ಮೀರತ್ (ಉತ್ತರ ಪ್ರದೇಶ):ಚೀನಾ ಮೂಲದ ಮೊಬೈಲ್ ಗೇಮ್ ಪಬ್ಜಿ ಆಡಬಾರದು ಎಂದು ಹೇಳಿದ್ದಕ್ಕೆ ತಂದೆಯ ಕುತ್ತಿಗೆ ಮೇಲೆ ಹಲ್ಲೆ ಮಾಡಿ ನಂತರ ತನ್ನ ಕುತ್ತಿಗೆ ಸೀಳಿಕೊಂಡಿರುವ ಘಟನೆ ಉತ್ತರ ಪ್ರದೇಶದ ಮೀರತ್ನಲ್ಲಿ ನಡೆದಿದೆ.
ಖಾರ್ಖೋಡಾ ಪಟ್ಟಣದ ಜಮ್ನಾಗರದಲ್ಲಿ ಘಟನೆ ಗುರುವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಆರೋಪಿಯನ್ನು ಆಮೀರ್ ಎಂದು ಗುರುತಿಸಲಾಗಿದೆ. ಸದ್ಯಕ್ಕೆ ತಂದೆ ಹಾಗೂ ಮಗನನ್ನು ಮೀರತ್ ವೈದ್ಯಕೀಯ ಕಾಲೇಜಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಇಬ್ಬರ ಸ್ಥಿತಿಯೂ ಗಂಭೀರವಾಗಿದೆ.