ಕರ್ನಾಟಕ

karnataka

ETV Bharat / bharat

ಕೊರೊನಾ ಜಾಗೃತಿಗೆ ಪಂಚಭಾಷಾ ಧಾರಾವಾಹಿ ತಾರೆಗಳಿಂದ 'ಸ್ಟೇ ಹೋಮ್​' ಕಿರುಚಿತ್ರ - ಕೊರೊನಾ ಕುರಿತು ಜಾಗೃತಿ

ಕೊರೊನಾ ಕುರಿತು ಜಾಗೃತಿ ಮೂಡಿಸಲು ತೆಲುಗಿನ 34 ಮಂದಿ ಧಾರಾವಾಹಿ ತಾರೆಗಳು 'ಸ್ಟೇ ಹೋಮ್' ಎಂಬ ಕಿರುಚಿತ್ರದಲ್ಲಿ ಕಾಣಿಸಿಕೊಂಡಿದ್ದು, ಇದು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್​ ಆಗಿದೆ.

ಕಿರುಚಿತ್ರ
ಕಿರುಚಿತ್ರ

By

Published : Apr 16, 2020, 5:13 PM IST

ಇಡೀ ಜಗತ್ತನ್ನೇ ಕಾಡುತ್ತಿರುವ ಕೊರೊನಾ ವೈರಸ್​​ ಭಾರತದಲ್ಲೂ ಹೆಮ್ಮಾರಿಯಂತೆ ತನ್ನ ಕಬಂಧಬಾಹುಗಳನ್ನು ಚಾಚುತ್ತಿದೆ. ಇದನ್ನು ಕಟ್ಟಿಹಾಕಲು ಕೇಂದ್ರ ಸರ್ಕಾರ ಎರಡನೇ ಬಾರಿ ಲಾಕ್​​ಡೌನ್​ ಆದೇಶ ಹೊರಡಿಸಿದೆ.

ಈ ಕಷ್ಟದ ಸಂದರ್ಭದಲ್ಲಿ ಸಿನಿಮಾ, ರಾಜಕೀಯ ಮತ್ತು ವ್ಯಾಪಾರ ವಲಯಗಳ ಪ್ರಮುಖರು ಸರ್ಕಾರವನ್ನು ಬೆಂಬಲಿಸಿ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ. ಪ್ರಮುಖವಾಗಿ ಸಿನಿಮಾ ತಾರೆಯರು ಕೊರೊನಾ ವಿರುದ್ಧದ ಈ ಹೋರಾಟದಲ್ಲಿ ಸಾಮಾಜಿಕ ಜಾಲತಾಣವನ್ನು ವೇದಿಕೆಯಾಗಿಸಿಕೊಂಡು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಹತ್ತಿರವಾಗಿದ್ದಾರೆ. ಇತ್ತೀಚೆಗೆ, ಎಲ್ಲಾ ಚಲನಚಿತ್ರೋದ್ಯಮದ ದಿಗ್ಗಜ ತಾರೆಯರು 'ಫ್ಯಾಮಿಲಿ' ಎಂಬ ಕಿರುಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಪ್ರಸೂನ್ ಪಾಂಡೆ ನಿರ್ದೇಶನದ ಈ ಕಿರುಚಿತ್ರ ಹೆಚ್ಚು ಮೆಚ್ಚುಗೆಗೆ ಪಾತ್ರವಾಗಿದೆ. ಇದರಿಂದ ಪ್ರೇರಿತರಾಗಿರುವ ದಕ್ಷಿಣ ಭಾರತದ ಧಾರಾವಾಹಿ​​ ತಾರೆಯರು ಸಹ ಕಿರುಚಿತ್ರ ಮಾಡಿದ್ದಾರೆ. ಈ ಕಿರುಚಿತ್ರದ ಮತ್ತೊಂದು ವೈಶಿಷ್ಟ್ಯವೆಂದರೆ ಅವರೆಲ್ಲರೂ ಮನೆಯಲ್ಲಿದ್ದುಕೊಂಡೇ ಈ ಶಾರ್ಟ್​​ ಫಿಲ್ಮ್​ ಮಾಡಿರೋದು.

ಧಾರವಾಹಿ ತಾರೆಗಳ ಕಿರುಚಿತ್ರ

ದಕ್ಷಿಣದ ಧಾರವಾಹಿ ತಾರೆಗಳಾದ ಯಮುನಾ, ಜಯಲಲಿತಾ, ಶುಭಲೇಖ ಸುಧಾಕರ್, ಪ್ರಭಾಕರ್, ಸಮೀರ್, ಜಾಕಿ, ಅರ್ಚನಾ, ಕೌಶಿಕ್, ನಿರುಪಮ್​, ಗೆಟಪ್ ಶ್ರೀನು ಸೇರಿದಂತೆ 34 ಮಂದಿ ಸೀರಿಯಲ್​​ ನಟರನ್ನು 29 ಮನೆಗಳಲ್ಲಿ 29 ಮೊಬೈಲ್ ಕ್ಯಾಮರಾಗಳೊಂದಿಗೆ ಚಿತ್ರೀಕರಿಸಲಾಗಿದೆ. ರವಿಕಿರಣ್​ ಕಿರುಚಿತ್ರವನ್ನು ನಿರ್ದೇಶಿಸಿದ್ದು, 5 ಭಾಷೆಗಳನ್ನು ಕಿರುಚಿತ್ರ ಒಳಗೊಂಡಿದೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ABOUT THE AUTHOR

...view details