ಸಿಕಂದರಾಬಾದ್:ಸೌತ್ ಸೆಂಟ್ರಲ್ ರೈಲ್ವೆ (ಎಸ್‌ಸಿಆರ್) ಲಾಕ್ಡೌನ್ ಆರಂಭದಿಂದ ಈವರೆಗೆ ಆಂಧ್ರ ಪ್ರದೇಶದ ರೆನಿಗುಂಟಾದಿಂದ ನವದೆಹಲಿಗೆ 3 ಕೋಟಿ ಲೀಟರ್ ಹಾಲನ್ನು "ದೂಧ್ ಡುರೊಂಟೊ ಸ್ಪೆಷಲ್" ರೈಲುಗಳ ಮೂಲಕ ರವಾನಿಸಿದೆ ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
"ರಾಷ್ಟ್ರ ರಾಜಧಾನಿಯ ಜನರಿಗೆ ಹಾಲು ಪೂರೈಸಲು ರೆನಿಗುಂಟಾದಿಂದ ಹಜರತ್ ನಿಜಾಮುದ್ದೀನ್ವರೆಗೆ ಲಾಕ್ಡೌನ್ ಅವಧಿಯಲ್ಲಿ ಪರಿಚಯಿಸಲಾದ ದೂಧ್ ಡುರೊಂಟೊ ಸ್ಪೆಷಲ್ ರೈಲು ಸೋಮವಾರ 3 ಕೋಟಿ ಲೀಟರ್ ಹಾಲು ಪೂರೈಸಿದೆ" ಎಂದು ಎಸ್‌ಸಿಆರ್ ವಕ್ತಾರ ಸಿ.ಹೆಚ್.ರಾಕೇಶ್ ಹೇಳಿದ್ದಾರೆ.