ಕರ್ನಾಟಕ

karnataka

ETV Bharat / bharat

‘ಮೌಂಟೇನ್​ ಮ್ಯಾನ್​’ ಕುಟುಂಬಕ್ಕೆ ಸಹಾಯ ಮಾಡಿದ ‘ಶಕ್ತಿಮಾನ್​’! - ನಟ ಸೋನು ಸೂದ್,

ಮೌಂಟೇನ್​ ಮ್ಯಾನ್​ ಎಂಬ ಖ್ಯಾತ ಪಡೆದಿದ್ದ ದಶರಥ ಮಾಂಜಿ ಕುಟುಂಬಕ್ಕೆ ಬಾಲಿವುಡ್​ ಶಕ್ತಿಮಾನ್​ ಸೋನು ಸೂದ್​ ಸಹಾಯ ಮಾಡಿದ್ದಾರೆ.

Sonu Sood extends financial help to mountain Man, Sonu Sood extends financial help to Dashrath Manjhi, Mountain Man, Dashrath Manjhi, Dashrath Manjhi news, Bollywood actor Sonu Sood, Bollywood actor Sonu Sood news, ದಶರಥ್ ಮಾಂಜಿ ಕುಟುಂಬಕ್ಕೆ ಸಹಾಯ ಮಾಡಿದ ಸೋನು ಸೂದ್​, ಮೌಂಟೇನ್​ ಮ್ಯಾನ್, ಶಕ್ತಿಮಾನ್​, ದಶರಥ್ ಮಾಂಜಿ, ದಶರಥ್ ಮಾಂಜಿ ಸುದ್ದಿ, ನಟ ಸೋನು ಸೂದ್, ನಟ ಸೋನು ಸೂದ್ ಸುದ್ದಿ,
ದಶರಥ ಮಾಂಜಿ ಕುಟುಂಬಕ್ಕೆ ಸೋನು ಸೂದ್​ ಸಹಾಯ

By

Published : Jul 27, 2020, 8:16 AM IST

ಗಯಾ (ಬಿಹಾರ):ಆರ್ಥಿಕ ಸಂಕಷ್ಟದಲ್ಲಿದ್ದ ವಲಸಿಗರ ಪಾಲಿನ ಆಪತ್ಬಾಂಧವನಾಗಿದ್ದ ನಟ ಸೋನು ಸೂದ್​ ಇತ್ತೀಚೆಗಷ್ಟೇ ಆಂಧ್ರಪ್ರದೇಶದ ಕುಟುಂಬವೊಂದಕ್ಕೆ ಟ್ರ್ಯಾಕ್ಟರ್​ ನೀಡಿ ಸಹಾಯ ಮಾಡಿದ್ದರು. ಅವರ ಸಹಾಯದ ಸರಣಿ ಹೀಗೆ ಮುಂದುವರಿದಿದೆ.

ಹೌದು, ಈಗ ಅವರ ಸಹಾಯ ಬಿಹಾರಕ್ಕೂ ತಲುಪಿದೆ. ಆರ್ಥಿಕ ಸಂಕಷ್ಟದಲ್ಲಿರುವ 'ಮೌಂಟೇನ್ ಮ್ಯಾನ್' ದಶರಥ್ ಮಾಂಜಿ ಅವರ ಕುಟುಂಬಕ್ಕೆ ನಟ ಸೋನು ಸೂದ್ ಸಹಾಯ ಹಸ್ತ ಚಾಚಿ ಶಕ್ತಿಮಾನ್​ ಎನಿಸಿಕೊಂಡಿದ್ದಾರೆ.

'ಮೌಂಟೇನ್ ಮ್ಯಾನ್' ದಶರಥ ಮಾಂಜಿ ಅವರ ಕುಟುಂಬ ತೀರಾ ಕಷ್ಟದಲ್ಲಿದೆ. ಅವರು ಹಣಕಾಸಿನ ಮುಗ್ಗಟ್ಟಿನಿಂದ ಪಾರಾಗಲು ಹೆಣಗಾಡುತ್ತಿದ್ದಾರೆ. ಅವರಿಗೆ ನಿಮ್ಮ ಸಹಾಯಬೇಕು ಎಂದು ಟ್ವಿಟರ್​​​​ ಬಳಕೆದಾರರೊಬ್ಬರು ಲೇಖನವೊಂದನ್ನು ಬರೆದು ಸಹಾಯ ಕೋರಿದ್ದರು.

