ಕರ್ನಾಟಕ

karnataka

ETV Bharat / bharat

ಅಪಾರ್ಟ್​ಮೆಂಟ್​ನಲ್ಲಿ ಆಶ್ರಯ ಪಡೆದ ನಾಯಿ ಕೊಂದ ವಿಡಿಯೋ ವೈರಲ್​.. ನಟಿ ಸೋನಂ ಕಪೂರ್​ ಮಾಡಿದ್ದೇನು? - ಅಪಾರ್ಟ್​ಮೆಂಟ್​ನಲ್ಲಿ ನಾಯಿ ಹತ್ಯೆ

ಭಾರಿ ಮಳೆಯಿಂದಾಗಿ ಅಪಾರ್ಟ್​ಮೆಂಟ್​ವೊಂದರಲ್ಲಿ ಆಶ್ರಯ ಪಡೆದಿದ್ದ ಬೀದಿನಾಯಿಗೆ ಮನಬಂದಂತೆ ಥಳಿಸಿ ಕೊಂದಿರುವ ಅಮಾನುಷ ಘಟನೆಯೊಂದನ್ನು ನಟಿ ಸೋನಂ ಕಪೂರ್​ ಅವರು ಇನ್​ಸ್ಟಾಗ್ರಾಂ ಖಾತೆ ಮೂಲಕ ತಮ್ಮ ಹಿಂಬಾಲಕರ ಗಮಕ್ಕೆ ತಂದಿದ್ದು, ಜನರ ವರ್ತನೆಯ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.

ಮುಂಬೈನಲ್ಲಿ ಶ್ವಾನದ ಮೇಲಾದ ಕ್ರೌರ್ಯ ವರದಿ ಮಾಡಿದ ಸೋನಮ್​...ಅನಿಮಲ್​ ರೈಟ್ಸ್​​ನಿಂದ ಪ್ರತಿಭಟನಾ ಕರೆ

By

Published : Jul 29, 2019, 10:34 AM IST

ಮುಂಬೈ:ಭಾರಿಮಳೆಯಿಂದಾಗಿ ಅಪಾರ್ಟ್​ಮೆಂಟ್​ವೊಂದರಲ್ಲಿ ಆಶ್ರಯ ಪಡೆದಿದ್ದ ಬೀದಿನಾಯಿಗೆ ಮನಬಂದಂತೆ ಥಳಿಸಿ ಕೊಂದಿರುವ ಅಮಾನುಷ ಘಟನೆಯೊಂದನ್ನು ನಟಿ ಸೋನಂ ಕಪೂರ್​ ಅವರು ಇನ್​ಸ್ಟಾಗ್ರಾಂ ಖಾತೆ ಮೂಲಕ ತಮ್ಮ ಹಿಂಬಾಲಕರ ಗಮಕ್ಕೆ ತಂದಿದ್ದು, ಜನರ ವರ್ತನೆಯ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.

ಬಾಂಬೆ ಪ್ರಾಣಿ ದಯಾ ಸಂಘವು ದೂರು ನೀಡಿದ್ದು ವರ್ಲಿಯಲ್ಲಿ ನಡೆದ ಈ ಘಟನೆ ಬಗ್ಗೆ ಪೊಲೀಸ್​ ಠಾಣೆಯಲ್ಲಿ ಎಫ್​ಐಆರ್ ದಾಕಲಾಗಿದೆ. ಈ ಸಂಘಟನೆಗೆ ಸೋನಂ ಕಪೂರ್​ ಅವರು ಸದಸ್ಯರೂ ಆಗಿದ್ದಾರೆ. ದಯವಿಟ್ಟು ಸಹಾಯ ಮಾಡಿ ಈ ಬಗ್ಗೆ ದೂರು ನೀಡಿದ್ದೇವೆ ಪೊಲೀಸರು ಈಗ ನಮ್ಮ ಕರೆ ಸ್ವೀಕರಿಸುತ್ತಿಲ್ಲ, ನಮ್ಮ ಪ್ರಯತ್ನಕ್ಕೆ ನಿಮ್ಮ ನೆರವು ಬೇಕು ಎಂದು ಪೋಸ್ಟ್​ ಹಾಕಿದ್ದಾರೆ.

