನಡುವಿನ ಅಂತರವು ಹಿಂದಿನ ಮೌಲ್ಯಮಾಪನದಲ್ಲಿನ ಶೇ 42ರಷ್ಟರಿಂದ ಶೇ 47ಕ್ಕೆ ಏರಿಕೆಯಾಗಿದೆ. ಇದು ಮಂತ್ರಿ ಸ್ಥಾನಗಳಲ್ಲಿ ಶೇ 37.5ರಷ್ಟು ಮಹಿಳೆಯರ ಪಾಲು ಸ್ವಲ್ಪ ಕಡಿಮೆಯಾಗಿದೆ. ಹಿರಿಯ ಶ್ರೇಣಿಯ ಪಾತ್ರಗಳಲ್ಲಿ ಶೇ 31.8ರಷ್ಟಿದ್ದು, 2018ರಲ್ಲಿ ಶೇ 31.3ರಷ್ಟಿತ್ತು. ಆರ್ಥಿಕವಾಗಿ ಭಾಗವಹಿಸುವಿಕೆ ಮತ್ತು ಅವಕಾಶದ ಅಂತರದಂತಹ ಉಳಿದ ಅಂಶಗಳು ಗಣನೀಯವಾಗಿ ಸ್ಥಿರವಾಗಿವೆ. ಕಾರ್ಮಿಕ ಬಲದ ಭಾಗವಹಿಸುವಿಕೆಯ ಅಂತರವು ತುಲನಾತ್ಮಕವಾಗಿ ಕಿರಿದಾಗಿದೆ. ನುರಿತ ಪಾತ್ರಗಳಲ್ಲಿ ಮಹಿಳೆಯರ ಪಾಲು ಈಗಾಗಲೇ ಪುರುಷರಿಗಿಂತ ಹೆಚ್ಚಾಗಿದೆ.
  • ಸ್ವೀಡನ್ :​ ಕಾರ್ಮಿಕ ಬಲದ ಭಾಗವಹಿಸುವಿಕೆ ಶೇ 81ರಷ್ಟಿದ್ದು, ಆದಾಯ ಲಿಂಗ ಅಂತರ ಶೇ 76.9ರಷ್ಟಿದೆ. ಮಹಿಳಾ ವ್ಯವಸ್ಥಾಪಕ ನಿರ್ವಹಣೆಯಲ್ಲಿ ಶೇ 38.6ರಷ್ಟಿದ್ದರೆ, ನುರಿತ ಕೆಲಸಗಾರು ಶೇ 50ಕ್ಕಿಂತ ಅಧಿಕವಾಗಿದ್ದಾರೆ. ನಾರ್ಡಿಕ್ ರಾಷ್ಟ್ರಗಳಲ್ಲಿ ಎಸ್​​ಟಿಇಎಂ ಯೋಜನೆಗಳಿಂದಾಗಿ ಮಹಿಳಾ ಪದವೀಧರರಲ್ಲಿ ಸ್ವೀಡನ್ ಹೆಚ್ಚಿನ ಪಾಲ ಹೊಂದಿದೆ. ನಿರ್ದೇಶಕರ ಮಂಡಳಿಗಳಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಾಗಿದ್ದು, ಸ್ವೀಡನ್ ಜಾಗತಿಕವಾಗಿ ನಾಲ್ಕನೇ ಸ್ಥಾನದಲ್ಲಿದೆ.

ಭಾರತದಲ್ಲಿನ ಲಿಂಗ ಅಂತರ : ಜಾಗತಿಕ ಲಿಂಗ ಅಂತರ ಸೂಚ್ಯಂಕದಲ್ಲಿ ಭಾರತ 112ನೇ ಸ್ಥಾನದಲ್ಲಿದೆ. ದೇಶವು ತನ್ನ ಒಟ್ಟಾರೆ ಲಿಂಗ ಅಂತರದ ಮೂರನೇ ಎರಡರಷ್ಟು ( ಶೇ 66.8ರಷ್ಟು) ಹೊಂದಿದೆ. ಅಧ್ಯಯನಕ್ಕೆ ಒಳಪಡಿಸಿದ 153 ದೇಶಗಳಲ್ಲಿ ಆರ್ಥಿಕ ಲಿಂಗ ಅಂತರವು ಭಾರತದಲ್ಲಿ ವಿಶೇಷವಾಗಿ ಕಂಡು ಬರುತ್ತದೆ. ಮೂರನೇ ಒಂದು ಭಾಗದಷ್ಟು ಅಂತರವನ್ನು ಮಾತ್ರವೇ ಸದ್ಯದ ಮಟ್ಟಿಗೆ ನಿವಾರಿಸಲಾಗಿದೆ. ರಾಜಕೀಯ ಲಿಂಗ ಅಂತರಕ್ಕಿಂತ ಆರ್ಥಿಕ ಲಿಂಗ ಅಂತರ ಹೆಚ್ಚಾಗಿರುವ ಏಕೈಕ ದೇಶ ಭಾರತವಾಗಿದೆ.