ಇದಕ್ಕೆ ಸೋನು ಸೂದ್​​​​ ರೀ ಟ್ವೀಟ್​ ಮಾಡಿ, ‘ಅವರು ಇನ್ಮುಂದೆ ಆರ್ಥಿಕ ಸಹಾಯಕ್ಕಾಗಿ ಇತರರನ್ನು ಅವಲಂಬಿಸಬೇಕಾಗಿಲ್ಲ. ನಾನು ಅವರಿಗೆ ಸಹಾಯ ಮಾಡುತ್ತೇನೆ’ ಎಂದಿದ್ದರು.

ಈ ಸುದ್ದಿ ಕೇಳಿದ ನಂತರ, ದಶರಥ ಮಾಂಜಿ ಅವರ ಗೌಸರ್​ ಗ್ರಾಮಸ್ಥರು ನಟ ಸೋನು ಸೂದ್​​ ಅವರ ಸಹಾಯಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.

ದಶರಥ ಮಾಂಜಿ ಕುಟುಂಬಕ್ಕೆ ಸೋನು ಸೂದ್​ ಸಹಾಯ

ಈ ಬಗ್ಗೆ ಮಾತನಾಡಿರುವ ದಶರಥ್​ ಮಾಂಜಿ ಅವರ ಪುತ್ರ ಭಗೀರಥ್ ಮಾಂಜಿ, ‘ನನ್ನ 2 ವರ್ಷದ ಮೊಮ್ಮಗಳ ವೈದ್ಯಕೀಯ ಚಿಕಿತ್ಸೆಗಾಗಿ ನಾವು 30,000 ರೂ. ಸಾಲವನ್ನು ತೆಗೆದುಕೊಂಡಿದ್ದೇವೆ. ಚಿಕಿತ್ಸೆಗೆ ಸಹಾಯ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದೇವೆ. ನನ್ನ ಕೈಯಲ್ಲಿ ಯಾವುದೇ ಕೆಲಸವಿಲ್ಲದ ಕಾರಣ ಚಿಕಿತ್ಸೆ ಕೊಡಿಸುವುದು ಕಷ್ಟವಾಗಿದೆ. ಈ ಸಂಕಷ್ಟದ ಸಮಯದಲ್ಲಿ ಸೋನು ಸೂದ್​ ಸಹಾಯ ಮಾಡಲು ಮುಂದೆ ಬಂದಿರುವುದು ಸಂತಸ ತಂದಿದೆ’ ಎಂದಿದ್ದಾರೆ.

‘ನಮಗೆ ಸಹಾಯ ಮಾಡಿದ್ದಕ್ಕಾಗಿ ನಾನು ಅವರಿಗೆ ಕೃತಜ್ಞನಾಗಿದ್ದೇನೆ. ಸೋನು ಸೂದ್ ಜಿ ಒಮ್ಮೆ ನನ್ನ ಮನೆಗೆ ಬಂದು, ನಾವು ಯಾವ ಪರಿಸ್ಥಿತಿಯಲ್ಲಿದ್ದೇವೆ ಎಂದು ನೋಡಿ’ ಎಂದು ಭಗೀರಥ್ ಕೇಳಿಕೊಂಡಿದ್ದಾರೆ.

ದಶರಥ್​ ಮಾಂಜಿ ಬೆಟ್ಟವನ್ನ ಕಡಿದು ರಸ್ತೆ ನಿರ್ಮಾಣ ಮಾಡಿ ಎಲ್ಲರಿಗೆ ಮಾದರಿಯಾಗಿದ್ದರು. ಇವರ ಈ ಸಾಹಸ ಚಲನಚಿತ್ರವೂ ಆಗಿತ್ತು.

ABOUT THE AUTHOR

...view details