ಕೊಲ್ಕತ್ತಾ:ಬಂಗಾಳ ಕ್ರಿಕೆಟ್ ಅಸೋಸಿಯೇಷನ್ ಕಾರ್ಯದರ್ಶಿ ಮತ್ತು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಯ ಹಿರಿಯ ಸಹೋದರ ಸ್ನೇಹಶಿಶ್ ಗಂಗೂಲಿ ಅವರಿಗೆ ಕೋವಿಡ್-19 ದೃಢಪಟ್ಟಿದೆ.
ಸಹೋದರ ಸ್ನೇಹಶಿಶ್ಗೆ ಕೋವಿಡ್ ದೃಢ: ಸ್ವಯಂ ಕ್ವಾರಂಟೈನ್ ಆದ ಸೌರವ್ ಗಂಗೂಲಿ - ಸೌರವ್ ಗಂಗೂಲಿ ಸಹೋದರ ಸ್ನೇಹಶಿಶ್ ಗಂಗೂಲಿಗೆ ಕೊರೊನಾ ಪಾಸಿಟಿವ್
ಪಶ್ಚಿಮ ಬಂಗಾಳ ಕ್ರಿಕೆಟ್ ಅಸೋಸಿಯೇಷನ್ ಕಾರ್ಯದರ್ಶಿ ಮತ್ತು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಯ ಹಿರಿಯ ಸಹೋದರ ಸ್ನೇಹಶಿಶ್ ಗಂಗೂಲಿ ಅವರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.
![ಸಹೋದರ ಸ್ನೇಹಶಿಶ್ಗೆ ಕೋವಿಡ್ ದೃಢ: ಸ್ವಯಂ ಕ್ವಾರಂಟೈನ್ ಆದ ಸೌರವ್ ಗಂಗೂಲಿ Snehashish Ganguly tests positive for Covid-19](https://etvbharatimages.akamaized.net/etvbharat/prod-images/768-512-8043173-thumbnail-3x2-news.jpg)
ಸೌರವ್ ಸಹೋದರ ಸ್ನೇಹಶಿಶ್ ಗಂಗೂಲಿಗೆ ಕೋವಿಡ್ ದೃಢ
ಕೊಲ್ಕತ್ತಾದ ಖಾಸಗಿ ಪ್ರಯೋಗಾಲಯದಲ್ಲಿ ಸ್ನೇಹಶಿಶ್ ಅವರ ಸ್ವ್ಯಾಬ್ ಪರೀಕ್ಷೆ ನಡೆಸಲಾಗಿದ್ದು, ಕೊರೊನಾ ಪಾಸಿಟಿವ್ ವರದಿ ಬಂದಿದೆ. ಸಹೋದರನಿಗೆ ಕೋವಿಡ್ ಪಾಸಿಟಿವ್ ಹಿನ್ನೆಲೆ ಸೌರವ್ ಸೇರಿದಂತೆ ಅವರ ಎಲ್ಲಾ ಕುಟುಂಬ ಸದಸ್ಯರು ಸ್ವಯಂ ಕ್ವಾರಂಟೈನ್ ಆಗಿದ್ದಾರೆ.
ಸೌರವ್ ಜುಲೈ 8ರಂದು ತಮ್ಮ ಹುಟ್ಟುಹಬ್ಬವನ್ನು ಕುಟುಂಬದ ಎಲ್ಲ ಸದಸ್ಯರೊಂದಿಗೆ ಆಚರಿಸಿದ್ದಾರೆ ಎಂದು ತಿಳಿದುಬಂದಿದೆ. ಇತ್ತೀಚೆಗೆ ಬಿಡುಗಡೆ ಮಾಡಿದ ಪರಿಷ್ಕೃತ ಆರೋಗ್ಯ ಸಲಹೆಯ ಪ್ರಕಾರ, 10 ದಿನಗಳ ಐಸೋಲೇಷನ್ ಕಡ್ಡಾಯವಾಗಿದೆ.
Last Updated : Jul 16, 2020, 6:57 AM IST