ಶೇ 82ರಷ್ಟು ಪುರುಷರೊಂದಿಗೆ ಹೋಲಿಸಿದರೆ ಕಾಲು ಭಾಗದಷ್ಟು ಮಹಿಳೆಯರು ಮಾತ್ರ ಕಾರ್ಮಿಕ ಮಾರುಕಟ್ಟೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಇದು ವಿಶ್ವದ ಅತ್ಯಂತ ಕಡಿಮೆ ಭಾಗವಹಿಸುವಿಕೆಯ ದರಗಳಲ್ಲಿ ಒಂದಾಗಿದೆ (145ನೇ ಸ್ಥಾನ). ಸ್ತ್ರೀಯರು ಅಂದಾಜು ಗಳಿಕೆಯ ಆದಾಯವು ಪುರುಷ ಆದಾಯದ ಐದನೇ ಒಂದು ಭಾಗದಷ್ಟಿದೆ. ಇದು ವಿಶ್ವದ ಅತ್ಯಂತ ಕಡಿಮೆ ಮೊತ್ತವಾಗಿದೆ. ಮಹಿಳೆಯರು ಕೇವಲ ಶೇ 14ರಷ್ಟು ಮಾತ್ರ ನಾಯಕತ್ವದ ಪಾತ್ರದಲ್ಲಿದ್ದರೆ, ಶೇ 30ರಷ್ಟು ವೃತ್ತಿಪರ ಮತ್ತು ತಾಂತ್ರಿಕ ಕೆಲಸಗಾರರಾಗಿ ದುಡಿಯುತ್ತಿದ್ದಾರೆ.

ಹೆಲ್ತ್ ಆ್ಯಂಡ್​ ಸರ್ವೈವಲ್ ಸಬ್‌ಇಂಡೆಕ್ಸ್‌ನಲ್ಲಿ ಭಾರತವು 150ನೇ ಸ್ಥಾನದಲ್ಲಿದೆ. ಹಿಂಸೆ, ಬಲವಂತದ ಮದುವೆ ಮತ್ತು ಆರೋಗ್ಯದಲ್ಲಿ ಏರುಪೇರುನಂತಹ ವಿಚಾರಗಳಿಂದ ಲಿಂಗ ತಾರತಮ್ಯತೆ ಕಂಡುಬರುತ್ತಿದೆ. ಪ್ರಾಥಮಿಕದಿಂದ ಕಾಲೇಜು ಶಿಕ್ಷಣದ ತನಕ ತರಗತಿಗೆ ಹಾಜರಾಗುವ ಮಹಿಳೆಯರ ಪಾಲು ಪುರುಷರ ಪಾಲುಗಿಂತ ದೊಡ್ಡದಾಗಿದೆ.

ಶೇ 82ರಷ್ಟು ಪುರುಷರೊಂದಿಗೆ ಹೋಲಿಸಿದರೆ ಮೂರನೇ ಎರಡರಷ್ಟು ಮಹಿಳೆಯರು ಮಾತ್ರ ಸಾಕ್ಷರರಾಗಿದ್ದಾರೆ. ಇನ್ನು ಮಹಿಳೆಯರು ಸಂಸತ್ತಿನಲ್ಲಿ ಶೇ 14.4ರಷ್ಟು (122ನೇ) ಮತ್ತು ಕ್ಯಾಬಿನೆಟ್‌ನಲ್ಲಿ ಶೇ 23ರಷ್ಟು (69ನೇ) ಸ್ಥಾನ ಪಡೆದುಕೊಂಡಿದ್ದಾರೆ.

ABOUT THE AUTHOR

...view details