ಚೆನ್ನೈ(ತಮಿಳುನಾಡು):ತಂದೆ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಯಥಾಸ್ಥಿತಿಯಲ್ಲಿದೆ. ಅವರು ವೆಂಟಿಲೇಟರ್ನಲ್ಲಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಎಸ್.ಪಿ.ಬಿ ಪುತ್ರ ಎಸ್.ಪಿ. ಚರಣ್ ತಿಳಿಸಿದ್ದಾರೆ.
ಅಪ್ಪನ ಆರೋಗ್ಯ ಯಥಾಸ್ಥಿತಿಯಲ್ಲಿದೆ, ನಿಮ್ಮೆಲ್ಲರ ಪ್ರಾರ್ಥನೆಗೆ ಧನ್ಯವಾದ: ಎಸ್ಪಿಬಿ ಪುತ್ರ ಚರಣ್ ಸ್ಪಷ್ಟನೆ - ಎಸ್.ಪಿ. ಬಾಲಸುಬ್ರಹ್ಮಣ್ಯಂ ಪುತ್ರ ಎಸ್.ಪಿ. ಚರಣ್
ತಂದೆ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಯಥಾಸ್ಥಿತಿಯಲ್ಲಿದ್ದು, ಅವರು ವೆಂಟಿಲೇಟರ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಎಸ್.ಪಿ.ಬಿ ಪುತ್ರ ಎಸ್.ಪಿ. ಚರಣ್ ಹೇಳಿದ್ದಾರೆ.
sp-charan-speaks-on-spb-health
ಅವರು ವೆಂಟಿಲೇಟರ್ನಲ್ಲಿಲ್ಲ ಎಂಬ ಸುದ್ದಿಗಳು ಹರಿದಾಡುತ್ತಿದ್ದು, ಅದು ಸುಳ್ಳುಸುದ್ದಿಯಾಗಿದೆ. ವೈದ್ಯರು ಅವರಿಗೆ ಸೂಕ್ತವಾದ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಅವರು ಗುಣಮುಖರಾಗಲು ನಿಮ್ಮೆಲ್ಲರ ಪ್ರಾರ್ಥನೆ ಸಹಾಯ ಮಾಡಲಿದೆ ಎಂಬ ವಿಶ್ವಾಸ ನಮಗಿದೆ. ನಿಮ್ಮ ಪ್ರೀತಿ, ಕಾಳಜಿ ಹಾಗೂ ಪ್ರಾರ್ಥನೆಗೆ ಧನ್ಯವಾದಗಳು ಎಂದು ಎಸ್.ಪಿ. ಚರಣ್ ಹೇಳಿದ್ದಾರೆ.
Last Updated : Aug 18, 2020, 5:58 PM IST