ನವದೆಹಲಿ: ಮುಂಬರುವ ಲೋಕಸಭಾ ಫೈಟ್ಗಾಗಿ ಕಾಂಗ್ರೆಸ್ ರಿಲೀಸ್ ಮಾಡಿರುವ ಚುನಾವಣಾ ಪ್ರಣಾಳಿಕೆ ವಿರುದ್ಧ ಸೋನಿಯಾ ಗಾಂಧಿ ಕೋಪ ಗೊಂಡಿದ್ದಾರೆ. ಪುಸ್ತಕದ ಮುಖಪುಟಕ್ಕಾಗಿ ಬಳಿಕೆ ಮಾಡಿರುವ ಕಲರ್ ಸರಿಯಿಲ್ಲ ಎಂಬುದು ಅವರ ವಾದವಾಗಿದೆ.
ಕೈ ಪ್ರಣಾಳಿಕೆ ವಿರುದ್ಧವೇ ಸೋನಿಯಾ ಅಸಮಾಧಾನ ಸ್ಫೋಟ? - ಸೋನಿಯಾ ಗಾಂಧಿ
ಕಾಂಗ್ರೆಸ್ ಪ್ರಣಾಳಿಕೆ ವಿರುದ್ಧ ಸೋನಿಯಾ ಗಾಂಧಿ ಅಸಮಾಧಾನಗೊಂಡಿದ್ದು, ಪ್ರಣಾಳಿಕೆಯ ಮುಖಪುಟದ ವಿನ್ಯಾಸದ ಕುರಿತು ಗರಂ ಆಗಿದ್ದಾರೆಂದು ತಿಳಿದು ಬಂದಿದೆ.
ಸೋನಿಯಾ ಗಾಂಧಿ ಅಸಮಾಧಾನ
ಇದರ ಜತೆಗೆ ಪ್ರಣಾಳಿಕೆಯ ಮುಖಪುಟದ ವಿನ್ಯಾಸ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭಾವಚಿತ್ರ ಸಣ್ಣದಾಗಿ ಪ್ರಕಟಗೊಂಡಿದ್ದು, ಪಕ್ಷದ ಚಿಹ್ನೆ ಕೂಡ ಸರಿಯಾಗಿ ಮುದ್ರಣಗೊಂಡಿಲ್ಲ ಎಂಬ ಕಾರಣ ಅವರ ಅಸಮಾಧಾನಕ್ಕೆ ಕಾರಣವಾಗಿದೆ.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಎಐಸಿಸಿ ಸಂಶೋಧನಾ ತಂಡದ ಮುಖ್ಯಸ್ಥ ರಾಜೀವ ಗೌಡ ಸಮರ್ಥನೆ ನೀಡಿದ್ದು, ಯಾವುದೇ ಅಸಮಧಾನವಿಲ್ಲ ಎಂಬ ಮಾತು ಹೇಳಿದ್ದಾರೆ. ಕಳೆದ ಮಂಗಳವಾರ ಕಾಂಗ್ರೆಸ್ ತನ್ನ ಪ್ರಣಾಳಿಕೆ ರಿಲೀಸ್ ಮಾಡಿತ್ತು. ಈ ವೇಳೆ ಸೋನಿಯಾ ಕೋಪಗೊಂಡಿರುವ ಹಾಗೇ ಕಂಡು ಬಂದಿತ್ತು. ಜತೆಗೆ ಅವರು ಯಾರ ಜತೆ ಕೂಡ ಮಾತನಾಡಿರಲಿಲ್ವಂತೆ.