ಕರ್ನಾಟಕ

karnataka

ETV Bharat / bharat

ಅನ್ಯಾಯ-ಅಹಂ ವಿರುದ್ಧದ ಗೆಲುವಿನ ಸಂಕೇತವೇ ವಿಜಯದಶಮಿ.. ಸೋನಿಯಾ ಗಾಂಧಿ - ವಿಜಯದಶಮಿಗೆ ಶುಭ ಹಾರೈಸಿದ ಸೋನಿಯಾ ಗಾಂಧಿ

ಈ ದಸರಾ ಎಲ್ಲರ ಜೀವನದಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ತರುತ್ತದೆ ಮಾತ್ರವಲ್ಲದೆ, ಜನರಲ್ಲಿ ಸಾಮರಸ್ಯ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಬಲಪಡಿಸುತ್ತದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಆಶಿಸಿದ್ದಾರೆ..

sonia-
ಸೋನಿಯಾ ಗಾಂಧಿ

By

Published : Oct 25, 2020, 7:48 PM IST

ನವದೆಹಲಿ:ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಿಜಯದಶಮಿಯ ಪ್ರಯುಕ್ತ ದೇಶದ ಜನತೆಗೆ ಶುಭಾಶಯ ಕೋರಿದ್ದು, ಒಂಬತ್ತು ದಿನಗಳ ಪೂಜಾ ಉತ್ಸವವು ಅನ್ಯಾಯ ಮತ್ತು ಅಹಂ ವಿರುದ್ಧದ ಗೆಲುವಿನ ಸಂಕೇತವಾಗಿದೆ ಎಂದು ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ ಅವರು, ವಿಜಯ ದಶಮಿಯ ಅತಿದೊಡ್ಡ ಸಂದೇಶವೆಂದರೆ, ಜನರು ಆಡಳಿತದಲ್ಲಿ ಅತ್ಯುನ್ನತ ಸ್ಥಾನದಲ್ಲಿದ್ದು, ಆಡಳಿತಗಾರನು ತಮ್ಮ ಜೀವನದಲ್ಲಿ ದುರಹಂಕಾರ, ಸುಳ್ಳಿನ ಮೂಲಕ ಭರವಸೆಗಳನ್ನು ಮುರಿಯಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಈ ದಸರಾ ಎಲ್ಲರ ಜೀವನದಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ತರುತ್ತದೆ ಮಾತ್ರವಲ್ಲದೆ, ಜನರಲ್ಲಿ ಸಾಮರಸ್ಯ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಬಲಪಡಿಸುತ್ತದೆ ಎಂದು ಆಶಿಸಿದರು.

ಹಬ್ಬಗಳ ಸಮಯದಲ್ಲಿ ಕೊರೊನಾ ವೈರಸ್​ನಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಮತ್ತು ಎಲ್ಲಾ ಕೋವಿಡ್​-19 ಮಾರ್ಗಸೂಚಿಗಳನ್ನು ಅನುಸರಿಸುವಂತೆ ಜನರಿಗೆ ಮನವಿ ಮಾಡಿದರು.

ABOUT THE AUTHOR

...view details