ಇಂದೋರ್ (ಮಧ್ಯಪ್ರದೇಶ):ಇಂದೋರ್ ಮುನ್ಸಿಪಲ್ ಕಾರ್ಮಿಕರ ತಂಡವು ನಗರದ ಹೊರವಲಯದಲ್ಲಿರುವ ಹೆದ್ದಾರಿಯ ಪಕ್ಕದಲ್ಲಿ ವಯಸ್ಸಾದ ನಿರಾಶ್ರಿತರನ್ನು ತಂದು ಬಿಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ಗಮನಿಸಿದ ಸ್ಥಳೀಯರು ಅವರನ್ನು ಮರಳಿ ಆಶ್ರಮಕ್ಕೆ ಕರೆದುಕೊಂಡು ಹೋಗುವಂತೆ ಒತ್ತಾಯಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಇಂದೋರ್ ಮುನ್ಸಿಪಲ್ ಕಾರ್ಪೋರೇಷನ್‌ನ ಹೆಚ್ಚುವರಿ ಆಯುಕ್ತ ಅಭಯ್ ರಾಜಂಗಾಂವ್ಕರ್, "ನಾವು ಮನೆಯಿಲ್ಲದವರಿಗಾಗಿ ಆಶ್ರಯ ಮನೆಗಳನ್ನು ಸ್ಥಾಪಿಸಿದ್ದೇವೆ. ಆದರೆ ಈ ವೃದ್ಧರನ್ನು ಅಲ್ಲಿಗೆ ಏಕೆ ಕಳುಹಿಸಲಾಗಿಲ್ಲ ಎಂಬ ಬಗ್ಗೆ ತನಿಖೆ ನಡೆಸುತ್ತೇವೆ. ಈ ಸಂಬಂಧ ಇಬ್ಬರು ಗುತ್ತಿಗೆ ನೌಕರರನ್ನು ವಜಾ ಮಾಡಿದ್ದೇವೆ. ಸಿಎಂ ಚೌಹಾಣ್ ಇಂದೋರ್ ಮಹಾನಗರ ಪಾಲಿಕೆಯ ಉಪ ಆಯುಕ್ತರನ್ನು ಅಮಾನತುಗೊಳಿಸಿದ್ದಾರೆ. ಆಘಾತಕಾರಿ ಘಟನೆಯ ಬಗ್ಗೆ ಅವರೂ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ" ಎಂದರು.