ಕರ್ನಾಟಕ

karnataka

ETV Bharat / bharat

ಕೇಂದ್ರ ಕೃಷಿ ಮಸೂದೆ ವಿರುದ್ಧ ಕಾಯ್ದೆ ರಚಿಸಲು 'ಕೈ'​​ ಆಡಳಿತ ರಾಜ್ಯಗಳಿಗೆ ಸೋನಿಯಾ ಸೂಚನೆ

ಕೇಂದ್ರ ಸರ್ಕಾರ ಜಾರಿಗೊಳಿಸಲು ನಿರ್ಧರಿಸಿರುವ ಕೃಷಿ ಮಸೂದೆಗಳಿಗೆ ಕಾಂಗ್ರೆಸ್​ ವಿರೋಧ ವ್ಯಕ್ತಪಡಿಸುತ್ತಿದ್ದು, ಇದೀಗ ಕಾಂಗ್ರೆಸ್​ ಆಡಳಿತವಿರುವ ರಾಜ್ಯಗಳಿಗೆ ಸೋನಿಯಾ ಗಾಂಧಿ ವಿಶೇಷ ಸೂಚನೆ ನೀಡಿದ್ದಾರೆ.

Sonia Gandhi
Sonia Gandhi

By

Published : Sep 28, 2020, 9:18 PM IST

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೊಳಿಸಲು ನಿರ್ಧರಿಸಿರುವ ಕೃಷಿ ಮಸೂದೆಗಳಿಗೆ ಈಗಾಗಲೇ ಕೆಲವೊಂದು ರಾಜ್ಯಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ಇದೇ ವಿಚಾರವಾಗಿ ಇದೀಗ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಕಾಂಗ್ರೆಸ್​ ಆಡಳಿತ ರಾಜ್ಯಗಳಿಗೆ ಮಹತ್ವದ ಸೂಚನೆ ನೀಡಿದ್ದಾರೆ.

ಕೇಂದ್ರ ಸರ್ಕಾರದ ಮೂರು ಕೃಷಿ ಕಾಯಿದೆಗಳ ವಿರುದ್ಧವಾಗಿ ಪ್ರತ್ಯೇಕವಾದ ಕಾಯ್ದೆ ಜಾರಿಗೊಳಿಸುವಂತೆ ಅವರು ಕರೆ ನೀಡಿದ್ದು, ಅದಕ್ಕಾಗಿ ಸಂವಿಧಾನದ ಆರ್ಟಿಕಲ್​​ 254(2)ರ ಅಡಿಯಲ್ಲಿ ಕಾನೂನು ಮಾರ್ಗ ಕಂಡುಕೊಳ್ಳಲು ಸೂಚಿಸಿದ್ದಾರೆ.

ಇದರ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್​ ಮುಖಂಡ ಕೆ.ಸಿ ವೇಣುಗೋಪಾಲ್​, ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ಕೃಷಿ ಮಸೂದೆಗಳ ವಿರುದ್ಧ ನಿರ್ಬಂಧ ಹೇರುವ ಕಾನೂನು ಮಾರ್ಗ ಕಂಡುಕೊಳ್ಳುವಂತೆ ಹೇಳಿದ್ದಾರೆ ಎಂದು ಟ್ವೀಟ್​ ಮಾಡಿದ್ದಾರೆ.

ಕನಿಷ್ಠ ಬೆಂಬಲ ಬೆಲೆ ರದ್ಧತಿಯಂತಹ ರೈತ ವಿರೋಧಿ ನೀತಿಗಳು ಈ ಕೃಷಿ ಮಸೂದೆಗಳಲ್ಲಿದ್ದು, ಇದರ ವಿರುದ್ಧ ಹೋರಾಟ ಅಗತ್ಯವಾಗಿದೆ ಎಂದು ಸೋನಿಯಾ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಕೇಂದ್ರದ ಕೃಷಿ ಮಸೂದೆಗಳ ವಿರುದ್ಧ ಈಗಾಗಲೇ ಪಂಜಾಬ್​, ಹರಿಯಾಣದಲ್ಲಿ ವ್ಯಾಪಕ ಪ್ರತಿಭಟನೆ ನಡೆಯುತ್ತಿದ್ದು, ಕರ್ನಾಟಕದ ಕೆಲ ಭಾಗಗಳಲ್ಲೂ ಇದಕ್ಕೆ ಟೀಕೆ ವ್ಯಕ್ತವಾಗುತ್ತಿದೆ.

ABOUT THE AUTHOR

...view details