ನವದೆಹಲಿ: ರಾಷ್ಟ್ರಪಿತ ಮಹಾತ್ಮ ಗಾಂಧಿಯವರ 72ನೇ ಪುಣ್ಯ ಸ್ಮರಣೆ ಅಂಗವಾಗಿ ದೆಹಲಿಯ ರಾಜಘಾಟ್ನಲ್ಲಿರುವ ಗಾಂಧಿ ಸಮಾಧಿಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ ಭೇಟಿ ನೀಡಿದ್ದು, ಬಾಪುವಿಗೆ ನಮನ ಸಲ್ಲಿಸಿದ್ದಾರೆ.
ರಾಷ್ಟ್ರಪಿತನ 72ನೇ ಪುಣ್ಯ ಸ್ಮರಣೆ: ರಾಜಘಾಟ್ನಲ್ಲಿ ಬಾಪುವಿಗೆ ನಮನ ಸಲ್ಲಿಸಿದ ಗಣ್ಯರು - ರಾಜಘಾಟ್ನಲ್ಲಿ ಬಾಪುವಿಗೆ ನಮನ ಸಲ್ಲಿಸಿದ ಸೋನಿಯಾ
ರಾಷ್ಟ್ರಪಿತ ಮಹಾತ್ಮ ಗಾಂಧಿ ಮೃತಪಟ್ಟು ಇಂದಿಗೆ 72 ವರ್ಷಗಳು ಸಂದಿದ್ದು, 72ನೇ ಪುಣ್ಯ ಸ್ಮರಣೆ ಅಂಗವಾಗಿ ದೆಹಲಿಯ ರಾಜಘಾಟ್ನಲ್ಲಿರುವ ಗಾಂಧಿ ಸಮಾಧಿಗೆ ಕಾಂಗ್ರೆಸ್ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ ಭೇಟಿ ನೀಡಿ ನಮನ ಸಲ್ಲಿಸಿದ್ದಾರೆ.
ಇನ್ನು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಭಾರತೀಯ ಸೇನಾಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಭೂಸೇನಾ ಮುಖ್ಯಸ್ಥ ಜನರಲ್ ನರವನೆ, ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್, ವಾಯುಪಡೆಯ ಮುಖ್ಯಸ್ಥ ಏರ್ ಮಾರ್ಷಲ್ ಆರ್ ಕೆ ಎಸ್ ಭದೌರಿಯಾ ಕೂಡ ರಾಜಘಾಟ್ಗೆ ಭೇಟಿ ನೀಡಿ ನಮನ ಸಲ್ಲಿಸಿದ್ದಾರೆ.
1948 ರ ಜನವರಿ 30 ರಂದು ನಾಥುರಾಮ್ ವಿನಾಯಕ್ ಗೋಡ್ಸೆ, ಗಾಂಧೀಜಿಯನ್ನು ಹತ್ಯೆ ಮಾಡಿ, ಬಳಿಕ ದೇಶದ ವಿಭಜನೆಗೆ ಮಹಾತ್ಮ ಗಾಂಧಿ ಕಾರಣ ಎಂದು ಗೋಡ್ಸೆ ಆರೋಪಿಸಿದ್ದನು. ಗಾಂಧಿ ಮೃತಪಟ್ಟು ಇಂದಿಗೆ 72 ವರ್ಷಗಳು ಸಂದಿದ್ದು, ಮಹಾತ್ಮ ಗಾಂಧಿ ಪುಣ್ಯ ಸ್ಮರಣೆ ಹಾಗೂ ಹುತಾತ್ಮರ ದಿನಾಚರಣೆಯ ಅಂಗವಾಗಿ, ರಾಜಘಾಟ್ನ ಗಾಂಧಿ ಸಮಾಧಿ ಬಳಿ ಇಂದು 'ಸರ್ವ ಧರ್ಮ ಪ್ರಾರ್ಥನೆ' ನಡೆಯಲಿದೆ.