ಮುಂಬೈ:ನಗರದಲ್ಲಿ ಸಿಲುಕಿಕೊಂಡಿದ್ದ ಕರ್ನಾಟಕದ ಕಾರ್ಮಿಕರನ್ನು ತಮ್ಮ ಊರುಗಳಿಗೆ ಕಳುಹಿಸಿಕೊಡಲು ನಟ ಸೋನು ಸೂದ್ ಬಸ್ಸ್‌ಗಳ ವ್ಯವಸ್ಥೆ ಮಾಡಿದ್ದರು. ಇದೀಗ ಮತ್ತೊಮ್ಮೆ ಕಾರ್ಮಿಕರ ನೆರವಿಗೆ ಬಂದಿರುವ ಸೋನು, ಉತ್ತರ ಪ್ರದೇಶದ ಕಾರ್ಮಿಕರನ್ನು ಮನೆಗಳಿಗೆ ಕಳುಹಿಸಲು ಅಲ್ಲಿನ ಸರ್ಕಾರದಿಂದ ಅನುಮತಿ ಪಡೆದಿದ್ದಾರೆ.
ಶನಿವಾರ ಹತ್ತಾರು ಬಸ್ಗಳು ವಡಾಲಾ, ಮುಂಬೈನಿಂದ ಉತ್ತರ ಪ್ರದೇಶ, ಜಾರ್ಖಂಡ್ ಹಾಗೂ ಬಿಹಾರದ ವಿವಿಧ ಪ್ರದೇಶಗಳಿಗೆ ತಲುಪಿಸಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಬಹುಭಾಷಾ ನಟ ಸೂದ್, ಕಷ್ಟದಲ್ಲಿರುವ ಜನರನ್ನು ನೋಡುವುದು ಹೇಗೆ ಎಂದು ನನಗೆ ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ. ಕಾರ್ಮಿಕರು ಅಂತಿಮವಾಗಿ ತಮ್ಮ ಪ್ರಯಾಣವನ್ನು ಆರಾಮಗೊಳಿಸಿ ಮನೆಗೆ ಹೊರಟಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
ಇದು ನಿಜವಾಗಿಯೂ ನನ್ನನ್ನು ದುಃಖಕ್ಕೀಡುಮಾಡಿತು
ವಲಸಿಗರು ತಮ್ಮ ಕುಟುಂಬಗಳೊಂದಿಗೆ ನೂರಾರು ಕಿಲೋಮೀಟರ್ ನಡೆದು ಹೇಗೆ ಹೋಗುತ್ತಿದ್ದಾರೆ ಎಂಬುದರ ಕುರಿತು ನಾನು ಸಾಕಷ್ಟು ಓದುತ್ತಿದ್ದೆ. ಇದು ನಿಜವಾಗಿಯೂ ನನ್ನನ್ನು ದುಃಖಕ್ಕೀಡುಮಾಡಿತ್ತು. ಇದನ್ನು ನೋಡಿಯೂ ನನಗೆ ಹಾಗೆ ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಾಗಲಿಲ್ಲ. ಅಲ್ಲದೆ ನಾನು ಈ ದೇಶದ ಪ್ರಜೆಯಾಗಿ ಮತ್ತು ಒಬ್ಬ ಮನುಷ್ಯನಾಗಿ, ಸರ್ಕಾರದ ಅನುಮತಿಯನ್ನು ತೆಗೆದುಕೊಳ್ಳುವ ನಿರ್ಧಾರಕ್ಕೆ ಮುಂದಾದೆ ಎಂದು ಹೇಳಿದ್ದಾರೆ.