ಘಾಜಿಯಾಬಾದ್(ಉತ್ತರ ಪ್ರದೇಶ):ಲಾಕ್ ಡೌನ್ ಪರಿಣಾಮ ತುರ್ತು ಕೆಲಸಗಳನ್ನು ಮಾಡಿಕೊಳ್ಳಲು ಕೂಡಾ ಜನರು ತೀವ್ರ ಸ್ವರೂಪದ ಕಷ್ಟ ಅನುಭವಿಸುತ್ತಿದ್ದಾರೆ. ಇದಕ್ಕೆ ಇಲ್ಲೊಂದು ನಿದರ್ಶನವಿದೆ. ತಂದೆ ಮೃತಪಟ್ಟರೂ ಅಲ್ಲಿಗೆ ಹೋಗಿ ಅಂತ್ಯಕ್ರಿಯೆ ಮುಗಿಸಲು ಸಾಧ್ಯವಾಗದ ಮಗ ವಿಡಿಯೋ ಕರೆ ಮೂಲಕವೇ ತಂದೆಯನ್ನು ಬೀಳ್ಕೊಟ್ಟ.
ವಿಡಿಯೋ ಕರೆ ಮೂಲಕ ತಂದೆಯ ಅಂತ್ಯಸಂಸ್ಕಾರ ನೋಡಿ ಕಣ್ಣೀರು ಹಾಕುತ್ತಿದ್ದ! - ಘಾಜಿಯಾಬಾದ್
ಕಳೆದ ಕೆಲ ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿ ಬಿಜ್ನೋರ್ನಲ್ಲಿ ಸಾವನ್ನಪ್ಪಿದ್ದರು. ಆದ್ರೆ, ಆತನ ಮಗ ಮನೆಯಿಂದ ಸಾಕಷ್ಟು ದೂರವಿರುವ ಸಾಹಿಬಾಬಾದ್ನಲ್ಲಿ ವಾಸವಾಗಿದ್ದಾನೆ. ತಂದೆಯ ಮರಣ ಹೊಂದಿದ ಸುದ್ದಿ ತಿಳಿದ ಮಗನಿಗೆ ಮನೆಗೆ ಹೋಗಲು ಸಾಕಷ್ಟು ತೊಂದರೆ ಉಂಟಾಗಿತ್ತು. ಅಂತಿಮವಾಗಿ ಆತ ವಿಡಿಯೋ ಕರೆ ಮೂಲಕವೇ ತಂದೆಯ ಇಹಲೋಕದ ಅಂತಿಮ ಪಯಣವನ್ನು ನೋಡುತ್ತಾ ಕಣ್ಣೀರು ಹಾಕುತ್ತಿದ್ದ.
ಕಳೆದ ಕೆಲ ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿ ಬಿಜ್ನೋರ್ನಲ್ಲಿ ಸಾವನ್ನಪ್ಪಿದ್ದರು. ಆದ್ರೆ, ಆತನ ಮಗ ಮನೆಯಿಂದ ಸಾಕಷ್ಟು ದೂರವಿರುವ ಸಾಹಿಬಾಬಾದ್ನಲ್ಲಿ ವಾಸವಾಗಿದ್ದಾನೆ. ತಂದೆಯ ಮರಣ ಹೊಂದಿದ ಸುದ್ದಿ ತಿಳಿದ ಮಗನಿಗೆ ಮನೆಗೆ ಹೋಗಲು ಸಾಕಷ್ಟು ತೊಂದರೆ ಉಂಟಾಗಿತ್ತು. ಅಂತಿಮವಾಗಿ ಆತ ವಿಡಿಯೋ ಕರೆ ಮೂಲಕವೇ ಅಂತ್ಯಸಂಸ್ಕಾರದ ವಿಧಿವಿಧಾನಗಳನ್ನು ವೀಕ್ಷಿಸಿದ್ದಾನೆ.
ತಂದೆ ಜತೆ ವಾಸವಾಗಿದ್ದ ಇನ್ನೊಬ್ಬ ಕಿರಿ ಮಗ ಅಲ್ಲಿದ್ದುಕೊಂಡು ಶವಸಂಸ್ಕಾರ ಮಾಡಿದ್ದಾನೆ. ಇದನ್ನು ಸಂಬಂಧಿಕರೊಬ್ಬರು ವಿಡಿಯೋ ಕರೆ ಮೂಲಕ ದೂರದಲ್ಲಿರುವ ಮಗನಿಗೆ ತೋರಿಸಿದ್ದಾರೆ.