ಕರ್ನಾಟಕ

karnataka

ETV Bharat / bharat

ಸಂಕಷ್ಟದಲ್ಲಿ ಸಹಾಯ ಮಾಡ್ತಿರುವ ಖುಷಿ, ರಾಜಕೀಯದಲ್ಲಿ ಆಸಕ್ತಿ ಇಲ್ಲ ಎಂದ ಸೋನು ಸೂದ್​! - ಬಾಲಿವುಡ್ ನಟ

ಈಟಿವಿ ಭಾರತ್​ ಜತೆ ಎಕ್ಸ್​ಕ್ಲೂಸಿವ್​​ ಸಂದರ್ಶನದಲ್ಲಿ ಭಾಗಿಯಾದ ನಟ ಸೋನು ಸೂದ್​ ಅನೇಕ ವಿಷಯಗಳ ಕುರಿತು ಮಾತನಾಡಿದ್ದಾರೆ. ಏನೆಲ್ಲ ಮಾಹಿತಿ ಹಂಚಿಕೊಂಡಿದ್ದಾರೆ ನೋಡಿ..

Sonu Sood
Sonu Sood

By

Published : Jul 27, 2020, 8:08 PM IST

ಹೈದರಾಬಾದ್​:ಕೊರೊನಾ ಮಹಾಮಾರಿ ವೇಳೆ ಸಂಕಷ್ಟಕ್ಕೆ ಸಿಲುಕಿಕೊಂಡಿರುವ ಸಾವಿರಾರು ಕುಟುಂಬಗಳಿಗೆ ನಟ ಸೋನು ಸೂದ್​ ಸಹಾಯ ಮಾಡಿ ಮಾನವೀಯತೆ ಮೆರೆಯುತ್ತಿದ್ದು, ಎಲ್ಲರಿಂದಲೂ ಮೆಚ್ಚುಗೆಗೆ ಒಳಗಾಗುತ್ತಿದ್ದಾರೆ.

ತಮ್ಮ ಕಾರ್ಯದ ಬಗ್ಗೆ ಈಟಿವಿ ಭಾರತ್​ ಜತೆ ಎಕ್ಸ್​ಕ್ಲೂಸಿವ್​ ಸಂದರ್ಶನದಲ್ಲಿ ಭಾಗಿಯಾಗಿ ಮಾತನಾಡಿದ ನಟ, ಸಂಕಷ್ಟದ ವೇಳೆ ಜನರಿಗೆ ಸಹಾಯ ಮಾಡುವುದು ಖುಷಿ ನೀಡುತ್ತದೆ ಎಂದಿದ್ದು, ಮುಂದಿನ ದಿನಗಳಲ್ಲೂ ಇದು ಮುಂದುವರೆಯಲಿದೆ ಎಂದು ತಿಳಿಸಿದ್ದಾರೆ. ರಾಜಕೀಯ ಉದ್ದೇಶದಿಂದ ಈ ಕೆಲಸ ಮಾಡುತ್ತಿದ್ದಾರೆ ಎಂದು ಅವರ ವಿರುದ್ಧ ಕೇಳಿ ಬಂದಿರುವ ಆರೋಪಕ್ಕೂ ಪ್ರತಿಕ್ರಿಯೆ ನೀಡಿರುವ ನಟ, ರಾಜಕೀಯದಲ್ಲಿ ನನಗೆ ಯಾವುದೇ ರೀತಿಯ ಆಸಕ್ತಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈಟಿವಿ ಭಾರತ್​ ಜತೆ ಸೋನು ಸೂದ್​ ಮಾತು

ಸಾವಿರಾರು ಕುಟುಂಬಗಳ ಆಶೀರ್ವಾದ ನನ್ನ ಮೇಲೆ ಇರುವುದರಿಂದಲೇ ಈ ಕೆಲಸ ಮಾಡಲು ನನಗೆ ಶಕ್ತಿ ಸಿಕ್ಕಿದೆ. ನನ್ನ ತಂದೆ-ತಾಯಿ ಇದೇ ಶಿಕ್ಷಣ ನನಗೆ ನೀಡಿದ್ದು, ಇತರರಿಗೆ ಕೆಲಸ ಮಾಡುವುದರಿಂದಲೇ ಸಂತೋಷ ಸಿಗುತ್ತದೆ ಎಂದಿದ್ದಾರೆ.

ಜನರು ನನ್ನ ಬಳಿ ಬರುವಾಗ ಯಾವುದಾದರೊಂದು ಭರವಸೆ ಹಾಗೂ ನಂಬಿಕೆ ಇಟ್ಟುಕೊಂಡು ಬರುತ್ತಾರೆ. ಹೀಗಾಗಿ ನಾನು ಅವರಿಗೆ ನಿರಾಸೆ ಮಾಡಲು ಇಷ್ಟಪಡುವುದಿಲ್ಲ. ದಿನದ 15-16 ಗಂಟೆ ಜನರ ಸಹಾಯ ಮಾಡಲು ಮೀಸಲಿಟ್ಟಿದ್ದೇನೆ ಎಂದಿದ್ದಾರೆ. ಆರಂಭದಲ್ಲಿ ಈ ಕೆಲಸ ನಾನು ಏಕಾಂಗಿಯಾಗಿ ಆರಂಭಿಸಿದ್ದೆ. ಆದರೆ ಇದೀಗ ನನ್ನ ಸ್ನೇಹಿತರು ಈ ಕೆಲಸದಲ್ಲಿ ಶಾಮೀಲು ಆಗಿದ್ದಾರೆ ಎಂದು ತಿಳಿಸಿದ್ದಾರೆ.

ABOUT THE AUTHOR

...view details