ನವದೆಹಲಿ: ಮುಂದಿನ 72 ಗಂಟೆಗಳ ಭಾರತದ ಕೆಲವೆಡೆ ವಿಪರೀತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಆದರೆ, ಬಹುತೇಕ ಭಾಗಗಳಲ್ಲಿ ತಾಪಮಾನ ಯಥಾಸ್ಥಿತಿ ಇರಲಿದ್ದು, ಮತ್ತೆ ಕೆಲವೆಡೆ ಇನ್ನಷ್ಟು ಏರಿಕೆಯಾಗುವ ಮಾಹಿತಿಯನ್ನೂ ನೀಡಿದೆ.
72 ಗಂಟೆಗಳಲ್ಲಿ ನೈರುತ್ಯ ಮುಂಗಾರು ಪ್ರವೇಶಿಸಲಿದ್ದು, ಬಂಗಾಳ, ಅಂಡಮಾನ್ ದ್ವೀಪ ಪ್ರದೇಶ ಹಾಗೂ ಉತ್ತರ ಅಂಡಮಾನ್ ಸಮುದ್ರ ಪ್ರದೇಶಗಳಲ್ಲಿ ಮಳೆಯಾಗಲಿದೆ. ಅಲ್ಲದೆ, ಈಶಾನ್ಯ ರಾಜ್ಯಗಳಾದ ಅಸ್ಸೋಂ, ಮಣಿಪುರ, ನಾಗಾಲ್ಯಾಂಡ್, ಸಿಕ್ಕಿಂ ಹಾಗೂ ತ್ರಿಪುಗಳಲ್ಲಿ ಮೇ 29ರಿಂದ ಜೂನ್ವರೆಗೆ ಧಾರಕಾರ ಮಳೆ ಸುರಿಯಲಿದೆ ಎಂದು ಇಲಾಖೆ ಹೇಳಿದೆ.