ಘಟನೆಯ ವಿವರ: ಜುಲೈ 24ರಂದು ವರ್ಲಿಯ ನೆಹರು ಪ್ಲಾನೆಟೇರಿಯಂನ ವಿಟೆಸ್ಸೆ ಶೋ ರೂಂ ಪಕ್ಕದಲ್ಲಿರುವ ಟರ್ಫ್​ ವ್ಯೂ ಕಟ್ಟಡದ ಎರಡನೇ ಮಹಡಿಯ ನಿವಾಸಿ ಭಾಟಿಯ ತಮ್ಮ ಕಟ್ಟದಲ್ಲಿ ಭಾರೀ ಮಳೆಯಿಂದಾಗಿ ಆಶ್ರಯ ಪಡೆದಿದ್ದ ಶ್ವಾನಕ್ಕೆ ಹೊಡಿಯುವಂತೆ ಆತನ ಮನೆಯ ವಾಚ್​ಮನ್​ಗೆ ತಿಳಿಸಿದ್ದು, ಆತನ ಸೂಚನೆಯ ಮೇರೆಗೆ ವಾಚ್​ಮನ್​ ಶ್ವಾನದ ಮೇಲೆ ಕ್ರೌರ್ಯ ಮೆರೆದಿದ್ದ.

ಈ ಘಟನೆಯ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆದ ಬಳಿಕ ಬಾಂಬೆ ಅನಿಮಲ್​ ರೈಟ್ಸ್​ ಜುಲೈ 27ರಂದು ಸೆಕ್ಷನ್​ 429 ಮತ್ತು 34ರ ಅಡಿಯಲ್ಲಿ ಭಾಟಿಯಾ ಹಾಗೂ ಕಟ್ಟಡದ ಭದ್ರತಾ ಸಿಬ್ಬಂದಿ ವಿರುದ್ಧ ವರ್ಲಿ ಪೊಲೀಸ್​ ಠಾಣೆಯಲ್ಲಿ ಎಫ್​ಐಆರ್​ ದಾಖಲಿಸಿದ್ದರು. ಆದರೆ ಇಬ್ಬರು ಆರೋಪಿಗಳು ಜಾಮೀನಿನ ಮೇಲೆ ಹೊರಬಂದಿದ್ದು,ಇವರ ಮೇಲೆ ಯಾವುದೇ ಕ್ರಮ ಜರುಗಿಸಿಲ್ಲ ಹೀಗಾಗಿ ಅನಿಮಲ್​ ರೈಟ್ ಪ್ರತಿಭಟನೆಗೆ ಮುಂದಾಗಿದೆ. ಈ ಕ್ರೌರ್ಯವನ್ನ ವಿರೋಧಿಸಿ ಪ್ರತಿಭಟನೆ ನಡೆಸಲು ಮಂಗಳವಾರ ಟರ್ಫ್​ ಕಟ್ಟಡದ ಹತ್ತಿರ ಸೇರುವಂತೆ ಬಾಂಬೆ ಅನಿಮಲ್​ ರೈಟ್​ ಗುಂಪು ಪ್ರತಿಭಟನಾ ಕರೆ ನೀಡಿದೆ. ಈ ಘಟನೆಯನ್ನ ಬಾಲಿವುಡ್ ನಟ ಜಾನ್​ ಅಬ್ರಹಾಂ ಮತ್ತು ಅನುಷ್ಕಾ ಶರ್ಮಾ ಕೂಡ ತೀವ್ರವಾಗಿ ಖಂಡಿಸಿದ್ದಾರೆ.

ABOUT THE AUTHOR

...view details