ನವದೆಹಲಿ:ವಿವಿಧ ರಾಜ್ಯಗಳಲ್ಲಿ ಉಳಿದುಕೊಂಡಿದ್ದ ವಲಸೆ ಕಾರ್ಮಿಕರು ಇದೀಗ ರೈಲುಗಳ ಮೂಲಕ ತವರು ರಾಜ್ಯ ಸೇರಿಕೊಳ್ತಿದ್ದಾರೆ. ಇದೇ ವಿಷಯವನ್ನಿಟ್ಟುಕೊಂಡು ಕೆಲವರು ರಾಜಕೀಯ ಮಾಡ್ತಿದ್ದು, ಅಂತಹ ಪ್ರಕರಣವೊಂದು ಪಂಜಾಬ್ನಲ್ಲಿ ನಡೆದಿದೆ.
ವಲಸೆ ಕಾರ್ಮಿಕರು ಪ್ರಯಾಣಿಸುತ್ತಿದ್ದ ರೈಲಿನಲ್ಲಿ ಅನೇಕ ಕರಪತ್ರ ಸಿಕ್ಕಿದ್ದು, ಅದರಲ್ಲಿ ನಿಮ್ಮ ಟಿಕೆಟ್ ಹಣ ನೀಡಿದ್ದು ಸೋನಿಯಾ ಗಾಂಧಿ ಎಂದು ಬರೆಯಲಾಗಿದೆ. ಪಂಜಾಬ್ನಲ್ಲಿ ಕಾಂಗ್ರೆಸ್ ಸರ್ಕಾರವಿದೆ. ಅಲ್ಲಿನ ಶಾಸಕ ಅಮರೀಂದರ್ ರಾಜ್ ಈ ಕರಪತ್ರ ಹಂಚಿಕೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.