ನವದೆಹಲಿ: ಜಿಎಸ್‌ಟಿ ಕೌನ್ಸಿಲ್ ಸಭೆಗೆ ಒಂದು ದಿನ ಮೊದಲು ಚರ್ಚೆ ನಡೆಸಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಏಪ್ರಿಲ್ - ಮೇ ತಿಂಗಳ ಜಿಎಸ್‌ಟಿ ಪರಿಹಾರದ ಬಾಕಿ ಮೊತ್ತ ನೀಡದ ಮೋದಿ ಸರ್ಕಾರವನ್ನು ಮೂಲೆಗುಂಪು ಮಾಡುವಂತೆ ಬಿಜೆಪಿ ಏತರ ರಾಜ್ಯಗಳಿಗೆ ಕರೆ ನೀಡಿದ್ದಾರೆ
ಜಿಎಸ್‌ಟಿ ಪರಿಹಾರ ನೀಡದ ಮೋದಿ ಸರ್ಕಾರವನ್ನು ಮೂಲೆಗುಂಪು ಮಾಡಿ: ಸೋನಿಯಾ ಕರೆ - ಮೋದಿ ಸರ್ಕಾರವನ್ನು ಮೂಲೆಗುಂಪು ಮಾಡಿ
ಏಪ್ರಿಲ್ - ಮೇ ತಿಂಗಳ ಜಿಎಸ್‌ಟಿ ಪರಿಹಾರದ ಬಾಕಿ ಮೊತ್ತ ನೀಡದ ಮೋದಿ ಸರ್ಕಾರವನ್ನು ಮೂಲೆಗುಂಪು ಮಾಡುವಂತೆ ಬಿಜೆಪಿಯೇತರ ರಾಜ್ಯಗಳಿಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕರೆನೀಡಿದ್ದಾರೆ.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ಪ್ರತಿಪಕ್ಷಗಳ ಆಡಳಿತ ಇರುವ ಏಳು ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಬುಧವಾರ ಸೋನಿಯಾ ಗಾಂಧಿ ವರ್ಚುವಲ್ ಸಭೆ ನಡೆಸಿದರು. ಸಭಯಲ್ಲಿ ಸೋನಿಯಾ ಅವರ ಆಕ್ರಮಣಕಾರಿ ನಿಲುವು ಜಿಎಸ್‌ಟಿ ಸೆಸ್ ದರಗಳನ್ನು ಹೆಚ್ಚಿಸಲು ರಾಜ್ಯಗಳ ಬೆಂಬಲವನ್ನು ಪಡೆಯುವ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರ ಪ್ರಯತ್ನ ಹಳಿ ತಪ್ಪಿಸಬಹುದು.
ರಾಜ್ಯಗಳಿಗೆ ಪರಿಹಾರ ನೀಡಲು ನಿರಾಕರಿಸುವುದು ಮೋದಿ ಸರ್ಕಾರ ಮಾಡಿದ ದ್ರೋಹವಾಗಿದೆ. ಅಷ್ಟೇ ಅಲ್ಲ ಅದು ಭಾರತದ ಜನರ ನಂಬಿಕೆಗೆ ಮಾಡಿದ ದ್ರೋಹವಾಗಿದೆ ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ. ದೊಡ್ಡ ರಾಷ್ಟ್ರೀಯ ಹಿತಾಸಕ್ತಿಗಾಗಿ ಮತ್ತು ಒಂದು ಅವಧಿಗೆ ಕಡ್ಡಾಯ ಜಿಎಸ್‌ಟಿ ಪರಿಹಾರದ ಭರವಸೆಯ ಮೇರೆಗೆ ರಾಜ್ಯಗಳು ತಮ್ಮ ಸಾಂವಿಧಾನಿಕ ಅಧಿಕಾರವನ್ನು ತ್ಯಜಿಸಲು ಒಪ್ಪಿಕೊಂಡಿದ್ದವು. ಹೀಗಾಗಿಯೇ ರಾಷ್ಟ್ರವ್ಯಾಪಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಅಸ್ತಿತ್ವಕ್ಕೆ ಬಂದಿತು ಎಂದಿದ್ದಾರೆ.