ಕರ್ನಾಟಕ

karnataka

ETV Bharat / bharat

ಕಾಶ್ಮೀರದಲ್ಲಿ ಎಂಟು ಉಗ್ರರ ಬಂಧನ... ಪೊಲೀಸರಿಂದ ತೀವ್ರ ತನಿಖೆ - ಲಷ್ಕರ್ ಉಗ್ರ ಸಂಘಟನೆ

ಪ್ರಾಥಮಿಕ ತನಿಖೆ ಪ್ರಕಾರ ಎಂಟು ಮಂದಿ ಉಗ್ರರಲ್ಲಿ ಮೂವರು ಲಷ್ಕರ್ ಉಗ್ರ ಸಂಘಟನೆಗೆ ಸೇರಿದವರಾಗಿದ್ದಾರೆ. ಉಗ್ರರ ಬಳಿಯಿದ್ದ ಎಲ್ಲ ಕಂಪ್ಯೂಟರ್ ಸೇರಿದಂತೆ ಎಲ್ಲ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಖಾಕಿಪಡೆ ಹೆಚ್ಚಿನ ತನಿಖೆಯನ್ನು ನಡೆಸುತ್ತಿದೆ.

ಉಗ್ರರ ಬಂಧನ

By

Published : Sep 10, 2019, 8:59 AM IST

ನವದೆಹಲಿ:ಭಾರತ ಮೇಲೆ ಉಗ್ರ ಕೃತ್ಯಕ್ಕೆ ಸಂಚು ಹಾಕಿದ್ದ ಎಂಟು ಮಂದಿ ಭಯೋತ್ಪಾದಕರನ್ನು ಸೊಪೊರ್ ಪೊಲೀಸರು ಬಂಧಿಸಿದ್ದಾರೆ.

ಪ್ರಾಥಮಿಕ ತನಿಖೆಯ ಪ್ರಕಾರ ಎಂಟು ಮಂದಿ ಉಗ್ರರಲ್ಲಿ ಮೂವರು ಲಷ್ಕರ್ ಉಗ್ರ ಸಂಘಟನೆಗೆ ಸೇರಿದವರಾಗಿದ್ದಾರೆ. ಉಗ್ರರ ಬಳಿಯಿದ್ದ ಎಲ್ಲ ಕಂಪ್ಯೂಟರ್ ಸೇರಿದಂತೆ ಎಲ್ಲ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಖಾಕಿಪಡೆ ಹೆಚ್ಚಿನ ತನಿಖೆ ನಡೆಸುತ್ತಿದೆ.

ಸದ್ಯ ಬಂಧಿತ ಉಗ್ರರು ಪೋಸ್ಟರ್​ಗಳನ್ನು ಹಂಚುವುದಲ್ಲದೇ, ಸ್ಥಳೀಯರಿಗೆ ಬೆದರಿಕೆ ಹಾಕುವ ಕಾರ್ಯ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಒಂದನ್ನು ಗಡಿಭಾಗದ ಜನರಿಗೆ ಹಂಚುತ್ತಿದ್ದರು. ಬಂಧಿತರನ್ನು ಐಜಾಜ್ ಮಿರ್, ಒಮರ್ ಮಿರ್, ತೌಸೀಫ್​ ನಜರ್, ಇಮ್ತಿಯಾಜ್ ನಜರ್, ಒಮರ್ ಅಕ್ಬರ್, ಫೈಜಾನ್ ಲತೀಫ್, ಡ್ಯಾನಿಷ್ ಹಬೀಬ್ ಹಾಗೂ ಶೌಕತ್ ಅಹ್ಮದ್ ಮಿರ್ ಎಂದು ಗುರುತಿಸಲಾಗಿದೆ.

ABOUT THE AUTHOR

...view details