ಮಧುರೈ (ತಮಿಳುನಾಡು):ದಕ್ಷಿಣ ರೈಲ್ವೆ ವಿಭಾಗದ ರೈಲುಗಳ ಮೂಲಕ ತಮಿಳುನಾಡಿನ ಮಧುರೈ ಪಟ್ಟಣದಿಂದ ಬಾಂಗ್ಲಾದೇಶಕ್ಕೆ ಸ್ಥಳೀಯವಾಗಿ ಉತ್ಪಾದನೆ ಮಾಡಿದ ಸುಮಾರು 170ಕ್ಕೂ ಹೆಚ್ಚು ಟ್ರ್ಯಾಕ್ಟರ್ಗಳನ್ನು ರಫ್ತು ಮಾಡಲಾಗಿದೆ.
25 ರೈಲುಗಳಲ್ಲಿ 170 ಟ್ರ್ಯಾಕ್ಟರ್ಗಳನ್ನು ಒಂದೇ ಬಾರಿಗೆ ಸಾಗಿಸಿದ್ದು ಇದೇ ಮೊದಲಾಗಿದ್ದು, ಮಧುರೈನ ವಾಡಿಪಟ್ಟಿಯಲ್ಲಿರುವ ಟಫೆ ಕಾರ್ಖಾನೆಯಿಂದ ಬಾಂಗ್ಲಾದೇಶಕ್ಕೆ ದಕ್ಷಿಣ ರೈಲ್ವೆ ತನ್ನ ಸರಕು ಸಾಗಣೆ ರೈಲಿನಲ್ಲಿ ಟ್ರ್ಯಾಕ್ಟರ್ಗಳನ್ನು ಹೊತ್ತೊಯ್ದಿದೆ.
2019ರಲ್ಲಿ ಟಫೆ ಟ್ರ್ಯಾಕ್ಟರ್ ಉತ್ಪಾದನಾ ಕೈಗಾರಿಕೆಯು 12 ಸರಕು ಸಾಗಣೆ ರೈಲುಗಳಲ್ಲಿ ಟ್ರ್ಯಾಕ್ಟರ್ಗಳನ್ನು ಕಳುಹಿಸಲಾಗಿತ್ತು. 2020ಣೇ ವರ್ಷದಲ್ಲಿ 61 ಟ್ರ್ಯಾಕ್ಟರ್ಗಳ ರವಾನೆ ಮೂಲಕ 11.78 ಕೋಟಿ ರೂಪಾಯಿ ಆದಾಯ ಹರಿದು ಬಂದಿದೆ ಎಂದು ವರದಿಗಳು ತಿಳಿಸಿವೆ.