ನವದೆಹಲಿ:ದೇಶದ ರೈಲ್ವೆ ಇಲಾಖೆಯಲ್ಲಿನ ಅತ್ಯಂತ ವೇಗದ ಟ್ರೈನ್ 'ವಂದೇ ಭಾರತ್ ಎಕ್ಸ್ಪ್ರೆಸ್' ಸಂಚಾರ ಯಶಸ್ವಿಯಾಗಿ ಸಾಗುತ್ತಿರುವ ಬೆನ್ನಲ್ಲೇ ದಕ್ಷಿಣ ಏಷ್ಯಾ ರಾಷ್ಟ್ರಗಳಿಂದ ಭಾರತದಲ್ಲಿ ತಯಾರಾಗುತ್ತಿರುವ ಕೋಚ್‌ಗಳಿಗೆ ಬೇಡಿಕೆ ಬಂದಿದೆ.
ಚಾಲಕ ರಹಿತ ರೈಲುಗಳನ್ನು ತಯಾರಿಸುತ್ತಿರುವ ರಾಷ್ಟ್ರೀಯ ಸಂಚಾರ ಪ್ರಸ್ತುತ ನೂತನ ಯೋಜನೆ ಹಾಕಿಕೊಂಡಿದೆ.ರೈಲ್ವೆ ಅಧಿಕಾರಿಗಳು ನೀಡಿದ ಮಾಹಿತಿ ಅನ್ವಯ, ಗಂಟೆಗೆ 180 ಕಿ.ಮೀ. ವೇಗದ ರೈಲ್ವೆ ಕೋಚ್‌ಗಳಿಗೆ ಪ್ರಥಮ ಬಾರಿಗೆ ಹೊರ ರಾಷ್ಟ್ರಗಳಿಂದ ಬೇಡಿಕೆ ಬರುತ್ತಿದೆ. ಸದ್ಯದ ತಯಾರಿಕೆಯನ್ನು ಇನ್ನಷ್ಟು ವೇಗಗೊಳಿಸಿ ಭವಿಷ್ಯದಲ್ಲಿ 'ಟ್ರೈನ್ 18' ಗಳನ್ನು ರಫ್ತು ಮಾಡಲಾಗುತ್ತದೆ ಎಂಬುದು ತಿಳಿದುಬಂದಿದೆ.