ಕರ್ನಾಟಕ

karnataka

ETV Bharat / bharat

ಕೈ ಹಿಡಿದು ನಡೆಸಿದ ಅಪ್ಪನನ್ನೇ ಬರ್ಬರವಾಗಿ ಕೊಂದ ಅಣ್ಣ - ತಮ್ಮಂದಿರು! - ಪೂರ್ವ ಗೋದಾವರಿ ಅಪರಾಧ ಸುದ್ದಿ

ಕೈ ಹಿಡಿದು ನಡೆಸಿದ ಅಪ್ಪನನ್ನೇ ಮಕ್ಕಳಿಬ್ಬರು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಆಂಧ್ರಪ್ರದೇಶದ ಜನತೆಯನ್ನು ಬೆಚ್ಚಿ ಬೀಳಿಸಿದೆ.

ಸಾಂದರ್ಭಿಕ ಚಿತ್ರ

By

Published : Oct 3, 2019, 12:11 PM IST

ಪೂರ್ವ ಗೋದಾವರಿ:ಚಿಕ್ಕವಯಸ್ಸಿನಲ್ಲಿ ಕೈ ಹಿಡಿದು ನಡೆಯಲು ಕಲಿಸಿಕೊಟ್ಟು, ಕಷ್ಟ ತಿಳಿಯಲಾರದೇ ಬೆಳಸಿ ದೊಡ್ಡವರನ್ನಾಗಿಸಿದ ತಂದೆಯನ್ನೇ ಸಹೋದರರಿಬ್ಬರು ಸೇರಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಚಿಂತೂರು ತಾಲೂಕಿನಲ್ಲಿ ನಡೆದಿದೆ.

ಇಲ್ಲಿನ ದೊಂಡಗೂಡೆಂ ಗಿರಿಜನ ಗ್ರಾಮದಲ್ಲಿ ಮಂಗಳವಾರ ಸಂಜೆ ಈ ಘಟನೆ ನಡೆದಿದೆ. ಮಡಿವಿ ಬುಚ್ಚಯ್ಯ (48) ತನ್ನ ಇಬ್ಬರು ಮಕ್ಕಳಾದ ಸೋಮಯ್ಯ ಮತ್ತು ಸನ್ಯಾಸಿರಾವ್​ ಜೊತೆ ವಾಸಿಸುತ್ತಿದ್ದರು. ಕಳೆದ ಒಂದು ತಿಂಗಳಿನಿಂದ ತಂದೆ ಮತ್ತು ಮಕ್ಕಳ ಮಧ್ಯ ಆಸ್ತಿ ಕಲಹಕ್ಕೆ ಸಂಬಂಧಿಸಿದ ವಿವಾದ ನಡೆಯುತ್ತಿದೆ.

ಮಂಗಳವಾರ ಸಂಜೆ ಈ ಕಲಹ ತೀವ್ರಗೊಂಡಿದೆ. ನಾವು ಹೇಳಿದ ಮಾತಿಗೆ ಅಂಗಕರೀಸುತ್ತಿಲ್ಲ ಎಂದು ಸಿಟ್ಟಿಗೆದ್ದ ಮಕ್ಕಳು, ತಂದೆಯ ಕೊಲೆ ಮಾಡಲು ನಿರ್ಧಾರ ತೆಗೆದುಕೊಂಡಿದ್ದರು. ಅದರಂತೆ ಮಗ ಸನ್ಯಾಸಿರಾವ್​, ತಂದೆ ಕಾಲುಗಳನ್ನು ಹಿಡಿದಿದ್ದಾನೆ. ಈ ವೇಳೆ ತಂದೆ ಬುಚ್ಚಯ್ಯ ಬೆನ್ನಿಗೆ ಇನ್ನೊಬ್ಬ ಮಗ ಸೋಮಯ್ಯ ಕೊಡಲಿಯಿಂದ ಹೊಡೆದಿದ್ದಾನೆ. ಬಳಿಕ ಮನಬಂದಂತೆ ಕೊಚ್ಚಿದ್ದಾನೆ. ಇಷ್ಟಾದ ಬಳಿಕ ನೇರ ಪೊಲೀಸ್​ ಠಾಣೆಗೆ ತೆರಳಿ ಶರಣಾಗಿದ್ದಾನೆ.

ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ABOUT THE AUTHOR

...view details